ಗುರುವಾರ , ಆಗಸ್ಟ್ 5, 2021
21 °C

ಎಸ್ಸೆಸ್ಸೆಲ್ಸಿ ಭಾಷಾ ಪರೀಕ್ಷೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್ಸೆಸ್ಸೆಲ್ಸಿಯ ಭಾಷಾ ವಿಷಯಗಳ ಪರೀಕ್ಷೆಯು ಗುರುವಾರ ರಾಜ್ಯದಾದ್ಯಂತ 4,885 ಕೇಂದ್ರಗಳಲ್ಲಿ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಯು ಒಂದೇ ದಿನ ನಡೆಯಲಿದೆ.

ಪ್ರಥಮ ಭಾಷಾ ವಿಷಯಕ್ಕೆ 8.19 ಲಕ್ಷ, ದ್ವಿತೀಯ ಭಾಷೆಗೆ 8.27 ಲಕ್ಷ, ತೃತೀಯ ಭಾಷಾ ವಿಷಯ ಪರೀಕ್ಷೆಗೆ 8.17 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಮುಖ್ಯ ವಿಷಯಗಳಿಗೆ ಸೋಮವಾರ ನಡೆದ ಪರೀಕ್ಷೆಯಂತೆಯೇ ಭಾಷಾ ವಿಷಯದ ಪರೀಕ್ಷೆಗಳಿಗೂ ಒಂದೇ ಪ್ರಶ್ನೆ ಪತ್ರಿಕೆ ನೀಡಲಾಗಿರುತ್ತದೆ. ಅದರಲ್ಲಿ 1ರಿಂದ 40ರವರೆಗೆ ಪ್ರಥಮ, 41ರಿಂದ 80ರವರೆಗೆ ದ್ವಿತೀಯ ಮತ್ತು 81ರಿಂದ 120ರವರೆಗೆ ತೃತೀಯ ಭಾಷಾ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.

ಪ್ರತಿ ವಿಷಯದ ಪ್ರಶ್ನೆಗಳಿಗೂ ಉತ್ತರಿಸಲು ಪ್ರತ್ಯೇಕ ಬಣ್ಣದ ಒಎಂಆರ್ ಶೀಟ್‌ಗಳನ್ನು ನೀಡಲಾಗಿರುತ್ತದೆ. ಯಾವ ವಿಷಯಕ್ಕೆ ಯಾವ ಒಎಂಆರ್ ಎಂಬುದನ್ನು ಸರಿಯಾಗಿ ಪರಿಶೀಲಿಸಿಕೊಂಡು ಬಹು ಆಯ್ಕೆ ಪ್ರಶ್ನೆಗಳ ಮುಂದೆ ನೀಡಿರುವ ಸರಿಯಾದ ಉತ್ತರದ ಸಂಖ್ಯೆಯ ಮೇಲೆ ಒಎಂಆರ್ ಶೀಟ್‌ನಲ್ಲಿ ನಿಗದಿತ ರೀತಿಯಲ್ಲಿ ನೀಲಿ ಅಥವಾ ಕಪ್ಪು ಬಾಲ್‌ಪಾಯಿಂಟ್ ಪೆನ್‌ನಲ್ಲಿ ಗುರುತಿಸಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು