ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಶೇ 100ರಷ್ಟು ಬೋಧನಾ ಶುಲ್ಕ ನೀಡುವ ಸ್ಕಾಲರ್‌ಶಿಪ್ ಇದು

Published 11 ಮಾರ್ಚ್ 2024, 0:00 IST
Last Updated 11 ಮಾರ್ಚ್ 2024, 0:00 IST
ಅಕ್ಷರ ಗಾತ್ರ

ದಿ ಅನಂತ್ ಫೆಲೋಶಿಪ್  

ವಿವರ: ದಿ ಅನಂತ್ ಫೆಲೋಶಿಪ್ ಯಾವುದೇ ವಿಭಾಗದಲ್ಲಿ ಪದವಿಯನ್ನು ಕಲಿಯುತ್ತಿರುವವರಿಗೆ ಅನಂತ್‌ ನ್ಯಾಷನಲ್ ಯೂನಿವರ್ಸಿಟಿ (ಭಾರತದ ಮೊದಲ ಡಿಸೈನ್ ಎಕ್ಸ್ ವಿಶ್ವವಿದ್ಯಾಲಯ) ನೀಡುವ ಅವಕಾಶವಾಗಿದೆ.

ಅರ್ಹತೆ: ಪರಿಸರವನ್ನು ಸುಧಾರಿಸಲು ಬದ್ಧತೆಯನ್ನು ಹೊಂದಿರುವ, ಯಾವುದೇ ವಿಭಾಗದಲ್ಲಿ ಪದವಿ ಮಾಡಿರುವವರಿಗೆ ಮುಕ್ತವಾಗಿದೆ. ಅರ್ಜಿದಾರರು ಸಮರ್ಥ ಶೈಕ್ಷಣಿಕ ದಾಖಲೆ ಮತ್ತು ಪಠ್ಯೇತರ ಸಾಧನೆಗಳು ಉಳ್ಳವರಾಗಿರಬೇಕು.

ಆರ್ಥಿಕ ಸಹಾಯ: ಶೇ 100ರಷ್ಟು ಬೋಧನಾ ಶುಲ್ಕ ಹಾಗೂ ಇತರೆ ಪ್ರಯೋಜನಗಳು

ಅರ್ಜಿ ಸಲ್ಲಿಸಲು ಕೊನೆ ದಿನ: 31-07-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಹೆಚ್ಚಿನ ಮಾಹಿತಿಗೆ: www.b4s.in/praja/TAFM1

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ 2024

ವಿವರ: ಟೀಚ್ ಫಾರ್ ಇಂಡಿಯಾ ಫೆಲೋಶಿಪ್ 2024, ಹಿಂದುಳಿದ ಸಮುದಾಯಗಳಿಗೆ ಸೇರಿದ ಮಕ್ಕಳಿಗೆ ಪೂರ್ಣ ಸಮಯದ ಶಿಕ್ಷಕರಾಗಿ ಸೇವೆ ಸಲ್ಲಿಸಲು ಟೀಚ್ ಫಾರ್ ಇಂಡಿಯಾ (ಲಾಭರಹಿತ ಸಂಸ್ಥೆ)ವು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಕೆಲಸದಲ್ಲಿರುವಂತಹ ಯುವ ಪದವೀಧರರಿಗೆ ನೀಡುತ್ತಿರುವ ಅವಕಾಶವಾಗಿದೆ. ಈ ಫೆಲೋಶಿಪ್ ಅಡಿಯಲ್ಲಿ, ಆಯ್ಕೆಯಾದ ಫೆಲೋಗಳು ಶೈಕ್ಷಣಿಕ ಇಕ್ವಿಟಿಗಾಗಿ ಆಂದೋಲನಕ್ಕಾಗಿ ಅಗತ್ಯವಿರುವ ನಾಯಕತ್ವ ಜ್ಞಾನ, ಕೌಶಲಗಳು ಮತ್ತು ಮನಸ್ಥಿತಿಯ ಅಧ್ಯಯನವನ್ನು ಮಾಡುತ್ತಾರೆ.

ಅರ್ಹತೆ: 2024 ರ ಜೂನ್/ಜುಲೈಯೊಳಗೆ ಪದವಿ ಪೂರ್ಣಗೊಳಿಸಿದ ಭಾರತೀಯ ನಾಗರಿಕರು ಅಥವಾ ಭಾರತದ ಸಾಗರೋತ್ತರ ನಾಗರಿಕರಿಗೆ (ಒಸಿಐ) ಮುಕ್ತವಾಗಿದೆ. ಅರ್ಜಿದಾರರು 2024 ಫೆಲೋಶಿಪ್ ಕೋಹರ್ಟ್‌ಗೆ (ಜುಲೈ 2023 ರಿಂದ) ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಾಗಿರಬೇಕು.

ಆರ್ಥಿಕ ಸಹಾಯ: ₹23,040 ಮಾಸಿಕ ಸ್ಟೈಪಂಡ್ ಮತ್ತು ಇತರ ಪ್ರಯೋಜನಗಳು

ಅರ್ಜಿ ಸಲ್ಲಿಸಲು ಕೊನೆ ದಿನ: 17-03-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/TFIF2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT