ದುಬೈ: ಗಣಿತಜ್ಞ, ‘ಸೂಪರ್ 30’ ಸ್ಥಾಪಕ ಆನಂದಕುಮಾರ್ ಅವರಿಗೆ ಜಾಗತಿಕ ಶಿಕ್ಷಣ ಪ್ರಶಸ್ತಿ ಘೋಷಿಸಲಾಗಿದೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನೀಡುವ ಈ ಪ್ರಶಸ್ತಿಯನ್ನು ನವೆಂಬರ್ 8ರಂದು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಶಿಕ್ಷಣ ಕ್ಷೇತ್ರ ಮತ್ತು ಪ್ರತಿಭಾವಂತ ಮಕ್ಕಳ ಜೀವನಮಟ್ಟ ಸುಧಾರಣೆಗೆ ಆನಂದ್ ಕುಮಾರ್ ನೀಡಿರುವ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆಯ ಸಹ ಅಧ್ಯಕ್ಷ ಪಿ.ಎ.ಇಬ್ರಾಹಿಂ ಹಾಜಿ ತಿಳಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳನ್ನು ‘ಸೂಪರ್ 30’ ಹೆಸರಿನಲ್ಲಿ ಗುರುತಿಸಿ ಅವರು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಿದ್ದಲ್ಲದೆ, ಅವರಿಗೆ ಉಚಿತವಾಗಿ ಊಟ, ವಸತಿ ಸೌಲಭ್ಯವನ್ನು ಆನಂದಕುಮಾರ್ ನೀಡಿದ್ದರು. ಈವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಐಐಟಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.