ಪರೀಕ್ಷಾ ಅವಧಿಯಲ್ಲಿ ‘ಮುಖ್ಯಾಂಶಗಳ ಟಿಪ್ಪಣಿ’ ಮಹತ್ವದ ಪಾತ್ರವಹಿಸುತ್ತದೆ. ವರ್ಷವಿಡೀ ಓದಿದ ವಿಷಯವನ್ನು ಸಂಕ್ಷಿಪ್ತಗೊಳಿಸಿ, ಸಾರಾಂಶ ರೂಪದಲ್ಲಿ ಸಂಗ್ರಹಿಸುವುದು ಟಿಪ್ಪಣಿ ಅನ್ನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳೇ ಸ್ವಯಂ ಸಿದ್ಧಪಡಿಸಿಕೊಳ್ಳಬೇಕಾದ ಟಿಪ್ಪಣಿ ತರಗತಿಯಲ್ಲಿ ಶಿಕ್ಷಕರು ಬರೆಸುವ ಸಾಂಪ್ರದಾಯಿಕ ‘ನೋಟ್ಸ್’ಗಿಂತ ಭಿನ್ನವಾಗಿರುತ್ತದೆ.

ಟಿಪ್ಪಣಿ ತಯಾರಿಸುವಾಗ ಗಮನಿಸಬೇಕಾದ ಅಂಶಗಳು
ವಿಷಯ ಸಂಘಟನೆ, ಪ್ರಾಧಾನ್ಯತೆಯನ್ನು ಗುರುತಿಸಿ: ವರ್ಷವಿಡೀ ಓದಿದ ವಿಷಯವನ್ನು ಸಾರಾಂಶೀಕರಿಸುವುದು ಸುಲಭದ ವಿಷಯವೇನಲ್ಲ. ಇದಕ್ಕೆ ಸಾಕಷ್ಟು ಪೂರ್ವಸಿದ್ಧತೆ ಅಗತ್ಯ. ವಿಷಯ ಸಾರಾಂಶೀಕರಣ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಮುಖ್ಯ, ಅತಿ ಮುಖ್ಯವೆನಿಸುವ ವಿಷಯಾಂಶಗಳು ಬಿಟ್ಟು ಹೋಗುವ ಸಾಧ್ಯತೆ ಇದೆ. ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಿದಾಗ ಮಾತ್ರ ಉತ್ತಮವಾದ ‘ಮುಖ್ಯಾಂಶಗಳ ಟಿಪ್ಪಣಿ’ಯನ್ನು ಸಿದ್ಧಪಡಿಸಬಹುದು. ‘ಟಿಪ್ಪಣಿ’ಯನ್ನು ಸಿದ್ಧಪಡಿಸುವ ಮುನ್ನ ವಿಷಯ ಸಂಘಟನೆ ಅತೀ ಮುಖ್ಯ. ಆಯಾ ವಿಷಯದ ಮುಖ್ಯ ಅಧ್ಯಾಯಗಳು ಹಾಗೂ ಆ ಅಧ್ಯಾಯದ ತಿರುಳನ್ನು ಅರಿತಿರಬೇಕು. ಅಗತ್ಯಕ್ಕೆ ಅನುಗುಣವಾಗಿ ಕಠಿಣ ಹಾಗೂ ಸುಲಭ ಅನ್ನಿಸುವ ವಿಷಯಗಳಿಗೆ ಸೂಕ್ತ ಪ್ರಾಧಾನ್ಯತೆ ನೀಡಬೇಕು.

ಕಲಿಕಾ ಶೈಲಿಯನ್ನು ಗುರುತಿಸಿಕೊಳ್ಳಿ: ಪ್ರತಿಯೊಬ್ಬರಿಗೂ ತಮ್ಮದೇ ಆದ ಕಲಿಕಾ ಶೈಲಿ ಇರುತ್ತದೆ. ವ್ಯಕ್ತಿಗತ ಆಸಕ್ತಿ, ಸಾಮರ್ಥ್ಯ, ಬುದ್ಧಿಶಕ್ತಿ, ಸೃಜನಶೀಲತೆ ಹಾಗೂ ಗ್ರಹಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿ ತನ್ನದೇ ಆದ ಕಲಿಯುವಿಕೆಯ ಶೈಲಿಯನ್ನು ರೂಢಿಸಿಕೊಂಡಿರುತ್ತಾನೆ. ಆ ಶೈಲಿಯನ್ನು ಅರ್ಥೈಯಿಸಿಕೊಳ್ಳಲು ಆಯಾ ವಿದ್ಯಾರ್ಥಿಗೆ ಮಾತ್ರ ಸಾಧ್ಯ. ಆಯಾ ಕಲಿಕಾ ಶೈಲಿಗೆ ಅನುಗುಣವಾಗಿ ಟಿಪ್ಪಣಿ ತಯಾರಿಸಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಾಂಶಗಳ ಟಿಪ್ಪಣಿ ತಯಾರಿಸುವ ಮುನ್ನ ವಿದ್ಯಾರ್ಥಿ ತನ್ನ ಕಲಿಕಾ ಶೈಲಿಯನ್ನು ಗುರುತಿಸಿಕೊಳ್ಳಬೇಕಾದುದು ಅಗತ್ಯ ಹಾಗೂ ಅನಿವಾರ್ಯ.

ಟಿಪ್ಪಣಿ ಅಗತ್ಯವೇ ಎಂದು ಪ್ರಶ್ನಿಸಿಕೊಳ್ಳಿ: ನೀವು ಯಾವ ವಿಷಯದ, ಯಾವ ಅಧ್ಯಾಯಕ್ಕೆ ಸಂಬಂಧಿಸಿ ಮುಖ್ಯಾಂಶಗಳ ಟಿಪ್ಪಣಿ ಬರೆದುಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ನಿಜಕ್ಕೂ ಆ ಅಧ್ಯಾಯಕ್ಕೆ ಮುಖ್ಯಾಂಶಗಳನ್ನು ಬರೆದುಕೊಳ್ಳಬೇಕಾದ ಅನಿವಾರ್ಯತೆ ನಿಮಗಿದೆಯೇ? ಎಂಬುದನ್ನು ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಆಗಕಷ್ಟ ಎನಿಸುವ ಪಾಠಗಳನ್ನು ಅರ್ಥ ಮಾಡಿ ಕೊಳ್ಳುವುದು ಸುಲಭವಾಗಿರುತ್ತವೆ. ಆಗ ಮುಖ್ಯಾಂಶ ಬರೆಯಬೇಕಾದ ಅಗತ್ಯವಿರುವುದಿಲ್ಲ. ನಿಮಗೆ ಸುಲಭವೆನಿಸುವ ಅಧ್ಯಾಯ ನಿಮ್ಮ ಸ್ನೇಹಿತರಿಗೆ ಕಠಿಣವೆನಿಸಬಹುದು. ಅವರು ಆ ಅಧ್ಯಾಯಕ್ಕೆ ಸಂಬಂಧಿಸಿದ ಮುಖ್ಯಾಂಶಗಳನ್ನು ಬರೆದುಕೊಳ್ಳಬಹುದು. ಆಗ ನೀವೂ ಕೂಡ ಮುಖ್ಯಾಂಶಗಳನ್ನು ಬರೆಯುತ್ತ ಕೂತು ವೇಳೆಗಳೆಯಬೇಕಿಲ್ಲ.

ಮುಖ್ಯಾಂಶ, ಉಪಾಂಶಗಳನ್ನು ಗುರುತಿಸಿಕೊಳ್ಳಿ: ಟಿಪ್ಪಣಿ ತಯಾರಿಸುವಾಗ ಆಯಾ ವಿಷಯದ ಪ್ರಮುಖ ಅಧ್ಯಾಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆಯಾ ಅಧ್ಯಾಯಕ್ಕೆ ಸಂಬಂಧಿಸಿ, ಪಠ್ಯಪುಸ್ತಕ ಹಾಗೂ ತರಗತಿಯಲ್ಲಿ ಶಿಕ್ಷಕರು ಬರೆಯಿಸಿರುವ ‘ನೋಟ್ಸ್’ನಲ್ಲಿ ಮಾರ್ಕರ್ ಮೂಲಕ ಅಥವಾ ಕೆಳಗೆರೆ (ಅಂಡರ್ ಲೈನ್) ಎಳೆಯುವ ಮೂಲಕ ಮುಖ್ಯಾಂಶ, ಉಪಾಂಶಗಳನ್ನು ಗುರುತಿಸಿಕೊಳ್ಳಬೇಕು. ಮುಖ್ಯಾಂಶಗಳನ್ನು ಗುರುತಿಸಲು ದಟ್ಟವಾದ ಬಣ್ಣದ ಮಾರ್ಕರ್ ಬಳಸಬಾರದು. ತೆಳು ಹಳದಿ, ನೀಲಿ ಅಥವಾ ಕೇಸರಿ ಬಣ್ಣದ ಮಾರ್ಕರ್ ಬಳಸುವುದರಿಂದ ಓದುವಿಕೆಯಲ್ಲಿ ಸ್ಪಷ್ಟತೆ ಇರುತ್ತದೆ ಹಾಗೂ ಕಣ್ಣಿಗೂ ಹಿತವೆನಿಸುತ್ತದೆ. ಆಯಾ ಖಂಡಿಕೆಯ (ಪ್ಯಾರಾ) ಮಾರ್ಜಿನ್ನಲ್ಲಿ ಬರೆದುಕೊಂಡಿರುವ ‘ಕೀ ಪಾಯಿಂಟ್’ ಕೂಡ ‘ಮುಖ್ಯಾಂಶಗಳ ಟಿಪ್ಪಣಿ’ ರಚನೆಗೆ ಸಹಕಾರಿ ಎಂಬುದು ನಿಮ್ಮ ನೆನಪಿನಲ್ಲಿರಲಿ.

ಮುಖ್ಯಾಂಶಗಳ ಬರವಣಿಗೆ ಹೀಗಿರಲಿ: ‘ಮುಖ್ಯಾಂಶಗಳ ಟಿಪ್ಪಣಿ’ಯನ್ನು ಸಿದ್ಧಪಡಿಸುವಾಗ ಗೆರೆರಹಿತವಾದ ‘ಎ–4’ ಗಾತ್ರದ ಹಾಳೆಯನ್ನು ಬಳಸುವುದು ಉತ್ತಮ. ಕೈ ಬರಹ ನೀಟಾಗಿಲ್ಲ ಎನ್ನುವುದಾದರೆ ಅದೇ ಗಾತ್ರದ ಗೆರೆಯುಳ್ಳ ಹಾಳೆಯನ್ನು ಬಳಸಿದರೂ ತಪ್ಪಿಲ್ಲ. ಹಾಳೆಯನ್ನು ಸಮನಾದ ಎರಡು ಅಥವಾ ನಾಲ್ಕು ಭಾಗಗಳಲ್ಲಿ (ಕಾಲಂ ವೈಸ್) ಮಡಚಿ ಆ ಭಾಗಗಳನ್ನು ಪ್ರತ್ಯೇಕವಾಗಿ ಕತ್ತರಿಸಿ, ಪಿನ್ ಅಥವಾ ಟ್ಯಾಗ್ ಮಾಡಿ ಮುಖ್ಯಾಂಶಗಳನ್ನು ಬರೆಯಬಹುದು. ಈ ರೀತಿ ಸಿದ್ಧಪಡಿಸಿದ ಟಿಪ್ಪಣಿಯನ್ನು ಸುಲಭವಾಗಿ ಮಡಚಿ ಜೇಬಿನಲ್ಲಿಟ್ಟುಕೊಳ್ಳಬಹುದು.

ಪ್ರತಿಯೊಂದನ್ನೂ ಬರೆಯದಿರಿ: ‘ಮುಖ್ಯಾಂಶಗಳ ಟಿಪ್ಪಣಿ’ ಹೆಸರೇ ಸೂಚಿಸುವಂತೆ ಕೇವಲ ಮುಖ್ಯಾಂಶಗಳನ್ನು ಮಾತ್ರ ಒಳಗೊಂಡಿರಬೇಕೆ ವಿನಃ ಪಠ್ಯಪುಸ್ತಕ ಅಥವಾ ತರಗತಿ ನೋಟ್ಸ್ನಲ್ಲಿರುವಂತೆ ಸಾಲು–ಸಾಲು ವಿವರಣೆಯನ್ನು ಒಳಗೊಂಡಿರಬಾರದು. ಏನು ಹಾಗೂ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಬರೆಯಬೇಕು. ಮುಖ್ಯಾಂಶಗಳಲ್ಲಿರುವ ಅತಿ ಮುಖ್ಯವಾದ ‘ಕೀ ಪಾಯಿಂಟ್’ ಅನ್ನು ಮಾರ್ಕರ್ ಪೆನ್ನಿನಿಂದ ಗುರುತಿಸಿಕೊಳ್ಳಬೇಕು.

ಆಯಾ ವಿಷಯಕ್ಕೆ ಅನುಗುಣವಾದ ಮುಖ್ಯಾಂಶಗಳಿರಲಿ: ಭಾಷಾ ವಿಷಯದಲ್ಲಿ ವ್ಯಾಕರಣಾಂಶಗಳು, ಸಂಧಿ–ಸಮಾಸದ ವ್ಯಾಖ್ಯಾನ, ಉದಾಹರಣೆಗಳನ್ನು, ಗದ್ಯ–ಪದ್ಯದ ಸಾರಂಶವನ್ನು ಮುಖ್ಯಾಂಶವಾಗಿ ಬರೆದಿಟ್ಟುಕೊಳ್ಳಬಹುದು. ಗಣಿತದಲ್ಲಿ ಪ್ರಮೇಯ ಹಾಗೂ ಆಕೃತಿಗಳ ವ್ಯಾಖ್ಯಾನ, ಬೀಜ ಗಣಿತದ ಸೂತ್ರಗಳನ್ನು ಮುಖ್ಯಾಂಶಗಳನ್ನಾಗಿ ಬರೆದಿಟ್ಟುಕೊಳ್ಳಬಹುದು. ಭಾಷೆಯಲ್ಲಿ ಓದುವಿಕೆ, ಗಣಿತದಲ್ಲಿ ಸಮಸ್ಯೆಗಳ ಬಿಡಿಸುವಿಕೆ ಹಾಗೂ ಉಜ್ಜಳನೆ ಮುಖ್ಯವಾಗಿರುತ್ತದೆ. ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಮುಖ್ಯಾಂಶಗಳನ್ನು ಬರೆದುಕೊಳ್ಳಲು ಹೆಚ್ಚು ಅವಕಾಶವಿರುತ್ತದೆ.

ಪುನರಾವರ್ತನೆಗೆ ಪೂರಕವಾಗಿರಲಿ: ನೀವು ಸಿದ್ಧಪಡಿಸುವ ‘ಮುಖ್ಯಾಂಶಗಳ ಟಿಪ್ಪಣಿ’ ಚಿಕ್ಕದಾಗಿ, ಚೊಕ್ಕದಾಗಿರಲಿ. ಪ್ರತಿ ವಿಷಯದ ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿ, ಪ್ರತ್ಯೇಕವಾಗಿ ಟಿಪ್ಪಣಿ ತಯಾರಿಸಿಕೊಳ್ಳಬೇಕು. ತಯಾರಿಸಿದ ಟಿಪ್ಪಣಿ ನಿಮ್ಮ ಜೇಬಿನಲ್ಲಿಟ್ಟುಕೊಳ್ಳುವಂತಿರಬೇಕು. ನೀವು ಪ್ರಯಾಣಿಸುವಾಗ, ವಾಯುವಿಹಾರಕ್ಕೆ ತೆರಳಿದಾಗ, ಊಟ – ತಿಂಡಿ ಮಾಡುವಾಗ, ಶಾಲೆಯಲ್ಲಿ ವಿರಾಮ ನೀಡಿದಾಗ, ಸ್ನೇಹಿತರ ದಾರಿ ಕಾಯುವಾಗ... ಹೀಗೆ ಬೇಕೆಂದಾಗ ಒಮ್ಮೆ ಕಣ್ಣಾಡಿಸಿ ಮರಳಿ ಜೇಬಿನಲ್ಲಿ ಇಟ್ಟುಕೊಳ್ಳುವಂತಿರಬೇಕು. ಹೀಗೆ ಮುಖ್ಯಾಂಶಗಳ ಪುನರಾವರ್ತನೆಯಿಂದ ವಿಷಯವಸ್ತು ತಂತಾನೇ ಮನದಟ್ಟಾಗುತ್ತದೆ.

ಸುಧಾರಣೆ, ತಿದ್ದುವಿಕೆಗೆ ಅವಕಾಶವಿರಲಿ: ನಿಮ್ಮ ಸ್ನೇಹಿತರ ಟಿಪ್ಪಣಿಗಳನ್ನು ಗಮನಿಸಿದಾಗ, ನಿಮ್ಮ ಪೋಷಕರು–ಶಿಕ್ಷಕರು ಸೂಚಿಸಿದಾಗ ಅಥವಾ ನೀವು ಸಿದ್ಧಪಡಿಸಿಕೊಂಡಿರುವ ಟಿಪ್ಪಣಿಯನ್ನು ಪುನರಾವರ್ತಿಸಿದಾಗ ಅದರಲ್ಲಿ ಕೆಲ ಬದಲಾವಣೆ ಅಥವಾ ತಿದ್ದುಪಡಿ ಮಾಡಬೇಕು ಎಂದು ನಿಮಗೆ ಅನ್ನಿಸಬಹುದು. ಅದಕ್ಕೆ ನಿಮ್ಮ ಟಿಪ್ಪಣಿಯಲ್ಲಿ ಅವಕಾಶವಿರಬೇಕು. ಈ ರೀತಿಯ ತಿದ್ದುವಿಕೆಯಿಂದ ಅತ್ಯುತ್ತಮವಾದ ಟಿಪ್ಪಣಿ ರೂಪಗೊಳ್ಳುತ್ತದೆ.

ಬರೆಯುತ್ತ ‘ಬೋರ್’ ಹೊಡೆಯದಿರಲಿ: ಮುಖ್ಯಾಂಶಗಳ ಟಿಪ್ಪಣಿಯನ್ನು ಸಿದ್ಧಪಡಿಸುವ ಭರದಲ್ಲಿ ದಿನವಡೀ ಬರೆಯುತ್ತ ಕುಳಿತರೆ ಬೇಸರ ಮೂಡುವುದು ಸಹಜ. ಈ ರಿತಿ ಮೂಡಿದ ಬೇಸರ ಮುಖ್ಯಾಂಶ ಸಿದ್ಧಪಡಿಸುವಿಕೆಯ ಆಸಕ್ತಿಯನ್ನು ಕುಗ್ಗಿಸಬಹುದು. ಇದನ್ನು ತಪ್ಪಿಸಲು. ಬರವಣಿಗೆಯ ಮಧ್ಯದಲ್ಲಿ ಸಂಗೀತ ಕೇಳುವುದು, ಓದುವುದು, ವಾಕ್ ಹೋಗುವುದು, ನೀರು ಕುಡಿಯುವುದು, ತಿಂಡಿ–ಊಟ ಮಾಡುವುದು, ಕಿರು ನಿದ್ರೆಗೆ ಜಾರುವುದು... ಇತ್ಯಾದಿ ಚಟುವಟಿಕೆಗಳಿರಲಿ. ಇದರಿಂದ ಬರೆಯುವಿಕೆಯ ಏಕತಾನತೆಯಿಂದ ಹೊರ ಬಂದು ‘ಬೋರ್’ ಹೊಡೆಯುವಿಕೆಯನ್ನು ತಪ್ಪಿಸಬಹುದು.

ನಿರ್ಧಾರಕ ಅಂಶ ‘ಮೈಂಡ್ಮ್ಯಾಪ್’
ಪ್ರತಿಯೊಬ್ಬರಿಗೂ ತಮ್ಮದೇ ಆದ ಓದುವಿಕೆ ಹಾಗೂ ಮನನ ಮಾಡಿಕೊಳ್ಳುವ ಶೈಲಿ ಇರುತ್ತದೆ. ನಾವು ಮನನ ಮಾಡಿಕೊಂಡ ವಿಷಯ ನಮ್ಮ ಸ್ಮೃತಿಪಟಲದಲ್ಲಿ ‘ಅನನ್ಯ ಮನೋವಿಚ್ಛಿನ್ನ ಆಕೃತಿ’ಯ ರೂಪದಲ್ಲಿ ಸಂಗ್ರಹವಾಗುತ್ತದೆ. ಇದನ್ನು ಮನೋವೈಜ್ಞಾನಿಕವಾಗಿ ‘ಮೈಂಡ್ಮ್ಯಾಪ್’ ಅಥವಾ ‘ಮನೋನಕ್ಷೆ’ ಎನ್ನುತ್ತಾರೆ. ‘ಮೈಂಡ್ ಮ್ಯಾಪ್’ ಬಲಯುತವಾಗಿ, ಸುದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯಬೇಕಾದರೆ ಮುಖ್ಯಾಂಶಗಳ ಟಿಪ್ಪಣಿಯಲ್ಲಿ ಸಹಸಂಬಂಧ, ಉದಾಹರಣೆಗಳು, ಬಾಣದ ಚಿಹ್ನೆಗಳು, ಬಾಕ್ಸ್ಗಳು ಹಾಗೂ ಸಂಕ್ಷೇಪಾಕ್ಷರಗಳನ್ನು (ಉದಾ: ‘ಸನಿದಪ’ – ಸಮೀಪ ದೃಷ್ಟಿ ದೋಷಕ್ಕೆ ನಿಮ್ನ ಮಸೂರ, ದೂರ ದೃಷ್ಟಿ ದೋಷಕ್ಕೆ ಪೀನ ಮಸೂರ, ‘ಉಈಪೂಆದನೈಪವಾ’– ಅಷ್ಟ ದಿಕ್ಕುಗಳು) ಅಗತ್ಯಕ್ಕೆ ತಕ್ಕಂತೆ ಬಳಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.