ದಿನ ಭವಿಷ್ಯ: ಸಮಸ್ಯೆಗಳು ಬಗೆ ಹರಿದು ಮನೆಯವರಿಗೆ ನೆಮ್ಮದಿ ಉಂಟಾಗುವುದು
Published 12 ಜುಲೈ 2025, 23:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನಾವಶ್ಯಕ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಈ ದಿನ ನಿಮಗೆ ಬರುವ ನೂತನ ಯೋಚನೆಗಳು ಖರ್ಚಿಗೆ ದಾರಿಯಾದರೂ ಮುಂದಿನ ದಿನಗಳಲ್ಲಿ ಉಪಕಾರಿಯಾಗಿರುತ್ತದೆ. ಅದೃಷ್ಟದಾಯಕ ದಿನವಾಗಿರುತ್ತದೆ.
ವೃಷಭ
ಈ ದಿನ ನಿಮಗೆ ಹೆಚ್ಚಿನ ನಿರಾಶೆಯನ್ನು ತರದು. ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಶುಭವಾಗುವ ಲಕ್ಷಣವಿದೆ.
ಮಿಥುನ
ಹಿತಶತ್ರುಗಳ ದ್ವೇಷ ಅಸೂಯೆಯಿಂದ ಉಂಟಾಗುತ್ತಿದ್ದ ನೋವು ದೂರಾಗುತ್ತದೆ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡುಬರಲಿದೆ. ಅನೇಕ ಬಗೆಯ ಶುಭವಾರ್ತೆಗಳು ನೆಮ್ಮದಿಗೆ ಕಾರಣವಾದೀತು.
ಕರ್ಕಾಟಕ
ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಉಪಕಾರಕ್ಕಿಂತ ತೊಂದರೆಗೆ ಹೆಚ್ಚು ದಾರಿಯಾಗುವುದು. ಆದ್ದರಿಂದ ಜೋಪಾನವಾಗಿರಿ. ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಲಿದ್ದೀರಿ.
ಸಿಂಹ
ನೂತನ ಸ್ನೇಹಿತನಿಂದ ಅಥವಾ ಅಪರಿಚಿತರ ಸಹಕಾರದಿಂದ ನಿಮ್ಮ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ. ಗೃಹದಲ್ಲಿ ಸಂಭ್ರಮದ ಆಚರಣೆಯಿಂದಾಗಿ ಅಥವಾ ವೃಥಾ ತಿರುಗಾಟದಿಂದಾಗಿ ಖರ್ಚು ಹೆಚ್ಚಾಗಲಿದೆ.
ಕನ್ಯಾ
ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ ಮತ್ತು ಅನಿವಾರ್ಯ. ನಿಮ್ಮ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನವನ್ನು ಕೊಡಿ. ಬಿಳಿಯಾದದ್ದಲ್ಲಾ ಹಾಲು ಎಂದು ನಂಬುವ ನಿಮ್ಮ ಮನೋಧರ್ಮದಿಂದ ಈ ದಿನ ಮೋಸ ಹೋಗುವಿರಿ.
ತುಲಾ
ಶುಭ ಮಂಗಲ ಕಾರ್ಯಗಳಿಗೆ ಅಡ್ಡಿ-ಆತಂಕ ಯಾವುದು ಇರುವುದಿಲ್ಲ. ಜಟಿಲ ಸಮಸ್ಯೆಗಳು ಬಗೆ ಹರಿದು ಮನೆಯವರಿಗೆ ನೆಮ್ಮದಿ ಉಂಟಾಗುವುದು. ನಿಮ್ಮ ಮನೋಭಿಲಾಷೆಗೆ ಕುಟುಂಬ ವರ್ಗದವರು ಅಭಿವೃದ್ಧಿ ದಾರಿಯನ್ನು ಕಲ್ಪಿಸುವರು.
ವೃಶ್ಚಿಕ
ವ್ಯಾಪಾರದ ಬಂಡವಾಳ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಅಧಿಕ ಜವಾಬ್ದಾರಿ ಅಥವಾ ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಈ ದಿನದ ಸಂಜೆಯ ವೇಳೆಯ ನಂತರದಲ್ಲಿ ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ.
ಧನು
ನಿಮ್ಮ ಸಮಸ್ಯೆಗಳು ಮು0ದಿನ ದಿನಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ದೂರವಾಗಲಿದೆ. ಬೇಕರಿ ಪದಾರ್ಥಗಳ ಮಾರಾಟದಿಂದ ಹೆಚ್ಚಿನ ಲಾಭ ಇರುವುದು. ಸಂಗತಿಗಳನ್ನು ಹಗುರವಾಗಿ ಪರಿಗಣಿಸುವ ಸ್ವಭಾವ ಬದಲಿಸಿಕೊಳ್ಳ ಬೇಕಾಗುವುದು.
ಮಕರ
ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ. ಯಾವುದೇ ಅನವಶ್ಯಕ ಚಿಂತೆ ಬೇಡ. ಮನೆಯಲ್ಲಿ ಪತ್ನಿ, ಮಕ್ಕಳ ಅರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ಕುಂಭ
ಅನಾವಶ್ಯಕವಾಗಿ ಅವಮಾನ, ಮಾನಸಿಕ ಅಶಾಂತಿ, ದಾಂಪತ್ಯದಲ್ಲಿ ಕಲಹ, ಕುಟುಂಬ ವರ್ಗದವರಲ್ಲಿ ಭಿನ್ನಾಭಿಪ್ರಾಯದಂತಹ ಸನ್ನಿವೇಶಗಳು ಕಂಡುಬಂದು ಮನಸ್ಸಿಗೆ ನೋವಾಗಲಿದೆ. ಉದಾಸೀನತೆ ತೋರಿದರೆ ಹಿನ್ನಡೆಯನ್ನು ಎದುರಿಸಬೇಕಾಗುವುದು.
ಮೀನ
ಗಣಪತಿಯ ಅನುಗ್ರಹದಿಂದ ಗೊಂದಲಗಳು ಸರಳವಾಗಿ ನಿವಾರಣೆಗೊಂಡು ಮನಸ್ಸು ತಿಳಿಯಾಗುವುದು. ಹತ್ತಾರು ಜನರಿಗೆ ಮಾರ್ಗದರ್ಶಿಕ ವ್ಯಕ್ತಿಯಾಗಿ ನೇಮಕಗೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಪ್ರಾಪ್ತಿಯಾಗುವುದು.