ಪ್ಯಾರಿಸ್: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿಯು 11ನೇ ಶ್ರೇಯಾಂಕದ ಚೀನಾದ ಚೆನ್ ಬೊ ಯಂಗ್ ಮತ್ತು ಲಿಯು ಯಿ ವಿರುದ್ಧ 19-21, 21-18, 12-21ರ ಅಂತರದಲ್ಲಿ ಮುಗ್ಗರಿಸಿತು.

ಈ ಮೊದಲು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಸೆಮಿಫೈನಲ್ಗೆ ದಾಪುಗಾಲಿಡುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದರು.

ಆ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಸಾತ್ವಿಕ್–ಚಿರಾಗ್ ಜೋಡಿ ಎರಡನೇ ಸಲ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 2022ರಲ್ಲೂ ಕಂಚಿನ ಪದಕ ಗೆದ್ದಿದ್ದರು.

67 ನಿಮಿಷಗಳ ಹೋರಾಟದ ಅಂತಿಮದಲ್ಲಿ ಮುಗ್ಗರಿಸಿದ ಸಾತ್ವಿಕ್–ಚಿರಾಗ್, ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಪುರುಷರ ಜೋಡಿ ಎಂದೆನಿಸಿಕೊಳ್ಳುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತವಾಯಿತು.
.ವಿಶ್ವ ಚಾಂಪಿಯನ್ಷಿಪ್: ಸೆಮಿಫೈನಲ್ಗೆ ಸಾತ್ವಿಕ್– ಚಿರಾಗ್.ಜಪಾನ್ ಓಪನ್ Badminton: ಲಕ್ಷ್ಯ, ಸಾತ್ವಿಕ್–ಚಿರಾಗ್ ಮುನ್ನಡೆ, ಸಿಂಧು ನಿರ್ಗಮನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.