ದಿನ ಭವಿಷ್ಯ: 29 ನವೆಂಬರ್ 2025 ಶನಿವಾರ– ನವವಿವಾಹಿತೆಗೆ ಮುಖ್ಯ ವ್ಯಕ್ತಿಗಳ ಮರೆವು
Published 28 ನವೆಂಬರ್ 2025, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಾರಂಭ ಮುಗಿದ ಬಳಿಕ ಉಳಿದ ಕೆಲಸಗಳು ಮಾಡಿದಷ್ಟೂ ಇದ್ದಂತೆ ಭಾಸವಾಗುತ್ತದೆ. ಭೂಸಂಬಂಧಿತ ವ್ಯವಹಾರಗಳಿಂದ ಲಾಭವಿದ್ದರೂ ದಾಖಲೆಗಳಿಂದ ಮೋಸ ಹೋಗದಿರಿ. ಹಲ್ಲುನೋವು ಕಂಡುಬರುವುದು.
ವೃಷಭ
ಮುಕ್ತವಾಗಿ ಮಾತನಾಡಲಾಗದ ಸ್ವಭಾವವು ಸಭೆಯಲ್ಲಿ ನಿಮ್ಮನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಂದರ್ಭವನ್ನು ತರುತ್ತದೆ. ಎಲ್ಲಾ ಕಾರ್ಯಗಳೂ ಅಂದುಕೊಂಡಂತಾಗದು.
ಮಿಥುನ
ಸೂಕ್ತ ರೂಪುರೇಷೆಯನ್ನು ಹಾಕಿಕೊಳ್ಳದೆ ಶುರು ಮಾಡಿದ ಕೆಲಸಗಳಲ್ಲಿ ಹಲವು ವಿಘ್ನಗಳಿವೆ. ಸಣ್ಣ ಮಕ್ಕಳೊಂದಿಗಿನ ಒಡನಾಟವು ಮನಸ್ಸನ್ನು ಮುದಗೊಳಿಸುತ್ತದೆ.
ಕರ್ಕಾಟಕ
ಮೇಲಧಿಕಾರಿಗಳು, ಹಿರಿಯರಿಂದ ಬಯಸಿದ ಉಪಕಾರವನ್ನು ಪಡೆಯಬಹುದು. ಹೊಸ ಕೆಲಸಗಳನ್ನು ಶುರುಮಾಡುವ ಮೊದಲೇ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಯೋಚಿಸಿ. ಅಧಿಕ ಸುತ್ತಾಟದಿಂದ ಆಯಾಸ.
ಸಿಂಹ
ನಿಂತು ಹೋಗಿರುವ ಕೃಷಿಯಲ್ಲಿಯೇ ಹೆಚ್ಚು ಆದಾಯ ಎಂಬುದನ್ನು ಕಂಡುಕೊಳ್ಳುವಿರಿ. ಸಾಮ್ಯತೆಗಳನ್ನೇ ಹುಡುಕಿ ಗೆಳೆತನ ಮಾಡಿದರೂ ಗೆಳೆತನದಲ್ಲಿ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿ ಕಾಣುವುದು.
ಕನ್ಯಾ
ವೃತ್ತಿ ವಿಷಯದಲ್ಲಿ ಏಳುಬೀಳುಗಳು ಸಹಜ ಎಂದು ನೀವು ಕಂಡು ಕೊಂಡದ್ದನ್ನು ಕಿರಿಯರಿಗೂ ತಿಳಿಸುವ ಕೆಲಸ ಮಾಡುವಿರಿ. ನವವಿವಾಹಿತೆಗೆ ಮುಖ್ಯ ವ್ಯಕ್ತಿಗಳ ಮರೆವು ಬಹಳವಾಗಿ ಕಾಡಿಸುತ್ತದೆ.
ತುಲಾ
ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ. ಪ್ರಾರಂಭಿಸಿದ ಕೆಲಸ ನಾಳೆಗೆ ಎನ್ನದೆ ವೃತ್ತಿಯಲ್ಲಿ ಪಾದರಸದಂತೆ ಇರಲು ಪ್ರಯತ್ನಿಸಿ. ಸ್ವಕಾರ್ಯ ಹಾಗೂ ಸ್ವಪ್ರತಿಭೆಯಿಂದ ಪ್ರಭಾವಿಗಳಾಗುವಿರಿ.
ವೃಶ್ಚಿಕ
ಅಪ್ರಿಯವಾದ ಸತ್ಯವನ್ನು ಸ್ವೀಕರಿಸಲು ಅಸಾಧ್ಯವಾಗುವಂಥ ಹಿರಿಯ ನಾಗರಿಕರ ಬಳಿ ಹೇಳದಿರುವುದು ಒಳ್ಳೆಯದೆಂದು ಯೋಚಿಸುವಿರಿ. ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ನಷ್ಟವಾಗುವ ಸಂಭವವಿದೆ.
ಧನು
ಸುಲಭವಾಗಿ ಕೆಲವೊಂದು ವಿಷಯಗಳನ್ನು ಎಲ್ಲರ ಬಳಿ ಹೇಳುವುದರಿಂದ ಕುಟುಂಬದವರಿಗೆ ತೊಂದರೆಯಾಗುತ್ತದೆ. ಸಣ್ಣ ವಿದ್ಯುತ್ ಉಪಕರಣಗಳ ಮಾರಾಟವು ಲಾಭದಾಯಕವಾಗಿರುತ್ತದೆ.
ಮಕರ
ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆಯ ಮಾತುಗಳು ಹಿರಿಯರಿಂದ ಕೇಳಬೇಕಾಗಬಹುದು. ಅದೇ ರೀತಿಯಾಗಿ ನಡೆದುಕೊಳ್ಳಿ. ಪರಿಶ್ರಮಕ್ಕೆ ಫಲ ಪ್ರಾಪ್ತಿ.
ಕುಂಭ
ಧಾರ್ಮಿಕ ಕೆಲಸಗಳಿಗಾಗಿ ಖರ್ಚುಗಳಿದ್ದರೂ ದೈವಬಲದಿಂದ ಎಲ್ಲಾ ವ್ಯವಹಾರಗಳಲ್ಲಿ ಉತ್ತಮ ಧನಾದಾಯವನ್ನು ಹೊಂದುವಿರಿ. ಹಣದ ವಿಚಾರವಾಗಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವಿರಿ.
ಮೀನ
ಈವರೆಗೆ ತುಂಬ ಮೃದುವಾಗಿ ಬದುಕನ್ನು ಸಾಗಿಸಿದವರಿಗೆ ಇನ್ನು ನೀವು ಕಳೆಯಬೇಕಾದ ಬದುಕು ಸ್ವಲ್ಪ ಕಷ್ಟಕರವೆಂದು ತೋರಬಹುದು. ಧರ್ಮಾಚರಣೆಯಲ್ಲಿ ಕುಂದುಕೊರತೆಗಳನ್ನು ಮಾಡುವುದು ಶ್ರೇಯಸ್ಕರವಲ್ಲ.