ಮದುರೈ: ಹಾಲಿ ಚಾಂಪಿಯನ್ ಜರ್ಮನಿ ತಂಡವು ಶುಕ್ರವಾರ ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 4–0 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ತನ್ನ ಅಭಿಯಾನವನ್ನು ಆರಂಭಿಸಿತು.

ಏಳು ಬಾರಿಯ ಚಾಂಪಿಯನ್ ಜರ್ಮನಿ ತಂಡದ ಪರ ಜಸ್ಟಸ್ ವಾರ್ವೆಗ್ (19ನೇ ಮತ್ತು 56ನೇ ನಿಮಿಷ) ಎರಡು ಫೀಲ್ಡ್ ಗೋಲು ಗಳಿಸಿದರು. ಬೆನ್ ಹ್ಯಾಸ್ಬಾಚ್ (43ನೇ) ಮತ್ತು ಪಾಲ್ ಗ್ಲಾಂಡರ್ (44ನೇ) ಅವರು ತಲಾ ಒಂದೊಂದು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು.

ಎ ಗುಂಪಿನ ಇನ್ನೊಂದು ಪಂದ್ಯದಲ್ಲಿ ಐರ್ಲೆಂಡ್ ತಂಡವು 4–3ರ ರೋಚಕ ಹಣಾಹಣಿಯಲ್ಲಿ ಕೆನಡಾ ತಂಡವನ್ನು ಮಣಿಸಿತು. ಮೂರನೇ ಕ್ವಾರ್ಟರ್ ಅಂತ್ಯಕ್ಕೆ 4–1 ಹಿನ್ನಡೆಯಲ್ಲಿದ್ದ ಕೆನಡಾ ತಂಡವು, ಕೊನೆಯ ಕ್ವಾರ್ಟರ್ನಲ್ಲಿ ಎರಡು ಗೋಲು ಗಳಿಸಿ ತೀವ್ರ ಪ್ರತಿರೋಧ ತೋರಿತು. ಸಮಬಲ ಸಾಧಿಸುವ ಕೆನಡಾ ಆಟಗಾರರ ಪ್ರಯತ್ನಗಳು ಸಫಲವಾಗಲಿಲ್ಲ.

ಸ್ಪೇನ್ ತಂಡವು ಡಿ ಗುಂಪಿನ ಪಂದ್ಯದಲ್ಲಿ 8–0 ಗೋಲುಗಳಿಂದ ಈಜಿಪ್ಟ್ ತಂಡವನ್ನು ಬಗ್ಗುಬಡಿಯಿತು. ಸ್ಪೇನ್ನ ಬ್ರೂನೋ ಅವಿಲಾ ಅವರು ಹ್ಯಾಟ್ರಿಕ್ ಗೋಲುಗಳೊಂದಿಗೆ ಗೆಲುವಿನಲ್ಲಿ ಮಿಂಚಿದ್ದರು.

ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡವು 12–1ರಿಂದ ನಮೀಬಿಯಾ ತಂಡವನ್ನು ಸೋಲಿಸಿತು. ಬೆಲ್ಜಿಯಂನ ಮ್ಯಾಥಿಸ್ ಲಾವರ್ಸ್ ನಾಲ್ಕು ಗೋಲು ಗಳಿಸಿದರೆ, ಹ್ಯೂಗೋ ಲಾಬೌಚೆರೆ ಮೂರು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಅರ್ಜೆಂಟೀನಾ ತಂಡವು ಸಿ ಗುಂಪಿನ ಪಂದ್ಯದಲ್ಲಿ 4–1ರಿಂದ ಜಪಾನ್ ವಿರುದ್ಧ ಗೆಲುವು ಸಾಧಿಸಿತು. ಇದೇ ಗುಂಪಿನ ಮತ್ತೊಂದು ಹಣಾಹಣಿಯಲ್ಲಿ ನ್ಯೂಜಿಲೆಂಡ್ 5–3ರಿಂದ ಚೀನಾ ತಂಡವನ್ನು ಮಣಿಸಿತು. ಸ್ವಿಟ್ಜರ್ಲೆಂಡ್ ತಂಡವು ಬಿ ಗುಂಪಿನ ಪಂದ್ಯದಲ್ಲಿ 4–0ರಿಂದ ಒಮಾನ್ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.