ಗುರುವಾರ, 27 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 28 ನವೆಂಬರ್ 2025 ಶುಕ್ರವಾರ- ಹಲವು ಸಮಸ್ಯೆ ನಿವಾರಿಸಿಕೊಳ್ಳುವಿರಿ
Published 27 ನವೆಂಬರ್ 2025, 18:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಭೂಮಿಯಿಂದ ಉನ್ನತ ಸ್ಥಾನದಲ್ಲಿ ಕೆಲಸ ಮಾಡುವವರು ರಕ್ಷಾಕವಚವನ್ನು ಮರೆಯದಿರಿ. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ಮಕ್ಕಳ ಮೇಲೆ ನಿಗಾ ಇರಲಿ.
ವೃಷಭ
ವೃತ್ತಿಗೆ ನೀವು ನೀಡುವಷ್ಟೇ ಪ್ರಾಮುಖ್ಯವನ್ನು ಸಾಂಸಾರಿಕ ಜೀವನಕ್ಕೂ ನೀಡುವುದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಿರಿ. ಪರಂಪರೆಯಲ್ಲಿ ನಡೆದು ಬಂದ ವಿಧಿಯನ್ನು ಆಚರಿಸಿ.
ಮಿಥುನ
ಯಾವುದೋ ಪುಸ್ತಕಗಳನ್ನು ಓದುವುದರಿಂದ ಮನಸ್ಸು ಶೂನ್ಯದ ಕಡೆಗೆ ವಾಲುತ್ತಿರುವಂತೆ ಭಾಸವಾಗುತ್ತದೆ. ಹರಿತ ವಸ್ತುಗಳ ಮೇಲೆ ಎಷ್ಟು ಕಾಳಜಿ ಇದ್ದರೂ ಕಡಿಮೆ ಎಂದೇ ಆಗುತ್ತದೆ.
ಕರ್ಕಾಟಕ
ಸಿಟ್ಟು ಅಥವಾ ಯೋಚನಾರಹಿತ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗುವುದು. ಇಷ್ಟವಸ್ತುವಿನ ಪ್ರಾಪ್ತಿಗಾಗಿ ಪ್ರಯತ್ನ ಪಡುವಿರಿ. ಇತರರನ್ನು ಸಂತೋಷ ಪಡಿಸುವ ಭರದಲ್ಲಿ ಕೆಲಸವನ್ನು ಮರೆಯದಿರಿ.
ಸಿಂಹ
ರಕ್ತದೊತ್ತಡ ನಿಯಂತ್ರಣದಲ್ಲಿರಿಸಲು ಯೋಗಾಭ್ಯಾಸ, ಧ್ಯಾನ ಮಾಡಿ. ವ್ಯಾವಹಾರಿಕ ಪಾಲುದಾರರ ಜತೆಯಲ್ಲಿ ಬಾಂಧವ್ಯ ಹೊಂದುವಿರಿ. ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ.
ಕನ್ಯಾ
ಭೂ ಖರೀದಿಯಂತಹ ಅಥವಾ ಗೃಹ ನಿರ್ಮಾಣ ಕಾರ್ಯದಂತಹ ಯೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ದೈವಬಲ ಒದಗಿ ಅಭಿವೃದ್ಧಿಗೊಳ್ಳುವಿರಿ. ಖಿನ್ನತೆ, ಋಣಾತ್ಮಕ ಚಿಂತನೆಗಳು ಕಾಡಲಿವೆ.
ತುಲಾ
ತಂದೆ ತಾಯಿಯನ್ನು ಸಂತೋಷ ಪಡಿಸುವಂಥ ಕ್ಷಣ ಇರಲಿದೆ. ನೌಕರಿಯಲ್ಲಿ ನಿಮ್ಮ ಅಭಿಪ್ರಾಯಕ್ಕೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗುವುದು.
ವೃಶ್ಚಿಕ
ಸಹೋದರರ ನಡವಳಿಕೆ ಅನುಮಾನಗಳಿಗೆ ಕಾರಣವಾದೀತು. ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ನಷ್ಟ ಸಂಭವಿಸಬಹುದು. ಕೆಲವು ವಿಷಯಗಳು ಬೇಸರ ಹುಟ್ಟಿಸಬಹುದು.
ಧನು
ಹೊಸದನ್ನು ಸಾಧಿಸುವ ಪ್ರಚೋದನೆ ಸೆಳೆಯಲಿದೆ. ಈಗ ನಡೆಯುತ್ತಿರುವ ಕೆಲಸ ಕಾರ್ಯಗಳು ನಿಲ್ಲುವಂತಾಗಬಹುದು. ಮನೆಯ ವಿಚಾರಗಳನ್ನು ಮಾತನಾಡಿ ವೈರತ್ವವನ್ನು ತಂದುಕೊಳ್ಳಬೇಡಿ.
ಮಕರ
ಕೋಪದಿಂದ ಪರಿಹಾರವಾಗದ ಕುಟುಂಬ ಸಮಸ್ಯೆಗಳು ಮೃದುವಾದ ಮಾತಿನಿಂದ ಪರಿಹಾರವಾಗುತ್ತವೆ. ವಿಚಾರಗಳು ಕಹಿಯಾಗಲಿ ಸಿಹಿಯಾಗಲಿ ಅದನ್ನು ಇರುವ ಹಾಗೆಯೆ ಸ್ವೀಕರಿಸಿ.
ಕುಂಭ
ದಾಂಪತ್ಯ ಜೀವನದಲ್ಲಿ ಕೆಲವು ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಒಳ್ಳೆಯದು. ನೈಸರ್ಗಿಕ ಶಕ್ತಿ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವ ಯೋಚನೆ ನಡೆಸುವಿರಿ. ಬಟ್ಟೆ ವ್ಯಾಪಾರ ನಡೆಸುವವರಿಗೆ ಲಾಭ.
ಮೀನ
ವಿದ್ಯುತ್ ಉಪಕರಣಗಳಿಂದ ಅಪಾಯಗಳು ಉಂಟಾಗಬಹುದು. ಹಿರಿಯರ ಆಸ್ಪತ್ರೆ, ಔಷಧಿಗಳಿಗಾಗಿ ಖರ್ಚು ಮಾಡಬೇಕಾದರೂ ಆದಾಯಕ್ಕೇನೂ ಕೊರತೆ ಇರದು.
ADVERTISEMENT
ADVERTISEMENT