ಬೆಂಗಳೂರು: ಅರವಿಂದ್ (14 ಅಂಕ) ಮತ್ತು ದಿನೇಶ್ (13 ಅಂಕ) ಅವರ ಉತ್ತಮ ಆಟದ ನೆರವಿನಿಂದ ಬ್ಯಾಂಕ್ ಆಫ್ ಬರೋಡಾ ತಂಡವು ರಾಜ್ಯ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ವಿವೇಕ್ಸ್ ಸ್ಪೋರ್ಟ್ಸ್ ಕ್ಲಬ್ ತಂಡದ ಮೇಲೆ 104–54 ಪಾಯಿಂಟ್ಗಳ ಭಾರಿ ಗೆಲುವು ಪಡೆದು ಸೆಮಿಫೈನಲ್ ತಲುಪಿತು.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸದರ್ನ್ ಬ್ಲೂಸ್ ತಂಡ 90–74 ಪಾಯಿಂಟ್ಗಳಿಂದ ಬೀಗಲ್ಸ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡವನ್ನು ಸೋಲಿಸಿತು. ಬೆಂಜಮಿನ್ (20), ಆದಿತ್ಯ (17) ವಿಜೇತ ತಂಡದ ಪರ, ಅಚಿಂತ್ಯ (22), ರವಿ (22) ಅವರು ಬೀಗಲ್ಸ್ ಪರ ಉತ್ತಮವಾಗಿ ಆಡಿದರು.

ಇತರ ಪಂದ್ಯಗಳಲ್ಲಿ ಯಂಗ್ ಒರಿಯನ್ಸ್ ಎಸ್ಸಿ ತಂಡ 114–89 ಪಾಯಿಂಟ್ಗಳಿಂದ ಎಂಎನ್ಕೆ ರಾವ್ ಪಾರ್ಕ್ ಬಿ.ಸಿ. ತಂಡವನ್ನು, ಡಿವೈಇಎಸ್, ಬೆಂಗಳೂರು ತಂಡ 100–93 ರಿಂದ ಜಿಎಸ್ಟಿ ಅಂಡ್ ಕಸ್ಟಮ್ಸ್ ತಂಡವನ್ನು ಸೋಲಿಸಿದವು. ಡಿವೈಇಎಸ್ನ ಮನೋಜ್ 27 ಅಂಕ, ಜಿಎಸ್ಟಿ ತಂಡದ ಸಮ್ಯಮ್ 27 ಮತ್ತು ವಿಷ್ಣು 24 ಅಂಕ ಗಳಿಸಿದರು.

ಮಹಿಳೆಯರ ಸೆಮಿಫೈನಲ್ ಲೀಗ್ ಪಂದ್ಯಗಳಲ್ಲಿ ಬೀಗಲ್ಸ್ 51–29 ರಿಂದ ಮೌಂಟ್ಸ್ ಕ್ಲಬ್ ತಂಡವನ್ನು ಮಣಿಸಿದರೆ, ಸೌತ್ ವೆಸ್ಟರ್ನ್ ರೈಲ್ವೆ 61–43 ರಿಂದ ರಾಜಮಹಲ್ ಬಿ.ಸಿ. ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.