ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಹಾಸ್ಯ ಕಲಾವಿದ ಶಿವಕುಮಾರ್ ಹಾಗೂ ಮಾನಸ ಗುರುಸ್ವಾಮಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳಲ್ಲಿ ಶಿವಕುಮಾರ್ ಹಾಗೂ ಮಾನಸ ಅವರು ಒಟ್ಟಿಗೆ ನಟಿಸಿದ್ದರು.
ಚಿತ್ರ: ಇನ್‌ಸ್ಟಾಗ್ರಾಮ್
ಇದೀಗ ಕುಟುಂಬಸ್ಥರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮಾನಸ ಗುರುಸ್ವಾಮಿ ಹಾಗೂ ಶಿವಕುಮಾರ್ ನಿಶ್ಚಿತಾರ್ಥ ಸಮಾರಂಭ ನಡೆದಿದೆ.
ಚಿತ್ರ: ಇನ್‌ಸ್ಟಾಗ್ರಾಮ್
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಈ ಇಬ್ಬರ ನಿಶ್ಚಿತಾರ್ಥ ಸಮಾರಂಭಕ್ಕೆ ಸಿಹಿಕಹಿ ಚಂದ್ರು, ಮಂಜು ಪಾವಗಡ, ನಟ ದೊಡ್ಡಣ್ಣ, ನನ್ನಮ್ಮ ಸೂಪರ್ ಸ್ಟಾರ್ ವಿಜೇತೆ ಯಶಸ್ವಿನಿ ಮತ್ತು ವಂಶಿಕಾ ಅಂಜನಿ ಕಶ್ಯಪ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಮಾನಸ ಗುರುಸ್ವಾಮಿ ಹಾಗೂ ಶಿವಕುಮಾರ್ ಗಿಚ್ಚಿ ಗಿಲಿಗಿಲಿ ಹಾಗೂ ಮಜಾ ಭಾರತ ಶೋ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ರಂಜಿಸಿದ್ದಾರೆ.