ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತಿರುವ ಭಾರತ ಕ್ರಿಕೆಟ್ ತಂಡ, ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 30ರಿಂದ ಆರಂಭವಾಗಲಿರುವ 3 ಪಂದ್ಯಗಳ ಸರಣಿಗಾಗಿ ಕೆ.ಎಲ್. ರಾಹುಲ್ ನಾಯಕತ್ವದ ಭಾರತ ತಂಡ ರಾಂಚಿಗೆ ಆಗಮಿಸಿದೆ. ಈ ವೇಳೆ ಟೀಂ ಇಂಡಿಯಾದ ಕೆಲ ಆಟಗಾರರು ಮಾಜಿ ನಾಯಕ ಎಂ.ಎಸ್.ಧೋನಿಯವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಏಕದಿನ ಸರಣಿಗೂ ಮುನ್ನ ರಾಂಚಿಗೆ ಆಗಮಿಸಿರುವ ಭಾರತ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಋತುರಾಜ್ ಗಾಯಕವಾಡ್ ಅವರು ರಾಂಚಿಯಲ್ಲಿರುವ ಧೋನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಧೋನಿ ಮನೆಯಲ್ಲಿನ ಆತಿಥ್ಯ ಸ್ವೀಕರಿಸಿ ಹೊರಟಾಗ ಮಾಜಿ ನಾಯಕ ಧೋನಿಯವರು ಟೀಂ ಇಂಡಿಯಾದ ಸೂಪರ್ಸ್ಟಾರ್ ವಿರಾಟ್ ಕೊಹ್ಲಿಯವರನ್ನು ಕಾರಿನಲ್ಲಿ ಕೂರಿಸಿಕೊಂಡು ರಾಂಚಿಯಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಕೊಹ್ಲಿಯವರು ಧೋನಿ ಪಕ್ಕದಲ್ಲಿ ಕುಳಿತುಕೊಂಡು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಧೋನಿ ಕಾರು ಚಲಾಯಿಸುತ್ತಿರುವುದನ್ನು ಕಾಣಬಹುದು.

ಧೋನಿ ನನ್ನ ಆಲ್ ಟೈಮ್ ನಾಯಕ ಎಂದಿದ್ದ ಕೊಹ್ಲಿ

ಈ ಹಿಂದೆ ವಿರಾಟ್ ಕೊಹ್ಲಿಯವರು ಫಾರ್ಮ್ ಕಳೆದುಕೊಂಡಿದ್ದಾಗ ಧೋನಿಯವರು ತಮ್ಮ ನೆರವು ನೀಡಿರುವುದಾಗಿ, ಮತ್ತು ತಾವು ಆಟದಲ್ಲಿ ಆಟದಲ್ಲಿ ಕುಗ್ಗಿದಾಗಲೆಲ್ಲ ಧೋನಿ ತಮ್ಮನ್ನು ಬೆಂಬಲಿಸಿರುವುದಾಗಿಯೂ ಸ್ವತಃ ವಿರಾಟ್ ಕೊಹ್ಲಿಯವರು ಅನೇಕ ಸಂದರ್ಶನದಲ್ಲಿ ಹೇಳಿದ್ದಾರೆ.

ಸದ್ಯ ಇಬ್ಬರು ದಿಗ್ಗಜ ಆಟಗಾರರ ಸಮ್ಮಿಲನ ಕ್ರಿಕೆಟ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಅಭಿಮಾನಿಗಳು ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.