‘ಟರ್ಫ್ ಇದ್ದರೆ ಪ್ರತಿಭೆಗಳಿಗೆ ಅವಕಾಶ’
‘ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಖುಷಿಯಾಗಿದೆ. ಅಲ್ಲಿ ಟರ್ಫ್ ಅಂಗಣದ ಮೇಲೆ ಆಡಬೇಕು. ಆದರೆ ನಮ್ಮಲ್ಲಿ ಟರ್ಫ್ ಮೈದಾನದ ಸೌಲಭ್ಯವಿಲ್ಲ. ನಮ್ಮ ಜಿಲ್ಲೆಗೊಂದು ಟರ್ಫ್ ಸೌಲಭ್ಯವಿದ್ದರೆ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದು ಹಾಕಿ ತರಬೇತುದಾರ ಸಂಜಯ ಬಾಣಾದ ಹೇಳಿದರು. ‘ಭಾರತಕ್ಕೆ ಪದಕ ತರಲಿ’: ‘ನಮ್ಮ ಮಗ ಹಾಕಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಮುಂಬರುವ ದಿನಗಳಲ್ಲಿ ಭಾರತ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲಿ ಭಾರತಕ್ಕೆ ಪದಕ ತರಲಿ ಎಂಬ ಆಸೆಯಿದೆ’ ಎಂದು ಆಳಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಹೊರಗುತ್ತಿಗೆ ನೌಕರರಾಗಿರುವ ಹರ್ಷವರ್ಧನನ ತಂದೆ ಕಾಳಪ್ಪ ಹರ್ಷ ವ್ಯಕ್ತಪಡಿಸಿದರು.