ಶನಿವಾರ, ಜನವರಿ 25, 2020
28 °C

ಇಸ್ರೋದಲ್ಲಿ ನೇರ ಸಂದರ್ಶನ: ITI, ENGINEERING ಆದವರಿಂದ 179 ಹುದ್ದೆಗಳಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಟೆಕ್ನಿಷಿಯನ್‌ ಮತ್ತು ಟ್ರೇಡ್‌ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ನೇರ ಸಂದರ್ಶನಕ್ಕೆ ಕರೆಯಲಾಗಿದೆ.

ಐಟಿಐ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ನಡೆಯಲಿದೆ.

ಹುದ್ದೆಗಳ ವಿವರ

1)  ಟೆಕ್ನಿಷಿಯನ್‌  ಅಪ್ರೆಂಟಿಸ್‌– 59

2) ಟ್ರೇಡ್‌ ಅಪ್ರೆಂಟಿಸ್‌–120

ಇದನ್ನೂ ಓದಿ: ಕರ್ನಾಟಕ ಸರ್ಕಾರ: SSLC ಪಾಸ್‌ ಆದವರಿಗೆ 2814 ಡ್ರೈವರ್‌, ಕಂಡಕ್ಟರ್‌ ಹುದ್ದೆಗಳು

ತರಬೇತಿ ಭ್ಯತೆ: ಟೆಕ್ನಿಷಿಯನ್‌ ಮತ್ತು ಟ್ರೇಡ್‌ ಅಪ್ರೆಂಟಿಸ್‌ಗಳಿಗೆ ತರಬೇತಿ ಭತ್ಯೆಯಾಗಿ ಮಾಸಿಕ ₹ 9000 ನೀಡಲಾಗುವುದು. 

ವಯಸ್ಸು: ಗರಿಷ್ಠ ವಯೋಮಿತಿಯನ್ನು 35 ವರ್ಷಕ್ಕೆ ನಿಗದಿಪಡಿಸಲಾಗಿದೆ. (ಸರ್ಕಾರದ ನಿಯಮಗಳ ಅನ್ವಯ ಮಯೋಮಿತಿಯಲ್ಲಿ ಸಡಿಲಿಕೆ ಇರುವುದು)

ಅರ್ಜಿ ಶುಲ್ಕ: ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಆಸಕ್ತ ಅಭ್ಯರ್ಥಿಗಳು www.iprc.gov.in ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. 

ಸಂದರ್ಶನ ದಿನಾಂಕ

ಟೆಕ್ನಿಷಿಯನ್‌ ಅಪ್ರೆಂಟಿಸ್‌: 21.12.2019 (ಶನಿವಾರ)

ಟ್ರೇಡ್‌ ಅಪ್ರೆಂಟಿಸ್‌ : 04.01.2020 (ಶನಿವಾರ)

ಸಂದರ್ಶನ ಸ್ಥಳ

ISRO Propulsion Complex (IPRC),

Mahendragiri, Tirunelveli District,

TamilNadu

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ಹಾಗೂ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ನೋಡಬಹುದು.

ಅಧಿಸೂಚನೆ ಲಿಂಕ್‌: https://bit.ly/2tfGesL

ವೆಬ್‌ಸೈಟ್‌www.iprc.gov.in

ಇದನ್ನೂ ಓದಿ:  SSLC, ITI ಆದವರಿಗೆ ದಕ್ಷಿಣ ರೈಲ್ವೆಯಲ್ಲಿ ಕೆಲಸ: 1208 ಅಪ್ರೆಂಟಿಸ್‌ಗಳ ನೇಮಕಾತಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು