ಮಂಗಳವಾರ, ನವೆಂಬರ್ 19, 2019
23 °C

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1314 ಹುದ್ದೆಗಳು

Published:
Updated:
Prajavani

ಕೇಂದ್ರ ಗೃಹ ಸಚಿವಾಲಯದ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ 1314 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆ: ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌

ವಯೋಮಿತಿ: 1 ಆಗಸ್ಟ್ 2019ಕ್ಕೆ ಅನ್ವಯವಾಗುವಂತೆ 35 ವರ್ಷ ಮೀರಿರಬಾರದು.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ.

ಉದ್ಯೋಗ ಸ್ಥಳ: ದೇಶದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನ: 9 ಡಿಸೆಂಬರ್‌ 2019

ಹೆಚ್ಚಿನ ಮಾಹಿತಿಗೆ: www.cisf.gov.in ಗೆ ಭೇಟಿ ನೀಡಿ.

**

ಎಸ್‌ಎಸ್‌ಸಿ–ಸಿಜಿಎಲ್ ನೇಮಕಾತಿ
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ ಗ್ರೂಪ್‌–ಬಿ ಮತ್ತು ಗ್ರೂಪ್‌–ಸಿ ಹುದ್ದೆಗಳ ಭರ್ತಿಗೆ ಕಂಬೈನ್ಡ್ ಗ್ಯಾಜುಯೇಟ್ ಲೆವೆಲ್ (ಸಿಜಿಎಲ್‌) ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವಿರ: ಅಸಿಸ್ಟೆಂಟ್ ಆಡಿಟ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಇನ್‌ಸ್ಪೆಕ್ಟರ್‌ ಆಫ್ ಇನ್‌ಕಂ ಟ್ಯಾಕ್ಸ್, ಇನ್‌ಸ್ಪೆಕ್ಟರ್ (ಸೆಂಟ್ರಲ್ ಎಕ್ಸೈಸ್‌), ಇನ್‌ಸ್ಪೆಕ್ಟರ್ (ಪ್ರಿವೆಂಟಿವ್ ಆಫೀಸರ್), ಇನ್‌ಸ್ಪೆಕ್ಟರ್ (ಎಕ್ಸಾಮಿನರ್), ಅಸಿಸ್ಟೆಂಟ್ ಎನ್‌ಫೋರ್ಸ್‌ಮೆಂಟ್ ಆಫೀಸರ್, ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಡಿವಿಷನಲ್ ಅಕೌಂಟೆಂಟ್, ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್, ಆಡಿಟರ್, ಅಕೌಂಟೆಂಟ್, ಜೂನಿಯರ್ ಅಕೌಂಟೆಂಟ್

ವಿದ್ಯಾರ್ಹತೆ: ಪದವಿ, ಚಾರ್ಟೆಡ್ ಅಕೌಂಟೆಂಟ್‌ ಅಥವಾ ಕಾಸ್ಟ್ ಮತ್ತು ಮ್ಯಾನೇಜ್‌ಮೆಂಟ್‌ ಅಕೌಂಟೆಂಟ್ ಅಥವಾ ಕಂಪನಿ ಸೆಕ್ರೆಟರಿ ಅಥವಾ ಎಂ.ಕಾಂ (ಮಾಸ್ಟರ್ಸ್ ಇನ್ ಬಿಸಿನೆಸ್‌ ಸ್ಟಡೀಸ್)

ವಯೋಮಿತಿ: 1 ಜನವರಿ 2020ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ಹಾಗೂ ಆಯಾ ಹುದ್ದೆಗೆ ಸಂಬಂಧಿಸಿದಂತೆ ಗರಿಷ್ಠ ಮಯೋಮಿತಿ ನಿಗದಿ ಪಡಿಸಲಾಗಿದೆ. ಮೀಸಲಾತಿ ನಿಯಮಗಳು ಅನ್ವಯಿಸುತ್ತವೆ.

ವೇತನ: ₹25,500ರಿಂದ ₹1,51,100

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಉಡುಪಿ, ಧಾರವಾಡ, ಮೈಸೂರು, ಮಂಗಳೂರು, ಕಲಬುರ್ಗಿ.

ಪರೀಕ್ಷಾ ಶುಲ್ಕ: ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹100. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನ: 25.11.2019.

ಹೆಚ್ಚಿನ ಮಾಹಿತಿಗೆ: www.ssc.nic.in

**

ಸೆಂಟ್ರಲ್ ಬ್ಯಾಂಕ್‌ನಲ್ಲಿ 74 ಹುದ್ದೆಗಳು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 74 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆ ಹೆಸರು: ಮಾಹಿತಿ ತಂತ್ರಜ್ಞಾನ, ಸುರಕ್ಷತಾ ಅಧಿಕಾರಿ

ವಯೋಮಿತಿ: ಕನಿಷ್ಠ 21, ಗರಿಷ್ಠ 45 ವರ್ಷ (ಮೀಸಲಾತಿಗೆ ಅನುಗುಣವಾಗಿ)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ₹50, ಇತರೆ ಅಭ್ಯರ್ಥಿಗಳಿಗೆ ₹550.

ಅರ್ಜಿ ಸಲ್ಲಿಸಲು ಕೊನೆಯ ದಿನ: 21 ನವೆಂಬರ್ 2019

ಉದ್ಯೋಗ ಸ್ಥಳ: ದೇಶದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಹೆಚ್ಚಿನ ಮಾಹಿತಿಗೆ: https://bit.ly/2r4rDPN

**


ಇಸ್ರೊದಲ್ಲಿ ಸೈಂಟಿಸ್ಟ್ ಹುದ್ದೆಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 327 ಸೈಂಟಿಸ್ಟ್ ಹಾಗೂ ಎಂಜಿನಿಯರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಸೈಂಟಿಸ್ಟ್, ಎಂಜಿನಿಯರ್‌ (ಎಲೆಕ್ಟ್ರಾನಿಕ್ಸ್‌)–131, ಸೈಂಟಿಸ್ಟ್, ಎಂಜಿನಿಯರ್ (ಮೆಕಾನಿಕಲ್‌)–135, ಎಂಜಿನಿಯರ್‌ (ಕಂಪ್ಯೂಟರ್ ಸೈನ್ಸ್‌)– 58, ಎಂಜಿನಿಯರ್ (ಎಲೆಕ್ಟ್ರಾನಿಕ್ಸ್‌)–3

ವಿದ್ಯಾರ್ಹತೆ: ಶೇ 65ರಷ್ಟು ಅಂಕಗಳೊಂದಿಗೆ ಬಿ.ಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು.

ವಯೋಮಿತಿ: 4 ನವೆಂಬರ್ 2019ರ ಹೊತ್ತಿಗೆ 35 ವರ್ಷ ಮೀರಿರಬಾರದು (ಮೀಸಲಾತಿ ಇರುತ್ತದೆ).

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.

ವೇತನ: ₹56,000ದಿಂದ ಪ್ರಾರಂಭ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹೈದರಾಬಾದ್‌, ಚೆನ್ನೈ

ಅರ್ಜಿ ಸಲ್ಲಿಸಲು ಕೊನೆಯ ದಿನ: 4 ನವೆಂಬರ್ 2019.

ಹೆಚ್ಚಿನ ಮಾಹಿತಿಗೆ: www.isro.gov.in

ಪ್ರತಿಕ್ರಿಯಿಸಿ (+)