ಶನಿವಾರ, ಡಿಸೆಂಬರ್ 14, 2019
22 °C

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ 552 ನರ್ಸ್‌ ಹುದ್ದೆಗಳ ಭರ್ತಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಖಾಲಿ ಇರುವ 552 ನರ್ಸ್‌ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:  PUC, DEGREE ಪಡೆದವರಿಗೆ ಉದ್ಯೋಗ: ಸಿಬಿಎಸ್‌ಇಯಲ್ಲಿ 357 ಹುದ್ದೆಗಳಿಗೆ ಅರ್ಜಿ

ಒಟ್ಟು ಹುದ್ದೆಗಳ ಸಂಖ್ಯೆ: 552

ವಿದ್ಯಾರ್ಹತೆ: ಮ್ಯಾನತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌.ಸಿ ನರ್ಸಿಂಗ್‌, ಪೋಸ್ಟ್‌ ಬಿಎಸ್‌.ಸಿ ನರ್ಸಿಂಗ್ ಪದವಿ ಪೂರೈಸಿರಬೇಕು. ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಂಡಿರಬೇಕು.

ವೇತನ: ಮಾಸಿಕ ₹ 24,200 (ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ₹22,000) ಹೆಚ್ಚುವರಿಯಾಗಿ ₹8,000 ಸೇವಾ ಪ್ರೋತ್ಸಾಹ ಭತ್ಯೆ ಕೂಡ ನೀಡಲಾಗುತ್ತದೆ.

ವಯಸ್ಸು: ಕನಿಷ್ಠ–18, ಗರಿಷ್ಠ –35 ವರ್ಷ (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ಇದನ್ನೂ ಓದಿ:  SSLC ಆದವರಿಗೆ ಸರ್ಕಾರಿ ಉದ್ಯೋಗ: 73 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ವಯೋಮಿತಿ:  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಮಗವಿಕಲರಿಗೆ 10 ವರ್ಷಗಳು.

ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್‌ ಆಧಾರಿತ ಆನ್‌ಲೈನ್ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪರೀಕ್ಷೆಯಲ್ಲಿ ಮೆರಿಟ್‌ ಪಡೆದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು. 

ನೇಮಕಾತಿ ಸ್ಥಳಗಳು: ಮೈಸೂರು, ಕೋಲಾರ, ಬಳ್ಳಾರಿ, ಕೊಪ್ಪಳ, ಬೀದರ್‌, ರಾಯಚೂರು, ಬಾಗಲಕೋಟೆ

ಅರ್ಜಿ ಸಲ್ಲಿಸಲು ಕೊನೆಯ ದಿನ: 12 ಡಿಸೆಂಬರ್ 2019.

ಅಧಿಸೂಚನೆ ಲಿಂಕ್‌: https://bit.ly/34ws44d

ಸರ್ಕಾರದ ವೆಬ್‌ಸೈಟ್‌: https://www.karnataka.gov.in/hfw/Pages/home.aspx

 ಇದನ್ನೂ ಓದಿ:  SSLC, ITI ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗ: 1104 ಅಪ್ರೆಂಟಿಸ್‌ಗಳ ನೇಮಕಾತಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು