ನೇಮಕಾತಿ ಇಲ್ಲ ಎಲ್‌ಐಸಿ ಸ್ಪಷ್ಟನೆ

7

ನೇಮಕಾತಿ ಇಲ್ಲ ಎಲ್‌ಐಸಿ ಸ್ಪಷ್ಟನೆ

Published:
Updated:
lic

ಬೆಂಗಳೂರು: ಅಸಿಸ್ಟಂಟ್‌ ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಎಎಒ) ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಸ್ಪಷ್ಟಪಡಿಸಿದೆ.

ನಿಗಮವು ‘ಎಎಒ’ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ವಿವಿಧ ದಿನಪತ್ರಿಕೆಗಳ ಅಂತರ್ಜಾಲ ತಾಣಗಳಲ್ಲಿ ಮತ್ತು ಉದ್ಯೋಗ ಅವಕಾಶಗಳ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿರುವ ನಕಲಿ ಜಾಹೀರಾತುಗಳಿಗೆ ಯಾರೊಬ್ಬರೂ ಮೋಸ ಹೋಗಬಾರದು ಎಂದು ನಿಗಮದ ದಕ್ಷಿಣ ಮಧ್ಯ ವಲಯದ ಪ್ರಾದೇಶಿಕ ಮ್ಯಾನೇಜರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಹುದ್ದೆಗಳ ನೇಮಕಾತಿಗೆ ನಿಗಮವು ಜಾಹೀರಾತು ನೀಡಿದ್ದರೆ, ಅವುಗಳನ್ನು ಸಂಸ್ಥೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ (www.licindia.in) ತಪ್ಪದೇ ಪ್ರಕಟಿಸಲಾಗುವುದು ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !