ಸೋಮವಾರ, ಮೇ 17, 2021
31 °C

ವಿದ್ಯಾರ್ಥಿವೇತನ ಕೈಪಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿವೇತನ : ಜಿನೀವಾ ವಿಶ್ವವಿದ್ಯಾಲಯದ ಎಕ್ಸ್‌ಲೆನ್ಸ್‌ ಮಾಸ್ಟರ್ ಫೆಲೋಶಿಪ್ 2020

ವಿವರಣೆ: ಖಗೋಳವಿಜ್ಞಾನ, ಜೀವವಿಜ್ಞಾನ, ರಸಾಯನ ವಿಜ್ಞಾನಮತ್ತು ಜೀವರಾಸಾಯನಿಕ, ಔಷಧ ವಿಜ್ಞಾನ ಸೇರಿದಂತೆ ವೈಜ್ಞಾನಿಕ ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ವಿಟ್ಜರ್‌ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗ ಈ ವಿದ್ಯಾರ್ಥಿವೇತನ ಪ್ರಕಟಿಸಿದೆ.

ಅರ್ಹತೆ: ಪದವೀಧರ ಅಥವಾ ಪದವಿಯ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಯಾವುದೇ ಸ್ನಾತಕೋತ್ತರ ಕೋರ್ಸ್‌ನಲ್ಲಿ ಪ್ರವೇಶ ಪಡೆಯಬೇಕು. ಇಲ್ಲವೇ ಪ್ರವೇಶಕ್ಕೆ ಒಪ್ಪಿಗೆ ಪಡೆದಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವವರಿಗೆ ವಾರ್ಷಿಕ ₹7.89 ಲಕ್ಷದಿಂದ ₹ 11.84 ಲಕ್ಷದವರೆಗೆ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಮಾರ್ಚ್‌ 15
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ
ಮಾಹಿತಿಗೆ: www.b4s.in/praja/EMF4

***

ವಿದ್ಯಾರ್ಥಿವೇತನ: ಶ್ರೀರಾಮ್‌ ಕ್ಯಾಪಿಟಲ್‌ ವಿದ್ಯಾರ್ಥಿವೇತನ 2019–20

ವಿವರಣೆ: ಸರಕು ಸಾಗಣೆ ವಾಹನಗಳ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀರಾಮ್‌ ಕ್ಯಾಪಿಟಲ್‌ ಲಿಮಿಟೆಡ್‌ ಈ ವಿದ್ಯಾರ್ಥಿವೇತನ ನೀಡಲಿದೆ. 9ನೇ ತರಗತಿ ಪಾಸಾಗಿರುವ ಹಾಗೂ 10, 11 ಅಥವಾ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಹತೆ: ಸರಕು ಸಾಗಣೆ ವಾಹನಗಳ ಚಾಲಕರ ಮಕ್ಕಳು (10, 11 ಅಥವಾ 12ನೇ ತರಗತಿಯಲ್ಲಿ ಓದುತ್ತಿರುವವರು) ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ ಮಿತಿ ₹ 4 ಲಕ್ಷ.  

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹15,000 ಆರ್ಥಿಕ ನೆರವು ದೊರೆಯಲಿದೆ

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಮಾರ್ಚ್‌ 15
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ
ಮಾಹಿತಿಗೆ: www.b4s.in/praja/SCS1

***

ವಿದ್ಯಾರ್ಥಿವೇತನ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್‌ಟಿಎಫ್‌ಸಿ ವಿದ್ಯಾರ್ಥಿವೇತನ

ವಿವರ: ಸರಕು ಸಾಗಣೆ ವಾಹನಗಳ ಚಾಲಕರ ಕುಟುಂಬಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ಹಣಕಾಸಿನ ನೆರವು ನೀಡಲು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ ಈ ವಿದ್ಯಾರ್ಥಿವೇತನ ನೀಡಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಹತೆ: ವಿದ್ಯಾರ್ಥಿಗಳು ಡಿಪ್ಲೊಮಾ /ಐಟಿಐ/ ಪಾಲಿಟೆಕ್ನಿಕ್ ಅಥವಾ ಪದವಿ/ ಎಂಜಿನಿಯರಿಂಗ್ (3-4 ವರ್ಷ) ಕೋರ್ಸ್‌ಗಳಿಗೆ ದಾಖಲಾಗಿರಬೇಕು. ಅವರು 10 ಮತ್ತು 12ನೇ ತರಗತಿಯಲ್ಲಿ ಶೇ 60ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಸರಕು ಸಾಗಣೆ ವಾಹನ ಚಾಲಕರ ಕುಟುಂಬದವರಾಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಐಟಿಐ/ ಪಾಲಿಟೆಕ್ನಿಕ್‌/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ (ಗರಿಷ್ಠ 3 ವರ್ಷ) ವಾರ್ಷಿಕ ₹15 ಸಾವಿರ ಹಾಗೂ ಪದವಿ/ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ (ಗರಿಷ್ಠ 4 ವರ್ಷ) ವಾರ್ಷಿಕ ₹ 35 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನ: 2020ರ ಮಾರ್ಚ್‌ 15
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌
ಮಾಹಿತಿಗೆ: www.b4s.in/praja/STFC1

ಕೃಪೆ: buddy4study.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು