ಭಾನುವಾರ, ಫೆಬ್ರವರಿ 23, 2020
19 °C

ಏರೊನಾಟಿಕಲ್ ಎಂಜಿನಿಯರಿಂಗ್‌ ಲಲಿತಾಗೆ ಪ್ರಥಮ ರ‍್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಇಲ್ಲಿನ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಲಲಿತಾ.ಆರ್, ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ. ಅಲ್ಲದೆ ವಿಟಿಯು ಚಿನ್ನದ ಪದಕ ಮತ್ತು ಡಾ.ಎಂ.ವಿ.ಜಯರಾಮನ್ ಸ್ಮರಣಾರ್ಥ ನೀಡುವ ಚಿನ್ನದ ಪದಕಗಳನ್ನೂ ಅವರು ಮುಡಿಗೇರಿಸಿಕೊಂಡಿದ್ದಾರೆ. 

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನವರಾದ ಲಲಿತಾ ಅವರು ರಾಜೇಂದ್ರ ಹಾಗೂ ಆರ್.ಚಿತ್ರಾ ದಂಪತಿಯ ಪುತ್ರಿ. ತರಕಾರಿ ವ್ಯಾಪಾರ ಮಾಡುತ್ತಲೇ ತಮ್ಮ ಮಗಳನ್ನು ಎಂಜಿನಿಯರಿಂಗ್‌ ಓದಿಸಿದ್ದಾರೆ. 

ಪ್ರಾಥಮಿಕ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಚಿತ್ರದುರ್ಗದಲ್ಲೇ ಪೂರ್ಣಗೊಳಿಸಿದ ಲಲಿತಾ, ಸಿಇಟಿಯಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿ, ಸರ್ಕಾರಿ ಕೋಟಾದಲ್ಲಿ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರೊನಾಟಿಕಲ್ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಕಾಲೇಜಿಗೆ ಪ್ರಥಮಸ್ಥಾನ ಪಡೆದಿದ್ದಾರೆ.

ಈಕೆಯ ಓದುವ ಹಂಬಲ ಮತ್ತು ಕುಟುಂಬದ ಹಿನ್ನೆಲೆಯನ್ನು ಗಮನಿಸಿದ್ದ ಕಾಲೇಜಿನ ಆಡಳಿತ ಮಂಡಳಿ, ಉಚಿತವಾಗಿ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಟ್ಟಿತ್ತು.

‘ತಂದೆ-ತಾಯಿ ಪ್ರತಿನಿತ್ಯ ಬೆಳಿಗ್ಗೆ 4ರಿಂದ ರಾತ್ರಿ 10ರವರೆಗೂ ದುಡಿಯುತ್ತಾ ನಮಗಾಗಿ ಶ್ರಮಿಸುತ್ತಿರುವುದನ್ನು ಗಮನಿಸಿದ್ದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಮಹದಾಸೆಯಲ್ಲಿ ನಿತ್ಯ ಸಂಜೆ 3 ತಾಸು ಹಾಗೂ ರಾತ್ರಿ 10ರಿಂದ 3ರವರೆಗೂ ಓದುತ್ತಿದ್ದೆ. ಪೋಷಕರು ಹೆಮ್ಮೆ ಪಡುವಂತಹ ಕಾರ್ಯ ಮಾಡಿರುವುದಕ್ಕೆ ಖುಷಿ ಎನಿಸಿದೆ’ ಎಂದು ಲಲಿತಾ ಹೇಳುತ್ತಾರೆ.

ಕಾಲೇಜಿನ ಕೆ.ಪವನ್ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್‌  ಗಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು