ಭಾನುವಾರ, ಆಗಸ್ಟ್ 14, 2022
22 °C

ಶಿಕ್ಷಣದ ಸ್ಥಿತಿಗತಿಗೆ ಬೆಳಕು ಚೆಲ್ಲುವ ಸಮಗ್ರ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಸಾಂಖ್ಯಿಕ ಸಂಘಟನೆಯು (ಎನ್‌ಎಸ್‌ಒ) ನಡೆಸಿರುವ ಸಮೀಕ್ಷೆಯು ದೇಶದ ಶಿಕ್ಷಣದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದೆ. ವಿದ್ಯಾರ್ಥಿಗಳಲ್ಲಿ ಯಾವ ವಿಷಯ ಕಲಿಯಲು ಹೆಚ್ಚು ಒಲವು, ವಿವಿಧ ಕೋರ್ಸ್‌ಗಳಿಗೆ ಆಗುತ್ತಿರುವ ವೆಚ್ಚ ಎಷ್ಟು, ವಿವಿಧ ಕೋರ್ಸ್‌ಗಳನ್ನು ಕಲಿಯುತ್ತಿರುವ ಮಹಿಳೆಯರು ಮತ್ತು ಪುರುಷರ ಪ್ರಮಾಣ ಎಷ್ಟು ಮುಂತಾದ ದತ್ತಾಂಶಗಳನ್ನು ಸಮೀಕ್ಷೆಯಲ್ಲಿ ಸಂಗ್ರಹಿಸಲಾಗಿದೆ.

ಸಮೀಕ್ಷೆಯ ವರದಿ ಇತ್ತೀಚೆಗೆ ಬಿಡುಗಡೆ ಆಗಿದೆ. ನೀತಿ ನಿರೂಪಣೆಗಾಗಿ ಇದು ಅತ್ಯಂತ ಉಪಯುಕ್ತ ಮತ್ತು ವಿಸ್ತಾರವಾದ ಪ್ರಾಥಮಿಕ ದತ್ತಾಂಶ ಮೂಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017 ಜುಲೈಯಿಂದ 2018ರ ಜೂನ್‌ ಅವಧಿಯಲ್ಲಿ ಸಮೀಕ್ಷೆ ನಡೆದಿದೆ. ಒಟ್ಟು 6,188 ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದ 64,519 ಕುಟುಂಬಗಳು ಮತ್ತು ನಗರ ಪ್ರದೇಶದ 49,238 ಕುಟುಂಬಗಳು ಸಮೀಕ್ಷೆಯಲ್ಲಿ ಭಾಗಿಯಾಗಿವೆ

ಖಾಸಗಿ ಸಂಸ್ಥೆಗಳ ಆಕರ್ಷಣೆ 

ದೇಶದಲ್ಲಿ ಪೂರ್ವ ಪ್ರಾಥಮಿಕ ಮಟ್ಟದಲ್ಲಿ ಸರ್ಕಾರಿ ಸಂಸ್ಥೆಗಳಿಗಿಂತ ಅನುದಾನರಹಿತ ಖಾಸಗಿ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವವ ಮಕ್ಕಳ ಸಂಖ್ಯೆ ಹೆಚ್ಚು. ಆದರೆ ಆ ನಂತರದ ಹಂತಗಳಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಅಧಿಕ. ವಿಶೇಷವೆಂದರೆ, ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚಾಗಿ, ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ

ಶಿಕ್ಷಣಕ್ಕಾಗಿ ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಜನರು ನೀಡಿರುವ ಕಾರಣಗಳು:

* ಶಿಕ್ಷಣ ಸಂಸ್ಥೆ ಮನೆಯ ಸಮೀಪದಲ್ಲಿದೆ

* ಪ್ರಯತ್ನಿಸಿದರೂ ಸರ್ಕಾರಿ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿಲ್ಲ

* ಸಾಮಾಜಿಕ ಕಾರಣ (ಸಂಬಂಧಿಕರು, ನೆರೆಕರೆಯವರು, ಮಿತ್ರರ ಮಕ್ಕಳು ಇದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ ಎಂಬುದು)

* ಪ್ರತ್ಯೇಕ ಮನೆಪಾಠ ಹೇಳಿಸುವ ಅಗತ್ಯವಿಲ್ಲ. ಟ್ಯೂಶನ್‌ ಶಾಲಾ ಚಟುವಟಿಕೆಯ ಭಾಗವಾಗಿದೆ 

* ಮನೆಯ ಸಮೀಪದ ಸರ್ಕಾರಿ ಸಂಸ್ಥೆಯಲ್ಲಿ ಬೋಧನಾ ಗುಣಮಟ್ಟ ಚೆನ್ನಾಗಿಲ್ಲ

* ಖಾಸಗಿ ಸಂಸ್ಥೆಯಲ್ಲಿ ಕೆಲವು ವಿಶೇಷ ಸೌಲಭ್ಯಗಳು ಇವೆ

* ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುತ್ತಾರೆ 

* ಮನೆಕೆಲಸ‌ ಕಡಿಮೆ ಇರುತ್ತದೆ

***

ದೇಶದಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿ ಶೇ 33ರಷ್ಟು ಮಕ್ಕಳು, ಪ್ರಾಥಮಿಕ ಹಂತದಲ್ಲಿ ಶೇ 62, ಹಿರಿಯ ಪ್ರಾಥಮಿಕ ಹಂತದಲ್ಲಿ ಶೇ 72, ಪ್ರೌಢಶಾಲೆ ಹಂತದಲ್ಲಿ ಶೇ 46ರಷ್ಟು ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ

l ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶೇ 77ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದೊರೆಯುತ್ತಿದೆ

l ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ಶೇ 2ರಷ್ಟು ಹಾಗೂ ನಗರ ಪ್ರದೇಶದ ಶೇ 1ರಷ್ಟು ವಿದ್ಯಾರ್ಥಿಗಳಿಗಷ್ಟೇ ಉಚಿತ ಶಿಕ್ಷಣ ಲಭ್ಯ  

***

ದೇಶದಲ್ಲಿ ಇಂಟರ್ನೆಟ್ ಸೌಲಭ್ಯ ಇರುವ ಕುಟುಂಬಗಳ ಪ್ರಮಾಣ (%)

ಗ್ರಾಮೀಣ; 14.9

ನಗರ; 42

ಸರಾಸರಿ; 23.8 

ದೇಶದಲ್ಲಿ ಕಂಪ್ಯೂಟರ್ ಹೊಂದಿರುವ ಕುಟುಂಬಗಳ ಪ್ರಮಾಣ (%)

ಗ್ರಾಮೀಣ; 4.4

ನಗರ; 23.4

ಸರಾಸರಿ; 10.7

ರಾಜ್ಯದಲ್ಲಿ ಇಂಟರ್ನೆಟ್ ಸೌಲಭ್ಯ ಇರುವ ಕುಟುಂಬಗಳ ಪ್ರಮಾಣ (%) 

ಗ್ರಾಮೀಣ; 8.3

ನಗರ; 33.5

ಸರಾಸರಿ; 18.8

 –ರಾಜ್ಯದಲ್ಲಿ ಕಂಪ್ಯೂಟರ್ ಹೊಂದಿರುವ ಕುಟುಂಬಗಳ ಪ್ರಮಾಣ (%) 

ಗ್ರಾಮೀಣ; 2

ನಗರ; 22.9

ಸರಾಸರಿ; 10.7

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು