ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ವಿಜ್ಞಾನ ಪ್ರಯೋಗ ಮಾಡಿ

Last Updated 25 ಮೇ 2020, 15:43 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್‌ ಸ್ವಯಂ ಸೇವಾ ಸಂಸ್ಥೆಯು ಬಹು ಆಯಾಮದ ಕಲಿಕಾ ಕಾರ್ಯಕ್ರಮ ರೂಪಿಸಿದೆ.

ಲಾಕ್‌ಡೌನ್‌ ಸಮಯದಲ್ಲಿ ಆನ್‌ಲೈನ್‌ ಪಾಠ ಕೇಳುತ್ತಿರುವ ಮಕ್ಕಳಿಗಾಗಿ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ವಿಷಯದ ಹಲವು ಪ್ರಯೋಗಗಳನ್ನು ಮನೆಯಲ್ಲೇ ಮಾಡುವುದು ಹೇಗೆ ಎನ್ನುವುದನ್ನು ವಿಡಿಯೊ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಯಲ್ಲಿ ಲಭ್ಯ.

4ನೇ ತರಗತಿಯಿಂದ 10ನೇ ತರಗತಿವರೆಗೆಪಠ್ಯದಲ್ಲಿರುವ ವಿಜ್ಞಾನ ವಿಷಯದ ದಹನಕ್ಕಾಗಿ ಆಮ್ಲಜನಕ (oxygen for combustion), ವಾಯುವಿನ ವಿಸ್ತರಣೆ (ಬಾಟಲ್ ಮತ್ತು ಬಲೂನ್,ತಾಪಮಾಪಕ), ಘನ ವಸ್ತು, ದ್ರವಗಳಲ್ಲಿ ಅನಿಲಗಳಲ್ಲಿ ಉಷ್ಣ ವರ್ಗಾವಣೆ (heat transfer),ಬಾಯ್ಲರ್ಸ್‌ ನಿಯಮ,ಚಲನ ಶಕ್ತಿ(Kinetic Energynergy) ಮತ್ತು ಪ್ರಚ್ಛನ್ನ ಶಕ್ತಿ (Potential Energy), ನ್ಯೂಟನ್‌ ನಿಯಮ, ಸಂವೇಗ ಸಂರಕ್ಷಣೆ (Law of conservation of momentum), ಕೇಂದ್ರಾಭಿಮುಖ ಹಾಗೂ ಕೇಂದ್ರತ್ಯಾಗಿ ಬಲ (centripetal force &Centrifugal force ),ನೀರಿನಲ್ಲಿ ವಕ್ರೀಭವನ(Refraction of light in water) ಹಾಗೂ ಸಂಪೂರ್ಣ ಆಂತರಿಕ ಪ್ರತಿಫಲನ (Total internal reflection) ಇಂಥ ಹಲವಾರುಪ್ರಯೋಗಗಳನ್ನು ಹೇಳಿಕೊಡಲಾಗುತ್ತದೆ.

’ಲೋ ಕಾಸ್ಟ್‌ ಸೈನ್ಸ್‌ ಎಕ್ಸ್‌ಪರಿಮೆಂಟ್‌ಕಿಟ್‌‘ ಬಳಸಿ 90ಕ್ಕೂ ಹೆಚ್ಚು ಪ್ರಯೋಗ ಮಾಡಿದ್ದಾರೆ. ಮನೆಯಲ್ಲೇ ಸಿಗುವ ವಸ್ತುಗಳಿಂದ 28 ಪ್ರಯೋಗ ಮಾಡಿದ್ದಾರೆ. ಈ ವಿಡಿಯೊ ನೋಡಿಕೊಂಡು ಮಕ್ಕಳು ಮನೆಯಲ್ಲೇ ತಮ್ಮ ಪಠ್ಯದಲ್ಲಿನ ವಿಷಯ ಕುರಿತು ಪ್ರಯೋಗ ಮಾಡಬಹುದು.

’ವಿಜ್ಞಾನ ವಿಷಯದ ಪ್ರಯೋಗ ಮಾಡಲುಉನ್ನತಮಟ್ಟದ ಸಲಕರಣೆ, ಪ್ರಯೋಗಾಲಯ ಇರಬೇಕೆಂದಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ಪ್ರಯೋಗ ಮಾಡಬಹುದು ಎಂಬುದನ್ನು ನಾವು ಈ ವಿಡಿಯೊಗಳ ಮೂಲಕ ತೋರಿಸಿದ್ದೇವೆ‘ ಎನ್ನುತ್ತಾರೆಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್‌ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ್ ಶ್ರೀಧರಮೂರ್ತಿ.

ಶಿಕ್ಷಣ ಇಲಾಖೆಯ ಟೆಕ್ನಾಲಜಿ ಅಸಿಸ್ಟೆಂಟ್‌ ಲರ್ನಿಂಗ್‌ ಪ್ರೋಗ್ರಾಂ ಜೊತೆಗೂ ಈ ಸಂಸ್ಥೆ ಕೈ ಜೋಡಿಸಿದೆ. ಲಾಕ್‌ಡೌನ್‌ ಮೊದಲು ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶದ ಸರ್ಕಾರಿ ಶಾಲಾ ಶಿಕ್ಷಕರಿಗೆ ಈ ವಿಡಿಯೊಗಳ ಲಿಂಕ್‌ ಹಂಚಿದ್ದರು.ಹಾಗೇ ಇ–ಕಲಿಕೆಗಾಗಿ ಪಠ್ಯದ ಪವರ್‌ ಪಾಯಿಂಟ್‌ ಫೈಲ್‌ಗಳನ್ನು ಮಾಡಿದ್ದು, ಇದನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೊ ಹಾಗೂ ಪಿಪಿಟಿ ಮಾಹಿತಿ ಉಚಿತ.

ವಿಡಿಯೊಗಳನ್ನು ಐಎಲ್‌ಪಿ ಲಿಟಲ್‌ ಸೈನ್ಟಿಸ್ಟ್‌ (ILP's Little Scientists) ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಯುಟ್ಯೂಬ್‌ ಕೊಂಡಿhttps://youtu.be/yghCGiADKiE

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT