ಓದು ಮತ್ತು ಗ್ರಹಿಕೆ (ರೀಡಿಂಗ್ ಕಾಂಪ್ರಹೆನ್ಶನ್) ವಿಷಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ಮುಖಾಂತರ ಹೆಚ್ಚುಹೆಚ್ಚು ಕಲಿಯಬಹುದು. ದಿನನಿತ್ಯ 2– 3 ಈ ರೀತಿಯರೀಡಿಂಗ್ ಕಾಂಪ್ರಹೆನ್ಶನ್ ಅಭ್ಯಾಸ ಮಾಡಿ. ಅಲ್ಲದೆ ಪ್ಯಾಸೇಜ್ ಬರೆಯುವಾಗ ಹಾಗೂ ಪತ್ರ (ಲೆಟರ್ ರೈಟಿಂಗ್) ಬರೆಯುವಾಗ ಪದಗಳ ಸಂಖ್ಯೆ ಹಾಗೂ ವಿಷಯದ ಬಗ್ಗೆ ಗಮನವಿರಲಿ.

ಪರೀಕ್ಷೆಗೂ ಮೊದಲು ಉತ್ತರಿಸುವ ಕ್ರಮವನ್ನು ಎರಡರಿಂದ ಮೂರು ಬಾರಿ ಅಭ್ಯಸಿಸಿ. ಉದಾಹರಣೆಗೆ ಉತ್ತರದ ಎಲ್ಲಾ ಅಂಶಗಳನ್ನು ಬರೆದಿಟ್ಟುಕೊಳ್ಳಿ. ನಂತರ ಒಂದೊಂದೇ ವಾಕ್ಯಗಳನ್ನು ಜೋಡಿಸಿ ವಿವರಿಸಿ. ಹಾಗೆಯೇ ಆ ಉತ್ತರದಲ್ಲಿ ಉದಾಹರಣೆಗಳು, ಅನುಕೂಲತೆಗಳು, ಅನಾನುಕೂಲತೆಗಳು ಇತ್ಯಾದಿಗಳನ್ನು ಅವಶ್ಯಕತೆ ಎನಿಸಿದಲ್ಲಿ ಸೇರಿಸಿ. ಕೊನೆಗೆ ತೀರ್ಮಾನ ಬರೆಯಿರಿ. ಉತ್ತರದಲ್ಲಿ ಎಷ್ಟು ಸಾಲುಗಳಿವೆ ಎಂಬುದು ಮುಖ್ಯವಲ್ಲ, ಬದಲಾಗಿ ನಿಮ್ಮ ಉತ್ತರವನ್ನು ನೀವು ಹೇಗೆ ಪ್ರಸ್ತುತಪಡಿಸುವಿರಿ ಎಂಬುದು ಮುಖ್ಯ.

ಪ್ರಬಂಧವನ್ನು ಬರೆಯುವಾಗ ಮುಖ್ಯವಾದ ವಿಷಯಗಳಿಗೆ ಒತ್ತು ನೀಡಿ ಧನಾತ್ಮಕ ಸಂದೇಶಗಳನ್ನು ನೀಡಬೇಕು ಹಾಗೂ ಪ್ರಬಂಧಕ್ಕೆ ಸೂಕ್ತ ಎನಿಸಿದ ಉಲ್ಲೇಖಗಳನ್ನು ಬಳಸಿ. ಖಂಡಿತವಾಗಿ ಇದು ಮೌಲ್ಯಮಾಪಕರಿಗೆ ಮೆಚ್ಚುಗೆಯ ಭಾವನೆಯನ್ನು ಮೂಡುವಂತೆ ಮಾಡುತ್ತದೆ. ಚಿಕ್ಕ ಚಿಕ್ಕ ಪ್ಯಾರಾಗ್ರಾಫ್ಗಳಲ್ಲಿ ಬರೆಯಿರಿ ಹಾಗೂ ಅತಿಮುಖ್ಯ ವಿಷಯಗಳ ಕೆಳಗೆ ಗೆರೆ (ಅಂಡರ್ ಲೈನ್) ಎಳೆಯಿರಿ

ಸಹಪಾಠಿಗಳ ಜೊತೆ ಚರ್ಚೆ
ಸಾಹಿತ್ಯದ ವಿಷಯಕ್ಕೆ ಬರುವುದಾದರೆ ಇದರಲ್ಲಿ ಹೆಚ್ಚು ಅಂಕ ಗಳಿಸಲು ಎಲ್ಲ ಪಾಠಗಳ ಪ್ರತಿ ಪದಗಳನ್ನು ಓದಿ ಹಾಗೂ ಪ್ರತಿ ಪಾಠದ ಕೊನೆಯಲ್ಲಿ ನೀಡಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಿ. ಅಲ್ಲದೆ ಅವುಗಳ ಉತ್ತರಗಳನ್ನು ನಿಮ್ಮ ಸಹಪಾಠಿಗಳು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಹಾಗೂ ಈ ಚರ್ಚೆ ಕೂಡ ನಿಮ್ಮ ನೆನಪಿನ ಶಕ್ತಿಗೆ ಸುಲಭ ಮಾರ್ಗವಾಗುತ್ತದೆ.

ಸಾಹಿತ್ಯದಲ್ಲಿ ಹೆಚ್ಚು ಅಂಕ ಗಳಿಸಲು ಹೊಸ ಹೊಸ ಪದಗಳ ಬಳಕೆ ಅತ್ಯವಶ್ಯಕ. ಈ ಹೊಸ ಪದಗಳನ್ನು ನಿತ್ಯವೂ ಮಾತಿನಲ್ಲಿ ಬಳಸಿ ಹಾಗೂ ದಿನಪತ್ರಿಕೆಗಳನ್ನು ಬಿಡುವಾದಾಗ ಓದಿ.

ಕೊನೆಯದಾಗಿ ಉತ್ತರ ಪತ್ರಿಕೆಯ ಪ್ರಸ್ತುತಿಯ ಬಗ್ಗೆ ಗಮನಹರಿಸುವುದಾದರೆ,

* ಮುಖ್ಯವಾದ ಪದಗಳ ಕೆಳಗೆ ಗೆರೆ ಎಳೆಯಿರಿ.

* ಒಂದು ಉತ್ತರದಿಂದ ಮತ್ತೊಂದು ಉತ್ತರ ಬರೆಯುವಾಗ ನಿರ್ದಿಷ್ಟವಾದ ಸ್ಥಳ ಬಿಡಿ. ಉದಾಹರಣೆಗೆ ಒಂದು ವಾಕ್ಯದ ಪ್ಯಾಸೇಜ್ ಬರೆಯುವಾಗ ಹೆಡ್ಡಿಂಗ್, ಸಬ್ ಹೆಡ್ಡಿಂಗ್ ಕೆಳಗೆ ಗೆರೆ ಎಳೆಯಿರಿ.

ಓದಿನ ಕೌಶಲ
ಇದಾದ ನಂತರ ಉತ್ತರಿಸದೆ ಬಿಟ್ಟಂತಹ ಪ್ರಶ್ನೆಗಳನ್ನು ಸಮಚಿತ್ತದಿಂದ ನೆನಪಿಸಿಕೊಂಡು ಸಾಧ್ಯವಾದರೆ ಉತ್ತರಿಸಲು ಪ್ರಯತ್ನಿಸಿ. ಕೆಲವೊಮ್ಮೆ ಉತ್ತರಗಳು ಪ್ರಶ್ನೆಗಳಲ್ಲಿ ಅಡಕವಾಗಿರುತ್ತವೆ ಅಥವಾ ಓದಿನ ಕೌಶಲ (ರೀಡಿಂಗ್ ಸ್ಕಿಲ್ಸ್) ಇದ್ದಲ್ಲಿ ಉತ್ತರ ಗೊತ್ತಿಲ್ಲದೇ ಹೋದರೂ ಕೂಡ ಸುಲಭವಾಗಿ ಉತ್ತರಿಸಬಹುದು. ಈ ತರಹದ ಉಪಾಯಗಳನ್ನು ಕೊನೆಯಲ್ಲಿ ಉಪಯೋಗಿಸಿ.

ಪರೀಕ್ಷೆಯ ಕೊನೆಯ ಹತ್ತು ನಿಮಿಷಗಳನ್ನು ಮತ್ತೊಮ್ಮೆ ಉತ್ತರ ಪತ್ರಿಕೆಯನ್ನು ನೋಡಲು ಬಳಸಿಕೊಳ್ಳಿ. ಉದಾಹರಣೆಗೆ ಹೇಳುವುದಾದರೆ ನೀವು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೀರೋ ಇಲ್ಲವೋ, ಎಲ್ಲ ಉತ್ತರಗಳ ಸಂಖ್ಯೆ ಸರಿ ಇದೆಯೋ ಇಲ್ಲವೋ, ಉತ್ತರಗಳಿಗೆ ಸೂಕ್ತವೆನಿಸಿದಲ್ಲಿ ಅಂಡರ್ ಲೈನ್ ಹಾಗೂ ಬಾಕ್ಸ್ಗಳನ್ನು ಹಾಕಲಾಗಿದೆಯೋ ಅಥವಾ ಇಲ್ಲವೋ ಇತ್ಯಾದಿ. ಅಂಕಗಳ ಬಗ್ಗೆ ಚಿಂತಿಸದೆ ನಿಮ್ಮ ಸಾಮರ್ಥ್ಯದ ನೂರಕ್ಕೆ ನೂರು ಶಕ್ತಿ ವಿನಿಯೋಗಿಸಿ ಪರೀಕ್ಷೆ ಎದುರಿಸಿ. ಯಶಸ್ಸು ನಿಮ್ಮದಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.