ಭಾನುವಾರ, ಮೇ 22, 2022
27 °C

ಎಸ್ಸೆಸ್ಸೆಲ್ಸಿ: ಆನುವಂಶೀಯತೆ ಮತ್ತು ಜೀವ ವಿಕಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀವಶಾಸ್ತ್ರ: ಅಧ್ಯಾಯ-9

ಈ ಅಧ್ಯಾಯದಲ್ಲಿ ನಾವು ಭಿನ್ನತೆಗಳು ಯಾವ ಪ್ರಕ್ರಿಯೆಗಳ ಮೂಲಕ ಉಂಟಾಗುತ್ತವೆ ಹಾಗೂ ಆನುವಂಶೀಯವಾಗುತ್ತವೆ ಎಂಬುದರ ಕುರಿತು ಅಧ್ಯಯನ ಮಾಡೋಣ.

ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಭಿನ್ನತೆಗಳ ಒಟ್ಟುಗೂಡುವಿಕೆ

ಹಿಂದಿನ ತಲೆಮಾರಿನಿಂದ ಬಂದ ಆನುವಂಶೀಯತೆಯು ಮುಂದಿನ ಪೀಳಿಗೆಗೆ ಸಾಮಾನ್ಯವಾದ ಮೂಲಭೂತ ವಿನ್ಯಾಸ ಮತ್ತು ಅದರಲ್ಲಿ ಸೂಕ್ಷ್ಮ ಬದಲಾವಣೆಗಳು ಎರಡನ್ನೂ ಒದಗಿಸುತ್ತದೆ. ಈ ಹೊಸ ಪೀಳಿಗೆಯು ಮತ್ತೆ ಪುನರುತ್ಪಾದಿಸಿದಾಗ ಮೊದಲ ಪೀಳಿಗೆಯಿಂದ ಆನುವಂಶೀಯವಾಗಿ ಪಡೆದ ವ್ಯತ್ಯಾಸಗಳ ಜೊತೆಗೆ ಹೊಸದಾಗಿ ಉಂಟಾದ ವ್ಯತ್ಯಾಸಗಳೂ ಇರುತ್ತವೆ.

ಒಂದು ಬ್ಯಾಕ್ಟೀರಿಯಾ ವಿಭಜನೆಯಾದರೆ, ಅದರ ಫಲಿತವಾದ ಎರಡು ಬ್ಯಾಕ್ಟೀರಿಯಾಗಳು ನಂತರ ಮತ್ತೆ ವಿಭಜಿಸಿ, ಉತ್ಪತ್ತಿಯಾಗುವ ನಾಲ್ಕು ಬ್ಯಾಕ್ಟೀರಿಯಾಗಳು ಪರಸ್ಪರ ತುಂಬಾ ಹೋಲುತ್ತವೆ. ಇಲ್ಲವೇ ಅವುಗಳ ನಡುವೆ ಡಿಎನ್‌ಎ ಪ್ರತೀಕರಣದಲ್ಲಿನ ಸಣ್ಣ ತಪ್ಪುಗಳ ಕಾರಣದಿಂದ ಬಹಳ ಚಿಕ್ಕ ವ್ಯತ್ಯಾಸಗಳು ಮಾತ್ರ ಉಂಟಾಗುತ್ತವೆ. ಲೈಂಗಿಕ ಸಂತಾನೋತ್ಪತ್ತಿಯಾದರೆ ಇನ್ನೂ ಹೆಚ್ಚಿನ ವೈವಿಧ್ಯತೆ ಉಂಟಾಗುತ್ತದೆ.

ಜೀವಿಯೊಂದರ ಅಲೈಂಗಿಕ ಸಂತಾನೋತ್ಪತ್ತಿಯ ಪರಿಸ್ಥಿತಿಯನ್ನು ಮೇಲಿನ ಚಿತ್ರದಲ್ಲಿ ಪ್ರತಿನಿಧಿಸಲಾಗಿದೆ. ಪ್ರಭೇದಗಳು ವೈವಿಧ್ಯತೆಯ ಸ್ವರೂಪ ಅವಲಂಬಿಸಿ, ವಿವಿಧ ಜೀವಿಗಳು ವಿಭಿನ್ನ ರೀತಿಯ ಅನುಕೂಲಗಳನ್ನು ಹೊಂದಿರುತ್ತವೆ.

ಆನುವಂಶೀಯತೆ

 ಗುಣಗಳು ಮತ್ತು ಲಕ್ಷಣಗಳು ವಿಶ್ವಾಸಾರ್ಹವಾಗಿ ಆನುವಂಶೀಯವಾಗುವ ಪ್ರಕ್ರಿಯೆಯನ್ನು ಆನುವಂಶೀಯತೆಯ ನಿಯಮಗಳು ನಿರ್ಧರಿಸುತ್ತವೆ.

ಒಂದು ಮಗುವು ಮಾನವನ ಎಲ್ಲಾ ಮೂಲಭೂತ ಗುಣಗಳ್ನು ಹೊಂದಿರುತ್ತದೆ. ಆದರೂ ಅದರ ಪೋಷಕರ ಪಡಿಯಚ್ಚಿನಂತೆ ಕಾಣುವುದಿಲ್ಲ.

ಗುಣಗಳ ಆನುವಂಶೀಯ ನಿಯಮಗಳು ಮಾನವರಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಮಗುವಿಗೆ ಆನುವಂಶೀಯ ವಸ್ತುವಿನ ಪ್ರಮಾಣವನ್ನು ಸಮಾನವಾಗಿ ನೀಡುತ್ತಾರೆ ಎಂಬ ಅಂಶಕ್ಕೆ ಸಂಬಂಧಿಸಿವೆ.

ಪ್ರತಿಯೊಂದು ಮಗುವಿನಲ್ಲೂ ಪ್ರತಿಯೊಂದು ವಿಶೇಷತೆಗೆ ಸಂಬಂಧಿಸಿದಂತೆ ಎರಡು ಬಗೆಗಳಿವೆ. ಮೆಂಡೆಲ್ ಅವರು ಅಂತಹ ಆನುವಂಶೀಯತೆಯ ಪ್ರಮುಖ ನಿಯಮಗಳನ್ನು ಕುರಿತು ಪ್ರಯೋಗ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು