ಭಾನುವಾರ, ಜನವರಿ 17, 2021
19 °C

ಐಐಟಿ ಪ್ರವೇಶಕ್ಕೆ ಜು.3ರಂದು ಜೆಇಇ–ಅಡ್ವಾನ್ಸ್‌ಡ್‌ ಪರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆಗಳ(ಐಐಟಿ) ಪ್ರವೇಶಾತಿಗೆ ಇರುವ ಜೆಇಇ–ಅಡ್ವಾನ್ಸ್‌ಡ್‌ ಪರೀಕ್ಷೆಯನ್ನು ಜು.3ರಂದು ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಗುರುವಾರ ತಿಳಿಸಿದರು. 

‘ಐಐಟಿ ಖರಗ್‌ಪುರವು ಜು.3ರಂದು ಜೆಇಇ–ಅಡ್ವಾನ್ಸ್‌ಡ್‌ ನಡೆಸಲಿದೆ. ಪರೀಕ್ಷೆಗೆ ಹಾಜರಾಗಲು ದ್ವಿತೀಯ ಪಿಯುನಲ್ಲಿ ಕನಿಷ್ಠ ಶೇ75 ಅಂಕಗಳು ಇರಬೇಕು ಎನ್ನುವ ಅವಶ್ಯಕತೆಯನ್ನು ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಕಳೆದ ವರ್ಷ ಸಡಿಲಿಕೆ ಮಾಡಲಾಗಿತ್ತು. ಈ ವರ್ಷವೂ ಇದು ಮುಂದುವರಿಯಲಿದೆ’ ಎಂದು ನಿಶಾಂಕ್‌ ತಿಳಿಸಿದರು.

ದೇಶದಾದ್ಯಂತ ಇರುವ ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕೆ ಜೆಇಇ–ಮೇನ್ಸ್‌ ಪರೀಕ್ಷೆ ನಡೆಸಲಾಗುತ್ತದೆ. ಜೆಇಇ–ಮೇನ್ಸ್‌ನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಷ್ಟೇ ಜೆಇಇ–ಅಡ್ವಾನ್ಸ್‌ಡ್‌ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು