ಗುರುವಾರ , ಏಪ್ರಿಲ್ 2, 2020
19 °C

ಪ್ರಜಾವಾಣಿ ಕ್ವಿಜ್‌: ದೀರ್ಘಕಾಲದ ಕೆಮ್ಮು ಯಾವ ರೋಗದ ಸೂಚನೆಯಾಗಿರಬಹುದು?

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ Updated:

ಅಕ್ಷರ ಗಾತ್ರ : | |

prajavani

1. ದೀರ್ಘಕಾಲದ ಕೆಮ್ಮು ಯಾವ ರೋಗದ ಸೂಚನೆಯಾಗಿರಬಹುದು?

ಅ) ಕ್ಯಾನ್ಸರ್ 

ಆ) ಚಿಕುನ್‌ ಗುನ್ಯ

ಇ) ಕ್ಷಯ

ಈ) ದಡಾರ

2. ಮೈಸೂರು ಸಂಸ್ಥಾನದ ಸರ್ಕಾರದ ‘ಧ್ಯೇಯ ವಾಕ್ಯ’ ಏನಾಗಿತ್ತು?

ಅ) ಸತ್ಯಮೇವ ಜಯತೆ

ಆ) ಸತ್ಯಮೇವೋದ್ಧರಾಮ್ಯಹಂ
ಇ) ಸತ್ಯಂ ವದ

ಈ) ಸತ್ಯಾ ನಪ್ರಮದಿತವ್ಯಂ

3. ನಮ್ಮ ಸೌರಮಂಡಲದ ಅತಿ ಹತ್ತಿರದ ನಕ್ಷತ್ರ ಯಾವುದು?

ಅ) ಸಿರಿಯಸ್

ಆ) ಆಲ್ಫಾ ಸೆಂಟಾರಿ

ಇ) ಪ್ರಾಕ್ಸಿಮಾ ಸೆಂಟಾರಿ

ಈ) ವೂಲ್ಫ್

4. ‘ಪರಿವ್ರಾಜಕ’ ಎಂಬ ಶಬ್ದ ಯಾರಿಗೆ ಅನ್ವಯಿಸುತ್ತದೆ?

ಅ) ರೈತ 

ಆ) ಸನ್ಯಾಸಿ

ಇ) ವೈದ್ಯ 

ಈ) ಸೈನಿಕ

5. ಹಿಂದಿ ಚಲನಚಿತ್ರರಂಗದ ಈ ದಿಗ್ಗಜರಲ್ಲಿ ಯಾರು ಮೂಲತಃ ಕನ್ನಡಿಗರಲ್ಲ?

ಅ) ಗುರುದತ್

ಆ) ವಿ. ಶಾಂತಾರಾಮ್

ಇ) ವಿ.ಕೆ.ಮೂರ್ತಿ

ಈ) ರಾಜ್ ಕಪೂರ್

6. ಯಾವ ಖಾದ್ಯಕ್ಕೆ ‘ಉಸಲಿ’ ಎಂಬ ಹೆಸರಿದೆ?

ಅ) ಬೇಯಿಸಿದ ತರಕಾರಿ

ಆ) ಬೇಯಿಸಿದ ಕಾಳುಗಳು

ಇ) ಹಣ್ಣಿನ ರಸಾಯನ

ಈ) ಹಸಿ ತರಕಾರಿ

7. ಇವುಗಳಲ್ಲಿ ಯಾವುದು ಎಸ್. ಶೆಟ್ಟರ್ ಅವರು ರಚಿಸಿದ ಕೃತಿ ಅಲ್ಲ?

ಅ) ಶಂಗಂ- ತಮಿಳಗಂ

ಆ) ಪ್ರಾಕೃತ ಜಗದ್ವಲಯ

ಇ) ಸಾವಿಗೆ ಆಹ್ವಾನ

ಈ) ಪಾಲಿ-ಪ್ರಾಕೃತ ನಿಘಂಟು

8. ಇವರಲ್ಲಿ ಯಾರು ಬಿಸಿಸಿಐನ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರಲ್ಲ?

ಅ) ಚಂದ್ರಶೇಖರ್

ಆ) ಜಿ.ಆರ್. ವಿಶ್ವನಾಥ್

ಇ) ಬ್ರಿಜೇಶ್ ಪಟೇಲ್

ಈ) ಸೈಯದ್ ಕಿರ್ಮಾನಿ

9. ಒಂದು ಅಶ್ವಶಕ್ತಿಯ ವಿದ್ಯುತ್ ಎಷ್ಟು ವ್ಯಾಟ್‌ಗಳಿಗೆ ಸಮ?

ಅ) 746

ಆ) 786

ಇ) 736

ಈ) 776‌

10. ‘ನಂಬೂದರಿ’ ಎಂಬ ಹೆಸರಿನ ಸಮುದಾಯದ ಜನರು ಯಾವ ರಾಜ್ಯದಲ್ಲಿ ಪ್ರಧಾನವಾಗಿ ವಾಸವಾಗಿದ್ದಾರೆ?

ಅ) ಬಿಹಾರ 

ಆ) ಕೇರಳ

ಇ) ಅಸ್ಸಾಂ 

ಈ) ಆಂಧ್ರ

ಹಿಂದಿನ ಸಂಚಿಕೆಯ ಸರಿ ಉತ್ತರಗಳು 

1. ಮುಂಬಯಿ

2. 1912

3. ಶ್ರೀಗಂಧ

4. ಲಕ್ಷ್ಮೀ ಸೆಹಗಲ್

5. ಹಾವು

6. ಕೆನಡ

7. ಮುಪ್ಪು

8. ಅಹಮದಾಬಾದ್

9. ಕೊಡೆಭಾರ

10 . 1992

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)