ಪ್ರಜಾವಾಣಿ ಕ್ವಿಜ್ 67

ಭಾನುವಾರ, ಏಪ್ರಿಲ್ 21, 2019
26 °C

ಪ್ರಜಾವಾಣಿ ಕ್ವಿಜ್ 67

Published:
Updated:

1. ಕವಲೆದುರ್ಗ ಯಾವ ಅರಸರ ರಾಜಧಾನಿಯಾಗಿತ್ತು?

ಅ) ಕೆಳದಿ ಆ) ಚಿತ್ರದುರ್ಗ
ಇ) ಉಮ್ಮತ್ತೂರು

ಈ) ಆಳುಪ

2. ‘ಪಾಶ್ಚಾತ್ಯ ಗಂಭೀರ ನಾಟಕಗಳು’ ಯಾರು ರಚಿಸಿದ ಕೃತಿ?

ಅ) ವಿ.ಎಂ.ಇನಾಂದಾರ್
ಆ) ಶಂಕರ ಮೊಕಾಶಿ ಪುಣೇಕರ
ಇ) ಎಸ್.ವಿ.ರಂಗಣ್ಣ ಈ) ಹಾ.ಮಾ.ನಾಯಕ

3. ಅತಿ ಆಹಾರಸೇವನೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಏನೆಂದು ಕರೆಯುತ್ತಾರೆ?

ಅ) ಅನೊರೆಕ್ಸಿಯ ಆ) ಬುಲೀಮಿಯಾ
ಇ)ಅನೀಮಿಯಾ ಈ)ಯಾವುದೂ ಅಲ್ಲ

4. ಗಾಲ್ಫ್ ಆಟಗಾರನ ಸಹಾಯಕನನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?

ಅ)ಹೆಲ್ಪರ್ ಆ)ಕ್ಯಾಡಿ

ಇ) ಅಸಿಸ್ಟೆಂಟ್ ಈ) ಚೆಫ್

5. ಹಾವೇರಿ ಜಿಲ್ಲೆಯ ದೇವರಗುಡ್ಡವು ಯಾವ ದೇವರ ಆರಾಧನಾ ಸ್ಥಳವಾಗಿದೆ?

ಅ)ಮೈಲಾರ ಆ) ಪಾಂಡುರಂಗ
ಇ)ದುರ್ಗೆ ಈ) ಮಾದೇಶ್ವರ

6. ರೊಮೀಲಾ ಥಾಪರ್ ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ?

ಅ)ರಾಜಕಾರಣ ಆ) ಕ್ರೀಡೆ
ಇ)ಇತಿಹಾಸ ಈ) ಆಡಳಿತ

7. ‘ಪಾರ್ಲಿಮೆಂಟುಗಳ ತಾಯಿ’ ಎಂದು ಯಾವ ದೇಶದ ಪಾರ್ಲಿಮೆಂಟನ್ನು ಕರೆಯಲಾಗುತ್ತದೆ?

ಅ)ಭಾರತ ಆ)ರೋಮ್
ಇ) ಜರ್ಮನಿ ಈ) ಇಂಗ್ಲೆಂಡ್

8. ಬೈಬಲ್‌ನ ಪ್ರಕಾರ ಜೀಸಸ್‍ರಿಗೆ ಜ್ಞಾನ ಸ್ನಾನ ಮಾಡಿಸಿದವರು ಯಾರು?

ಅ)ಪೀಟರ್ ಆ)ಮ್ಯಾಥ್ಯೂ
ಇ)ಜಾನ್ ಈ) ಜೋಸೆಫ್

9. ಇವುಗಳಲ್ಲಿ ಯಾವುದು ಜೈವಿಕ ಇಂಧನದ ಮೂಲವಲ್ಲ?

ಅ) ಜಟ್ರೋಪಾ ಆ) ಹೊಂಗೆ
ಇ) ಕಬ್ಬು ಈ) ಗೋಧಿ

10.ಇವುಗಳಲ್ಲಿ ಯಾವುದು ಅಕಿರೋ ಕುರಾಸಾವ ನಿರ್ದೇಶನದ ಚಲನಚಿತ್ರವಲ್ಲ?

ಅ) ರೋಶೊಮನ್ ಆ)ರಾನ್
ಇ) ಥ್ರೋನ್ ಆಫ್ ಬ್ಲಡ್ ಈ) ಆಕ್ಟೊಪಸಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಪೋರ್ಚುಗಲ್ 2. ಈಜು 3. ಹಿಮನದಿಗಳು 4. ಅಸ್ಸಾಂ 5. ಕೆ. ಶೇಷಾದ್ರಿ ಅಯ್ಯರ್
6. ವೈದೇಹಿ 7. ಪತ್ರಿಕೋದ್ಯಮ
8. ಮಲಯಾಳಂ 9. ರಕ್ತವನ್ನು ತೆಳುಗೊಳಿಸಲು
10. ಕತ್ತೆ ಮತ್ತು ಕುದುರೆ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !