ಶುಕ್ರವಾರ, ಅಕ್ಟೋಬರ್ 18, 2019
28 °C

ಪ್ರಜಾವಾಣಿ ಕ್ವಿಜ್ ೯೧

Published:
Updated:

1. ‘ಮೀಟಿಯೊರಾಲಜಿ’ಯು ಯಾವುದರ ಕುರಿತ ಅಧ್ಯಯನವಾಗಿದೆ?

ಅ) ಮೀಟರ್‌ಗಳು ಆ) ಉಲ್ಕೆಗಳು

ಇ) ಹವಾಮಾನ ಈ) ಧೂಮಕೇತುಗಳು

2. ‘ಹೆಚ್ಚಾದ ಎಣ್ಣೆ----------’ ಈ ಗಾದೆಯನ್ನು ಪೂರ್ತಿ ಮಾಡಿ.

ಅ) ಹಚ್ಚಿದವನಿಗೆ ಆ) ಬಚ್ಚಲಿಗೆ

ಇ) ದಾನಮಾಡು ಈ) ಹಚ್ಚಬೇಡ

3. ‘ಸಾವಿತ್ರಿ’ ಎಂಬ ಕಾವ್ಯವನ್ನು ರಚಿಸಿದ ಸ್ವಾತಂತ್ರ‍್ಯ ಹೋರಾಟಗಾರರು ಯಾರು?

ಅ) ತಿಲಕ್ ಆ) ಗೋಖಲೆ

ಇ) ಕೃಪಲಾನಿ ಈ) ಅರಬಿಂದೊ

4. ಇವುಗಳಲ್ಲಿ ಯಾವುದಕ್ಕೆ ‘ನೊರೆಕಾಯಿ’ ಎಂಬ ಹೆಸರೂ ಇದೆ?

ಅ) ಅಮಟೆಕಾಯಿ ಆ) ಅಂಟುವಾಳ

ಇ) ತೊಂಡೆಕಾಯಿ ಈ) ಅಳಲೆಕಾಯಿ

5. ಅಲಂಕಾರಿಕವಾದ ಬರವಣಿಗೆಯ ಕಲೆಯನ್ನು ಏನೆನ್ನುತ್ತಾರೆ?

ಅ) ಕ್ಯಾಲಿಗ್ರಫಿ ಆ) ಕ್ಯೂಬಿಸಂ

ಇ) ಟೈಪೋಗ್ರಫಿ ಈ) ಟೈಪಾಲಜಿ

6. ಪ್ರಾಚೀನ ಕಾಲದಲ್ಲಿ ಉತ್ತರ ಭಾರತದಲ್ಲಿ ಭೂರ್ಜಮರದ ತೊಗಟೆಯನ್ನು ಪ್ರಮುಖವಾಗಿ ಏಕೆ ಬಳಸಲಾಗುತ್ತಿತ್ತು?

ಅ) ಬರೆಯಲು ಆ) ಬಟ್ಟೆಯಾಗಿ

ಇ) ಬೊಂಬೆ ತಯಾರಿಕೆ ಈ) ಚೀಲವಾಗಿ

7. ಒಂದು ಬ್ಯಾಸ್ಕೆಟ್‌ಬಾಲ್‌ ತಂಡದಲ್ಲಿ ಒಟ್ಟು ಎಷ್ಟು ಮಂದಿ ಆಟಗಾರರಿರುತ್ತಾರೆ?

ಅ) ಹನ್ನೆರಡು ಆ) ಹತ್ತು

ಇ) ಹನ್ನೊಂದು ಈ) ಒಂಬತ್ತು

8. ಇವುಗಳಲ್ಲಿ ಯಾವುದು ಆಹಾರಸರಪಳಿಯ ಭಾಗವಲ್ಲ?

ಅ) ನೀರು ಆ) ವಿಭಜಕಗಳು

ಇ) ಬಳಕೆದಾರರು ಈ) ಉತ್ಪಾದಕಗಳು

9. ಗ್ಲುಟೆನ್ ಎಂಬ ಗುಂಪಿನ ಪ್ರೊಟೀನ್‌ಗಳು ಯಾವ ಬಗೆಯ ಆಹಾರ ಪದಾರ್ಥಗಳಲ್ಲಿ ಪ್ರಧಾನವಾಗಿ ಕಂಡುಬರುತ್ತವೆ?

ಅ) ರಾಗಿ ಆ) ಅಕ್ಕಿ

ಇ) ಜೋಳ ಈ) ಗೋಧಿ

10. ‘ಟೋಪೊಗ್ರಾಫಿಕ್ ಮ್ಯಾಪ್’ಗಳನ್ನು ಯಾವ ವಿಷಯ ತಜ್ಞರು ಹೆಚ್ಚಾಗಿ ಬಳಸುತ್ತಾರೆ?

ಅ) ಭೂಗೋಳಶಾಸ್ತ್ರ ಆ) ಅರ್ಥಶಾಸ್ತ್ರ

ಇ) ರಾಜ್ಯಶಾಸ್ತ್ರ ಈ) ಇತಿಹಾಸ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಕೊಲ್ಲಾಪುರ 2.ರೇಡಿಯೇಟರ್

3. ಪತ್ರಿಕೋದ್ಯಮ 4 . ಕೀಲುಗಳು

5 . ಪ್ರಾಣಿಜನ್ಯವಸ್ತುಗಳು 6. ಶರ‍್ಲಾಕ್ ಹೋಮ್ಸ್‌ 7. ಕರ್ಣ 8. ಫೇಸ್‌ಬುಕ್ 9. ಗಂಡು ನದಿ

10. ಕುಸ್ತಿ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

Post Comments (+)