ಶನಿವಾರ, ಆಗಸ್ಟ್ 24, 2019
23 °C

ವಿದ್ಯಾರ್ಥಿ ವೇತನ ಕೈಪಿಡಿ

Published:
Updated:

ವರ್ಗ: ಸಂಶೋಧನಾ ಹಂತ

ವಿದ್ಯಾರ್ಥಿ ವೇತನ: ತಾಂತ್ರಿಕ ಆವಿಷ್ಕಾರ ಕುರಿತ ಅಬ್ದುಲ್‌ ಕಲಾಂ ರಾಷ್ಟ್ರೀಯ ಫೆಲೋಶಿಪ್‌ 2019–20

ವಿವರ: ದೇಶದ ಅನುಭವಿ ಎಂಜಿನಿಯರ್‌ ಉದ್ಯೋಗಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಆವಿಷ್ಕಾರ ಯೋಜನೆಗಳಿಗೆ ಮಾಸಿಕ ಸಂಶೋಧನಾ ಸ್ಟೈಫಂಡ್‌ ನೀಡಲು ಭಾರತೀಯ ಎಂಜಿನಿಯರಿಂಗ್‌ ರಾಷ್ಟ್ರೀಯ ಅಕಾಡೆಮಿ (ಐಎನ್‌ಎಇ) ಅವಕಾಶ ಕಲ್ಪಿಸಿದೆ. ಫೆಲೋಶಿಪ್‌ನ ಅವಧಿ ಮೂರು ವರ್ಷಗಳಾಗಿದ್ದು, ಕಾರ್ಯ ಪ್ರಗತಿಯನ್ನಾಧರಿಸಿ ಐದು ವರ್ಷಗಳವರೆಗೆ ವಿಸ್ತರಿಸಿಕೊಳ್ಳಲು ಅವಕಾಶಗಳಿವೆ.

ಅರ್ಹತೆ: ಅನುದಾನಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಉದ್ಯೋಗದಲ್ಲಿ ತೊಡಗಿರುವ ಭಾರತೀಯರು ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಕನಿಷ್ಠ ಪದವಿ ಪೂರೈಸಿರಬೇಕು. ಸೇವಾ ಅವಧಿ ಪೂರ್ಣಗೊಳ್ಳಲು ಐದು ವರ್ಷ ಬಾಕಿ ಇರುವವರೂ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ಫೆಲೋಗಳಿಗೆ ತಿಂಗಳಿಗೆ ₹ 25,000 ಸ್ಟೈಫಂಡ್‌ ದೊರೆಯಲಿದೆ. ಜತೆಗೆ ವಾರ್ಷಿಕ ಸಂಶೋಧನಾ ಅನುದಾನವಾಗಿ ₹ 15 ಲಕ್ಷ (ಸಂಶೋಧನಾ ಖರ್ಚು, ವೆಚ್ಚಗಳಿಗೆ) ಸಿಗಲಿದೆ. ಅಲ್ಲದೆ ಹೆಚ್ಚುವರಿ ಖರ್ಚುಗಳಿಗೆ ವಾರ್ಷಿಕ ಹೆಚ್ಚುವರಿ ₹ 1 ಲಕ್ಷ ಅನುದಾನವೂ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಆಗಸ್ಟ್‌ 10

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/Praja/AKT4

***

ವರ್ಗ: ಆರ್ಥಿಕ ಅಗತ್ಯ ಆಧಾರಿತ

ವಿದ್ಯಾರ್ಥಿ ವೇತನ: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಎಂ.ಬಿ.ಎ. ವಿದ್ಯಾರ್ಥಿವೇತನ 2019–21

ವಿವರ: ದೇಶದ ಆಯ್ದ 150 ಕಾಲೇಜುಗಳಲ್ಲಿ ಮೊದಲ ವರ್ಷದ ಎಂ.ಬಿ.ಎ. ಕೋರ್ಸ್‌ಗೆ (ಪೂರ್ಣಾವಧಿ) ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಐಡಿಎಫ್‍ಸಿ ಫಸ್ಟ್‌ ಬ್ಯಾಂಕ್‍ ವಿದ್ಯಾರ್ಥಿ ವೇತನ ನೀಡಲಿದೆ. ಬೋಧನಾ ಶುಲ್ಕ ಪಾವತಿಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ.

ಅರ್ಹತೆ: ದೇಶದ ಆಯ್ದ 150 ಶಿಕ್ಷಣ ಸಂಸ್ಥೆಗಳಲ್ಲಿ 1ನೇ ವರ್ಷದ ಎಂ.ಬಿ.ಎ. ಕೋರ್ಸ್ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷಕ್ಕಿಂತ ಹೆಚ್ಚಿರಬಾರದು.

ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾರ್ಷಿಕ ₹ 1 ಲಕ್ಷದಂತೆ ಎರಡು ವರ್ಷಗಳವರೆಗೆ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಆಗಸ್ಟ್‌ 16

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌  ಮೂಲಕ

ಮಾಹಿತಿಗೆ: http://www.b4s.in/Praja/IFBMS1

***

ವರ್ಗ: ಮೆರಿಟ್‌ ಆಧಾರಿತ

ವಿದ್ಯಾರ್ಥಿ ವೇತನ: ಟೆಲ್‌ ಅವಿವ್‌ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಕಾರ್ಯಕ್ರಮ– 2019, ಇಸ್ರೇಲ್‌

ವಿವರ: ಇಸ್ರೇಲ್‌ನ ಟೆಲ್‌ ಅವಿವ್‌ ವಿಶ್ವವಿದ್ಯಾಲಯವು 15 ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದೊಂದಿಗೆ ಅಧ್ಯಯನ ಮಾಡಲು ಅವಕಾಶ ನೀಡಲಿದೆ. ಈ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಆರ್ಥಿಕ ನೆರವಿನೊಂದಿಗೆ ಬಹುಸಾಂಸ್ಕೃತಿಕ ಪರಿಸರದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಅರ್ಹತೆ: ಸ್ನಾತಕೋತ್ತರ ಕೋರ್ಸ್‌ ಪ್ರವೇಶಕ್ಕೆ ತಕ್ಕಂತೆ ಅರ್ಹತೆ ಹೊಂದಿರುವ ಅರ್ಜಿದಾರರು ವಿದ್ಯಾರ್ಥಿ ವೇತನ ಪಡೆಯಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮತ್ತು ವಸತಿ ವೆಚ್ಚದಲ್ಲಿ ಶೇ 80ರಷ್ಟು ವಿನಾಯಿತಿ ದೊರೆಯಲಿದೆ

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಆಗಸ್ಟ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/Praja/TAU6

***

ಕೃಪೆ: www.buddy4study.com

Post Comments (+)