ಬುಧವಾರ, ನವೆಂಬರ್ 30, 2022
17 °C

ವಿದ್ಯಾರ್ಥಿ ವೇತನ ಕೈಪಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಗ: ಮೆರಿಟ್ ಆಧಾರಿತ

ವಿದ್ಯಾರ್ಥಿ ವೇತನ: ಪಿಯರ್ಸನ್ ಮೆಪ್ರೊ ಇಂಗ್ಲಿಷ್ ವಿದ್ವಾಂಸ ಕಾರ್ಯಕ್ರಮ- 2019

ವಿವರ: ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಇಂಗ್ಲಿಷ್ ಓದುವಿಕೆ, ಬರವಣಿಗೆ, ಮಾತನಾಡುವ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಮತ್ತು ಅವರ ವೃತ್ತಿ ಜೀವನದ ಭವಿಷ್ಯವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಪೂರಕವಾದ ವಿಶಿಷ್ಟ ವಿದ್ಯಾರ್ಥಿ ವೇತನ ಕಾರ್ಯಕ್ರಮವಿದು. ಇದರಲ್ಲಿ ಉನ್ನತ ಸಾಧಕರಿಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ.

ಅರ್ಹತೆ: ಮೆಪ್ರೊ ಇಂಗ್ಲಿಷ್ ಪ್ರೋಗ್ರಾಂಗೆ ತಮ್ಮನ್ನು ದಾಖಲಿಸಿಕೊಂಡ ಮತ್ತು 8 ಜಿಎಸ್‍ಇ ಮಟ್ಟವನ್ನು ದಾಟಿದ 18ರಿಂದ 35 ವರ್ಷದೊಳಗಿನ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಅರ್ಜಿ ಸಲ್ಲಿಸಲು ಅರ್ಹರು.

ಬಹುಮಾನ ಅಥವಾ ನೆರವು: ಆಯ್ಕೆಯಾಗುವವರಿಗೆ ₹10,000 ವಿದ್ಯಾರ್ಥಿ ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಆಗಸ್ಟ್ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/PMES01

***

ವರ್ಗ: ಮೆರಿಟ್ ಆಧಾರಿತ

ವಿದ್ಯಾರ್ಥಿ ವೇತನ: ಡ್ಯಾನಿಷ್ ಸರ್ಕಾರಿ ವಿದ್ಯಾರ್ಥಿ ವೇತನ 2019

ವಿವರ: ಉನ್ನತ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯವು ಭಾರತೀಯ ವಿದ್ಯಾರ್ಥಿಗಳಿಗೆ ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದಲ್ಲಿ (ಎಸ್‍ಡಿಯು) ಎಂಜಿನಿಯರಿಂಗ್‍ನಲ್ಲಿ ಉನ್ನತ ಶಿಕ್ಷಣ ಪಡೆಯಲು ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಮಾಸಿಕ ವೆಚ್ಚಗಳನ್ನು ವಿದ್ಯಾರ್ಥಿ ವೇತನದ ಮೂಲಕ ಭರಿಸಲಾಗುತ್ತದೆ.

ಅರ್ಹತೆ: ಮೆಕಾಟ್ರಾನಿಕ್ಸ್, ಇನ್ನೋವೇಷನ್ ಮತ್ತು ಬ್ಯುಸಿನೆಸ್ ಎಲೆಕ್ಟ್ರಾನಿಕ್ಸ್‌ನ ಎಂಜಿನಿಯರಿಂಗ್ ವಿಷಯಗಳಲ್ಲಿ ಸೋಂಡರೊಬರ್ಗ್‌ನಲ್ಲಿ ಎಂ.ಎಸ್‌ಸಿ. ಪದವಿಗೆ ಅರ್ಜಿ ಸಲ್ಲಿಸುವ ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರು. ಅಂಥವರು ಅರ್ಜಿ ಸಲ್ಲಿಸಬಹುದು.

ಬಹುಮಾನ ಮತ್ತು ನೆರವು: ಆಯ್ದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಪೂರ್ಣ ಮನ್ನಾ ಮತ್ತು ದೈನಂದಿನ ವೆಚ್ಚಕ್ಕಾಗಿ ತಿಂಗಳಿಗೆ ಡೆನ್ಮಾರ್ಕ್ ಕರೆನ್ಸಿ 3,000 ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಸೆಪ್ಟೆಂಬರ್ 1

ಅಪ್ಲಿಕೇಷನ್: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/DGS2

*** 

ವರ್ಗ: ಮೆರಿಟ್ ಆಧಾರಿತ

ವಿದ್ಯಾರ್ಥಿ ವೇತನ: ವಿದ್ಯಾರ್ಥಿನಿಯರಿಗಾಗಿ ಡಿಆರ್‌ಡಿಒ ವಿದ್ಯಾರ್ಥಿವೇತನ ಯೋಜನೆ 2019

ವಿವರ: ಡಿಆರ್‌ಡಿಒ, ರಕ್ಷಣಾ ಸಚಿವಾಲಯ ಮತ್ತು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮುಂದುವರೆಸ ಬಯಸುವ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸಲು ಆರ್ಥಿಕ ನೆರವು ನೀಡಲಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ವೆಚ್ಚ ಭರಿಸುವ ಮಹತ್ವದ ವಿದ್ಯಾರ್ಥಿವೇತನ ಇದಾಗಿದೆ.

ಅರ್ಹತೆ: ಪದವಿ/ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯರು (ಬಿ.ಇ/ ಬಿ.ಟೆಕ್/ಬಿ.ಎಸ್‌ಸಿ. ಎಂಜಿನಿಯರಿಂಗ್ ಅಥವಾ ಎಂ.ಇ/ ಎಂ.ಟೆಕ್/ ಎಂ.ಎಸ್ ಎಂಜಿನಿಯರಿಂಗ್) ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಯುಜಿ ಅರ್ಜಿದಾರರು ಜೆಇಇ (ಮುಖ್ಯ) ಸ್ಕೋರ್ ಹೊಂದಿರಬೇಕು. ಆದರೆ ಪಿಜಿ ಅರ್ಜಿದಾರರು ಪದವಿಯಲ್ಲಿ ಕನಿಷ್ಠ 6.75 ಸಿಜಿಪಿಎ/ಸಿಪಿಐ ಸ್ಕೋರ್ ಮಾಡಿಬೇಕು ಮತ್ತು ಗೇಟ್ ಸ್ಕೋರ್ ಹೊಂದಿರಬೇಕು.

ಬಹುಮಾನ ಮತ್ತು ನೆರವು: ಆಯ್ದ 20 ಪದವಿ ಕೋರ್ಸ್ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ₹ 1.2 ಲಕ್ಷ ಅಥವಾ ಗರಿಷ್ಠ ಶೈಕ್ಷಣಿಕ ಶುಲ್ಕವನ್ನು 4 ವರ್ಷಗಳವರೆಗೂ ನೀಡಲಾಗುತ್ತದೆ. ಅಂತೆಯೇ 10 ಆಯ್ದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.86 ಲಕ್ಷ ವಿದ್ಯಾರ್ಥಿ ವೇತನ 2 ವರ್ಷಗಳ ಅವಧಿಗೆ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಸೆಪ್ಟೆಂಬರ್ 10

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಅಪ್ಲಿಕೇಷನ್‍ಗಳ ಮೂಲಕ

ಮಾಹಿತಿಗೆ: http://www.b4s.in/praja/DRDO

***

ಕೃಪೆ: www.buddy4study.com

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು