ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹35.000 ವಿದ್ಯಾರ್ಥಿವೇತನ: ITI, PUC, DIPlOMA DEGREE ವಿದ್ಯಾರ್ಥಿಗಳಿಗೆ ಮಾತ್ರ

Last Updated 24 ಡಿಸೆಂಬರ್ 2019, 9:19 IST
ಅಕ್ಷರ ಗಾತ್ರ

ವಿದ್ಯಾರ್ಥಿವೇತನ: ಪ್ರತಿಭಾವಂತ ವಿದ್ಯಾರ್ಥಿಗಳಿಗೆಎಸ್‌ಟಿಎಫ್‌ಸಿವಿದ್ಯಾರ್ಥಿವೇತನ

ವಿವರ: ಸರಕು ಸಾಗಣೆ ವಾಹನಗಳ ಚಾಲಕರ ಕುಟುಂಬಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ಹಣಕಾಸಿನ ನೆರವು ನೀಡಲು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ ಈ ವಿದ್ಯಾರ್ಥಿವೇತನ ನೀಡಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಹತೆ: ವಿದ್ಯಾರ್ಥಿಗಳು ಡಿಪ್ಲೋಮಾ /ಐಟಿಐ/ ಪಾಲಿಟೆಕ್ನಿಕ್ ಅಥವಾ ಪದವಿ/ ಎಂಜಿನಿಯರಿಂಗ್ (3-4 ವರ್ಷ) ಕೋರ್ಸ್‌ಗಳಿಗೆ ದಾಖಲಾಗಿರಬೇಕು. ಅವರು 10 ಮತ್ತು 12ನೇ ತರಗತಿಯಲ್ಲಿ
ಶೇ 60ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಸರಕು ಸಾಗಣೆ ವಾಹನ ಚಾಲಕರ ಕುಟುಂಬದವರಾಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ
₹ 4 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಐಟಿಐ/ ಪಾಲಿಟೆಕ್ನಿಕ್‌/ ಡಿಪ್ಲೋಮಾ ವಿದ್ಯಾರ್ಥಿಗಳಿಗೆ (ಗರಿಷ್ಠ 3 ವರ್ಷ) ವಾರ್ಷಿಕ ₹15 ಸಾವಿರ ಹಾಗೂ ಪದವಿ/ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ (ಗರಿಷ್ಠ 4 ವರ್ಷ) ವಾರ್ಷಿಕ ₹ 35 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಡಿಸೆಂಬರ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/STFC1

***

ವಿದ್ಯಾರ್ಥಿವೇತನ: ಎಲ್‌ ಅಂಡ್‌ ಟಿ ಬಿಲ್ಡ್‌ ಇಂಡಿಯಾ ವಿದ್ಯಾರ್ಥಿವೇತನ 2020

ವಿವರ: ಲಾರ್ಸನ್‌ ಅಂಡ್‌ ಟುಬ್ರೊ ಇಂಡಿಯಾ ಕಂಪನಿಯು, ಸಿವಿಲ್‌/ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ಕೋರ್ಸ್‌ಗಳಲ್ಲಿ ಅಂತಿಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎಂ.ಟೆಕ್‌. ವ್ಯಾಸಂಗಕ್ಕೆ ಶುಲ್ಕ, ಸ್ಟೈಪಂಡ್‌, ಎಲ್‌ ಅಂಡ್‌ ಟಿ ಲೈವ್‌ ಸೈಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ಮತ್ತು ಉದ್ಯೋಗ ಅವಕಾಶಗಳು ದೊರೆಯಲಿವೆ.

ಅರ್ಹತೆ: ಅಂತಿಮ ವರ್ಷದ ಬಿ.ಇ./ ಬಿ.ಟೆಕ್‌. ಸಿವಿಲ್‌/ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಬಿ.ಇ./ ಬಿ.ಟೆಕ್‌.ನ 6ನೇ ಸೆಮಿಸ್ಟರ್‌ನಲ್ಲಿ ಶೇ 65 ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ವರ್ಷಗಳವರೆಗೆ ಶುಲ್ಕ ಪಾವತಿಸಲಾಗುತ್ತದೆ. ಅಲ್ಲದೆ 24 ತಿಂಗಳು ತಲಾ ₹ 13,400 ಸ್ಟೈಪಂಡ್‌ ದೊರೆಯುತ್ತದೆ. ಎಲ್‌ ಅಂಡ್‌ ಟಿ ಲೈವ್‌ ಸೈಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ಮತ್ತು ಕೋರ್ಸ್‌ ಪೂರ್ಣಗೊಂಡ ಬಳಿಕ ಉದ್ಯೋಗ ಅವಕಾಶಗಳು ದೊರೆಯಲಿವೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019 ಡಿಸೆಂಬರ್‌ 31

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/LAT1

***

ವಿದ್ಯಾರ್ಥಿವೇತನ: ಎಲ್‌ಐಸಿ ಎಚ್‌ಎಫ್‌ಎಲ್‌ ವಿದ್ಯಾಧನ್‌ ವಿದ್ಯಾರ್ಥಿವೇತನ

ವಿವರ: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ‘ಎಲ್‌ಐಸಿ ಎಚ್‌ಎಫ್‌ಎಲ್ ವಿದ್ಯಾಧನ್’ ವಿದ್ಯಾರ್ಥಿವೇತನಕ್ಕೆ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನವು ಶಾಲೆ/ ಐಟಿಐ/ ಡಿಪ್ಲೋಮಾ/ ಯುಜಿ/ ಪಿಜಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆ.

ಅರ್ಹತೆ: ಭಾರತದಲ್ಲಿ ಮಾನ್ಯತೆ ಪಡೆದಿರುವ ಶಾಲೆ/ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಅಭ್ಯರ್ಥಿಯು 8ರಿಂದ 12ನೇ ತರಗತಿ/ ಐಟಿಐ/ ಡಿಪ್ಲೋಮಾ/ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರಬೇಕು. ಅಭ್ಯರ್ಥಿಯು ಕಳೆದ ಅರ್ಹತಾ ಪರೀಕ್ಷೆಯಲ್ಲಿ ಶೇ 65ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅರ್ಜಿದಾರರ ಕುಟುಂಬದ ಆದಾಯ ಮಿತಿ ವಾರ್ಷಿಕ ₹ 3 ಲಕ್ಷ.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಒಮ್ಮೆ ಮಾತ್ರ ₹ 10 ಸಾವಿರದಿಂದ ₹ 30 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2019ರ ಡಿಸೆಂಬರ್ 31

ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿ: http://www.b4s.in/praja/LHVS1

***

ಕೃಪೆ - buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT