ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ ಕೈಪಿಡಿ; ಐಎನ್ಎಂಎಎಸ್-ಡಿಆರ್‌ಡಿಓ ಹಿರಿಯ ಸಂಶೋಧನಾ ಫೆಲೋಶಿಪ್

Last Updated 24 ಜನವರಿ 2021, 19:30 IST
ಅಕ್ಷರ ಗಾತ್ರ

ಐಎನ್ಎಂಎಎಸ್-ಡಿಆರ್‌ಡಿಓ ಹಿರಿಯ ಸಂಶೋಧನಾ ಫೆಲೋಶಿಪ್ 2021

ವಿವರ: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್‌ ಆರ್ಗನೈಜೇಶನ್ (ಡಿಆರ್‌ಡಿಒ) ಎಂ.ಟೆಕ್, ಎಂ.ಇ, ಎಂ.ಎಸ್‌.ಸಿ ಪದವಿ ಪಡೆದವರಿಂದ ಐಎನ್ಎಂಎಎಸ್-ಡಿಆರ್‌ಡಿಒ ಹಿರಿಯ ಸಂಶೋಧನಾ ಫೆಲೋಶಿಪ್–2021 ಕ್ಕೆ ಅರ್ಜಿ ಆಹ್ವಾನಿಸಿದೆ. ಈ ಫೆಲೋಶಿಪ್ ದೆಹಲಿ ಎನ್‌ಸಿಆರ್‌ನ ನೆಲ ಹಾಗೂ ಮೇಲ್ಮೈ ನೀರಿನ ಮೂಲಗಳಲ್ಲಿನ ವಿಕಿರಣಶೀಲತೆಯನ್ನು ಗುರುತಿಸುವುದು ಮತ್ತು ವಿಕಿರಣಶೀಲ ನೀರು ಶುದ್ಧೀಕರಣಕ್ಕೆ ಸೂಕ್ತವಾದ ಸಾಧನಗಳ ಅಭಿವೃದ್ಧಿ ಈ ವಿಷಯದ ಮೇಲೆ ಅಭ್ಯರ್ಥಿಯ ಸಂಶೋಧನೆ ನಡೆಸಬೇಕು.

ಅರ್ಹತೆ: ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಸಂಶೋಧನಾ ಅನುಭವ, ಪರಿಸರ ವಿಜ್ಞಾನದಲ್ಲಿ ಪ್ರಥಮ ದರ್ಜೆ ಎಂ.ಟೆಕ್, ಎಂ.ಇ, ಎಂ.ಎಸ್‌ಸಿ ಪದವಿ ಹೊಂದಿದ್ದು 32 ವರ್ಷ ವಯಸ್ಸಿನ ಒಳಗಿನವರಾಗಿರಬೇಕು ಅವರು ಎಸ್‌ಸಿಐ ನಿಯತಕಾಲಿಕೆಯಲ್ಲಿ ಕನಿಷ್ಠ ಒಂದು ಲೇಖನ ಪ್ರಕಟಿಸಿರಬೇಕು. ಅಲ್ಲದೆ, ಎಲ್ಎಸ್, ನೆಟ್, ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆರ್ಥಿಕ ನೆರವು: ಮಾಸಿಕ ₹ 35,000 ವೇತನ ಹಾಗೂ ಎಚ್‌ಆರ್‌ಎ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2021ರ ಫೆಬ್ರುವರಿ 4

ಅರ್ಜಿ ಸಲ್ಲಿಸುವ ವಿಧಾನ: ಇ–ಮೇಲ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/SDF7‍

***

ಐಐಟಿ ಬಿಎಚ್‌ಯು ವಾರಾಣಸಿ ಡಿಪಾರ್ಟ್‌ಮೆಂಟ್‌ ಆಫ್ ಫಿಸಿಕ್ಸ್ ರಿಸರ್ಚ್ ಫೆಲೋಶಿಪ್ 2021

ವಿವರ: ಇಂಡಿಯನ್ ‌‌ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ (ಬಿಎಚ್‌ಯು), ವಾರಾಣಸಿ ಎಂ.ಐ.ಎಸ್‌ಸಿ, ಬಿ.ಇ, ಬಿ.ಟೆಕ್‌ ಪದವಿ ಪಡೆದವರಿಂದ ಐಐಟಿ ಬಿಎಚ್‌ಯು ವಾರಾಣಸಿ ಭೌತಶಾಸ್ತ್ರ ವಿಭಾಗದ ಹಿರಿಯ ಸಂಶೋಧನಾ ಫೆಲೋಶಿಪ್‌ 2021ಕ್ಕೆ ಅರ್ಜಿ ಆಹ್ವಾನಿಸಿದೆ. ಪೊಲರಿಮೆಟ್ರಿಕ್‌ ಪ್ಯಾರಾಮೀಟರ್ಸ್ ಫ್ರಂ ಲೇಸರ್‌ ಸ್ಪೆಕಲ್‌ ಈ ವಿಷಯದ ಮೇಲೆ ಅಭ್ಯರ್ಥಿಯು ಅಧ್ಯಯನ ಮಾಡಬೇಕು.

ಅರ್ಹತೆ: ಎಂ.ಎಸ್‌ಸಿ, ಬಿ.ಇ, ಬಿ.ಟೆಕ್ ಅಥವಾ ಶೇ 55 ಅಂಕಗಳೊಂದಿಗೆ ತತ್ಸಮಾನ ಪದವಿ ಪಡೆದ 28 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳು, ನೆಟ್, ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆರ್ಥಿಕ ನೆರವು: ತಿಂಗಳಿಗೆ ₹ 35000 ಹಾಗೂ ಎಚ್‌ಆರ್‌ಎ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2021ರ ಫೆಬ್ರುವರಿ 5

ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/BVD3

***

ಪದವಿ ವಿದ್ಯಾರ್ಥಿಗಳಿಗೆ ಸರ್ದಾರ್ ಪಟೇಲ್ ವಿದ್ಯಾರ್ಥಿವೇತನ

ಅರ್ಹತೆ: ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ಆಯ್ಕೆಯಾದವರಿಗೆ ₹ 15000 ವಿದ್ಯಾರ್ಥಿವೇತನ

ಕೊನೆಯ ದಿನಾಂಕ: 2021ರ ಫೆಬ್ರುವರಿ 28

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌

ಹೆಚ್ಚಿನ ಮಾಹಿತಿಗೆ: www.b4s.in/praja/SPS1

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT