ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 24 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ವರ್ಗ: ಮೆರಿಟ್‌ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಎಐಸಿಟಿಇ ಸ್ನಾತಕೋತ್ತರ (ಗ್ಯಾಟ್‌/ಜಿಪ್ಯಾಟ್‌) ವಿದ್ಯಾರ್ಥಿ ವೇತನ 2019–20

ವಿವರ: ದೇಶದಲ್ಲಿ ತಾಂತ್ರಿಕ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲುಎಐಸಿಟಿಇ ಮತ್ತು ಎಂಎಚ್‌ಆರ್‌ಡಿ ಈ ವಿದ್ಯಾರ್ಥಿ ವೇತನ ನೀಡುತ್ತಿವೆ. ದೇಶದ ತಾಂತ್ರಿಕ ಪದವೀಧರರಿಗೆ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅನುಕೂಲವಾಗಲು ಈ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ.

ಅರ್ಹತೆ: ಭಾರತೀಯ ಅರ್ಹ ತಾಂತ್ರಿಕ ಪದವೀಧರರು (ಗ್ಯಾಟ್‌/ಜಿಪ್ಯಾಟ್‌ ಅಂಕಗಳೊಂದಿಗೆ) ಎಐಸಿಟಿಇಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿಮೊದಲ ವರ್ಷದ ಎಂ.ಟೆಕ್‌/ ಎಂ.ಇ/ ಎಂ.ಫಾರ್ಮಾ/ ಎಂ.ಆರ್ಕಿಟೆಕ್ಚರ್‌ ಕೋರ್ಸ್‌ಗೆ ಪ್ರವೇಶ ಪಡೆದಿರುವ (2019–20) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಸ್ನಾತಕೋತ್ತರ ಕೋರ್ಸ್‌ ಅವಧಿಯಲ್ಲಿ (2 ವರ್ಷ) ಮಾಸಿಕ ₹ 12,400 ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಸೆಪ್ಟೆಂಬರ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌

ಮಾಹಿತಿ:http://www.b4s.in/Praja/PGA1

***

ವರ್ಗ: ಮೆರಿಟ್‌ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಮೆರ್ಕ್‌ ಇಂಡಿಯಾ ಚಾರಿಟಬಲ್‌ ಟ್ರಸ್ಟ್‌ (ಎಂಐಸಿಟಿ) ವಿದ್ಯಾರ್ಥಿ ವೇತನ 2019–20

ವಿವರ: ಬೆಂಗಳೂರು, ಮುಂಬೈ, ನವಿ ಮುಂಬೈ, ಠಾಣೆ ವ್ಯಾಪ್ತಿಯಲ್ಲಿ ಸೌಲಭ್ಯ ವಂಚಿತ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ದೀರ್ಘಕಾಲೀನ ಶೈಕ್ಷಣಿಕ ವೆಚ್ಚಗಳನ್ನು ಭರಿಸುವ ಮೂಲಕ ಅವರ ಉನ್ನತ ಶಿಕ್ಷಣಕ್ಕೂ ಇದು ನೆರವಾಗಲಿದೆ.

ಅರ್ಹತೆ: ಬೆಂಗಳೂರು, ಠಾಣೆ, ನವಿ ಮುಂಬೈ ಮತ್ತು ಮಂಬೈ ವ್ಯಾಪ್ತಿಯಲ್ಲಿ 2018–19ನೇ ಸಾಲಿನಲ್ಲಿ 10ನೇ ತರಗತಿಯನ್ನು ಕನಿಷ್ಠ ಶೇ 80ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 2.40 ಲಕ್ಷ ಮಿತಿಯೊಳಗಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 35 ಸಾವಿರ ಆರ್ಥಿಕ ನೆರವು ದೊರೆಯಲಿದೆ. ವಿದ್ಯಾರ್ಥಿಗಳ ಪದವಿ ವ್ಯಾಸಂಗ ಪೂರ್ಣಗೊಳ್ಳುವವರೆಗೆ ವಾರ್ಷಿಕ ಶೈಕ್ಷಣಿಕ ಖರ್ಚು, ವೆಚ್ಚವನ್ನು ಈ ವಿದ್ಯಾರ್ಥಿ ವೇತನ ಪೂರೈಸುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಅಕ್ಟೋಬರ್‌ 15

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿ: http://www.b4s.in/Praja/MIC9

***

ವರ್ಗ: ಸಂಶೋಧನೆ ಆಧಾರಿತ

ವಿದ್ಯಾರ್ಥಿ ವೇತನ: ಆಪ್ಟಿಕಲ್‌ ಸ್ಪೆಕ್ಟ್ರೊಸ್ಕೋಪಿವಿಷಯದಲ್ಲಿ ಸಿಡ್ನಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಶೋಧನೆ ವಿದ್ಯಾರ್ಥಿವೇತನ ಕಾರ್ಯಕ್ರಮ 2019

ವಿವರ: ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಆಪ್ಟಿಕಲ್‌ ಸ್ಪೆಕ್ಟ್ರೊಸ್ಕೋಪಿ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಬಯಸುವ ಅಭ್ಯರ್ಥಿಗಳಿಗೆ ಪಿಎಚ್‌.ಡಿ. ವ್ಯಾಸಂಗಕ್ಕೆ ಈ ವಿದ್ಯಾರ್ಥಿ ವೇತನಆರ್ಥಿಕ ನೆರವು ನೀಡುತ್ತದೆ. ರಸಾಯನ ವಿಜ್ಞಾನ ಮತ್ತು ಭೌತ ವಿಜ್ಞಾನ ವಿಷಯಗಳಲ್ಲಿ ಆಳವಾದ ಜ್ಞಾನವಿರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳವರೆಗೆ ಈ ವಿದ್ಯಾರ್ಥಿ ವೇತನ ದೊರೆಯುತ್ತದೆ.

ಅರ್ಹತೆ:ಆಪ್ಟಿಕಲ್‌ ಸ್ಪೆಕ್ಟ್ರೊಸ್ಕೋಪಿ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವವರು ಸಿಡ್ನಿ ವಿಶ್ವವಿದ್ಯಾಲಯದ ‘ಸ್ಕೂಲ್‌ ಆಫ್‌ ಕೆಮಿಸ್ಟ್ರಿ’ ವಿಭಾಗದಲ್ಲಿ ಪಿಎಚ್.ಡಿ. ಪದವಿಗೆ ಪ್ರವೇಶ ಪಡೆದುಕೊಳ್ಳಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ, ವಿದ್ಯಾರ್ಥಿ ಸೇವಾ ಸೌಲಭ್ಯ ಶುಲ್ಕ ಮನ್ನಾ ಆಗಲಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ವಾರ್ಷಿಕ ಆರ್ಥಿಕ ನೆರವು ಕೂಡ ದೊರೆಯಲಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 2019ರ ಸೆಪ್ಟೆಂಬರ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿ: http://www.b4s.in/Praja/SOS2

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT