ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದ ಕೆಂಪನಪುರ ಶಾಲೆ: ಇಲ್ಲಿದೆ ಸೃಜನಶೀಲ ಕಲಿಕೆಗೇ ಒತ್ತು

ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುತ್ತಿರುವ ಕೆಂಪನಪುರ ಶಾಲೆ
Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಶಾಲಾ ಮಕ್ಕಳ ಕಲಿಕೆಯನ್ನು ಆಸಕ್ತಿದಾಯಕ, ಸಂತಸದಾಯಕ ಹಾಗೂ ಅನುಭವ ಪೂರಕವಾಗಿಸಲು ಶೈಕ್ಷಣಿಕ ವರ್ಷದ ಆರಂಭದಿಂದಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನು ಚಾಚೂ ತಪ್ಪದೆ ಪಾಲಿಸುತ್ತಿರುವಕೆಂಪನಪುರ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ ಹಲವು ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪರಿಸರ ಪೂರಕ, ಯೋಗಾಸನ, ಸ್ವಚ್ಛತೆ ಅರಿವು ಸೇರಿದಂತೆವಿಷಯಾಧರಿತಕಾರ್ಯಕ್ರಮಗಳನ್ನು ಶಿಕ್ಷಕರು ಅನುಷ್ಠಾನಗೊಳಿಸುತ್ತಿದ್ದಾರೆ. ಶಾಲೆಯ ಬಿಡುವಿನ ವೇಳೆಯಲ್ಲಿ ಇಂತಹ ಕಾರ್ಯಕ್ರಮಗಳನ್ನುಹಮ್ಮಿಕೊಂಡು ಮಕ್ಕಳಿಗೆ ಕಲಿಸಲಾಗುತ್ತಿದೆ.

ಭಾನುವಾರ ಸೇರಿದಂತೆ ವಾರದ ಎಲ್ಲ ದಿನಗಳಲ್ಲಿಯೂ ಒಂದೊಂದು ಚಟುವಟಿಕೆಯನ್ನು ಆಯ್ಕೆ ಮಾಡಿಕೊಂಡು ಮಕ್ಕಳನ್ನುಕಲಿಕೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಪ್ರತಿದಿನ ಪ್ರಾರ್ಥನೆ ಸಮಯದಲ್ಲಿ ದಾರ್ಶನಿಕರ ಒಂದೊಂದು ಪುಸ್ತಕದ ಕಿರು ಪರಿಚಯವನ್ನು ಮಕ್ಕಳಿಂದಲೇ ವಿವರಿಸಲಾಗುತ್ತಿದೆ.

ಜತೆಗೆ, ಆ ದಿನದ ದೈನಂದಿನ ಪತ್ರಿಕೆಯನ್ನು ಓದಿ ಸಮಕಾಲೀನ ವಿಷಯದ ಬಗ್ಗೆ ಬೆಳಕು ಚೆಲ್ಲುವ ಕೆಲಸವೂ ನಡೆಯುತ್ತಿದೆ. ಪಠ್ಯೇತರಚಟುವಟಿಕೆಗಳು ಮುಗಿದ ನಂತರ ಚಟುವಟಿಕೆ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿಜ್ಞಾನ ವಿಷಯಗಳಲ್ಲಿಭೌತವಿಜ್ಞಾನಹಾಗೂ ರಸಾಯನವಿಜ್ಞಾನದಬಗ್ಗೆ ಸಂಬಂಧಿಸಿದಂತೆ ತರಗತಿಗಳಲ್ಲಿ ಎಲ್ಲ ಮಕ್ಕಳಿಗೂ ಪ್ರಯೋಗಗಳನ್ನು ಕಲಿಸಿಕೊಡಲಾಗುತ್ತದೆ.

ಘನ, ದ್ರವ ಸ್ಥಿತಿಗಳನ್ನು ಬೇರ್ಪಡಿಸುವುದು ಹಾಗೂ ಶೋಧಿಸುವಿಕೆ ಸೇರಿದಂತೆ ಪಠ್ಯಕ್ಕೆ ಅನುಕೂಲವಾಗುವ ವಿಷಯಗಳ ಬಗ್ಗೆ ತಿಳಿಸಿ ಕೊಡಲಾಗುತ್ತಿದೆ. ಚಿತ್ರಕಲೆಯಲ್ಲಿ ತರಬೇತಿ ನೀಡುವುದರ ಜತೆಗೆ ಅವರಿಗೆ ಸ್ಥಳದಲ್ಲಿ ಚಿತ್ರ ಬರೆದು ಬಣ್ಣ ಹಚ್ಚಿ ಅದಕ್ಕೊಂದು ರೂಪ ಕೊಟ್ಟು ಅರ್ಥ ತಿಳಿಸಿಕೊಡುತ್ತಾರೆ. ಇದರೊಂದಿಗೆರಂಗೋಲಿಸ್ಪರ್ಧೆನಡೆಸಿ ವಿಜ್ಞಾನ ಪಾಠಗಳಲ್ಲಿ ಬರುವ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ಬಿಡಿ ಭಾಗಗಳ ಬಗ್ಗೆ ತಿಳಿಸಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸುತ್ತಿದ್ದಾರೆ.

‘ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕೆನ್ನುವ ಉದ್ದೇಶದಿಂದ ಶಾಲಾ ಪರಿಸರವನ್ನು ಉತ್ತಮವಾಗಿಡುವಂತೆ ಪ್ರೇರೇಪಿಸುತ್ತಾರೆ. ಕೈತೋಟ, ಗಿಡಗಳಿಗೆ ಯಾವ ಸಮಯದಲ್ಲಿ ನೀರುಣಿಸಬೇಕು? ಅದರಿಂದಾಗುವ ಪ್ರಯೋಜನಗಳ ಬಗ್ಗೆ ಪಠ್ಯ ಚಟುವಟಿಕೆಗಳ ಮೂಲಕ ಪ್ರಾಯೋಗಿಕವಾಗಿ ತಿಳಿಸಿಕೊಡುತ್ತಾರೆ. ಗಿಡ ಮರಗಳ ಸಂರಕ್ಷಣೆ ಹಾಗೂ ಪೋಷಣೆ ಮಾಡುವುದರಿಂದ ಮುಂದಾಗುವ ಪ್ರಯೋಜನಗಳನ್ನು ತಿಳಿಸಿಕೊಡುತ್ತಾರೆ’ ಎಂದುವಿದ್ಯಾರ್ಥಿ ಪ್ರವೀಣ್‌ ಕುಮಾರ್‌ ಹೇಳಿದರು.

‘ನಮ್ಮ ಶಾಲೆಯಲ್ಲಿ ಕಲಿಕೆಯ ಜೊತೆಗೆ ಪ್ರಮುಖ ದಿನಾಚರಣೆಗಳನ್ನು ಆಚರಿಸಿ ಆ ದಿನದ ಮಹತ್ವ ಮತ್ತು ಅವುಗಳ ಅವಶ್ಯಕತೆಗಳನ್ನು ಹೇಳಿಕೊಡುತ್ತೇವೆ. ಆ ಮೂಲಕ ದೈನಂದಿನ ಜೀವನದಲ್ಲಿ ರೂಡಿಸಿಕೊಳ್ಳುವಂತೆ ಸಲಹೆ ನೀಡುತ್ತೇವೆ’ ಎಂದು ಮುಖ್ಯ ಶಿಕ್ಷಕ ರೇವಣ್ಣ ‘ಪ್ರಜಾವಾಣಿ’ಗೆ ಹೇಳಿದರು.

ಮಕ್ಕಳ ಬೆಳವಣಿಗೆಗೆ ಪೂರಕ

‘ವೈಯಕ್ತಿಕ ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು,ಪ್ರಚಲಿತ ವಿದ್ಯಮಾನಗಳರಸಪ್ರಶ್ನೆ ಕಾರ್ಯಕ್ರಮಗಳುಮಕ್ಕಳಜ್ಞಾನವನ್ನು ಹೆಚ್ಚಿಸುತ್ತವೆ. ಪ್ರತಿ ಶನಿವಾರ ಮಕ್ಕಳಿಗೆ ಯೋಗಾಸನ ಹೇಳಿ ಕೊಡಲಾಗುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಹಾಗೂ ಸದೃಢ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ.ಬೌದ್ಧಿಕಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಿದೆ’ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಿಳಾ ಬಾಯಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT