ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ಕ್ಕೆ 100 ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಹೀಗಿದೆ ನೋಡಿ!

Last Updated 23 ಫೆಬ್ರುವರಿ 2020, 6:25 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ದಿನಗಣನೆ ಶುರುವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಈ ಪರೀಕ್ಷೆಯು ಪ್ರಮುಖ ಘಟ್ಟವಾಗಿದ್ದು, ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿಗಳು ಶ್ರಮಿಸುತ್ತಾರೆ.

ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿದೆ.100ಕ್ಕೆ 100 ಅಂಕಗಳನ್ನು ಗಳಿಸಿದ ವಿಜಯಪುರದ ವಿಕಾಸ ಬಾಲಕರ ಪ್ರೌಢ ಶಾಲೆ ಮತ್ತು ಇಂದಿರಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ರಕ್ಷಿತಾ ಸ. ಪ್ರಭಾಕರ ಎಂಬ ಹೆಸರಿನಲ್ಲಿನ ಕನ್ನಡ ಉತ್ತರ ಪತ್ರಿಕೆ ಈಗಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿದೆ.

ಪರೀಕ್ಷೆ ವೇಳಾಪಟ್ಟಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 2020ರ ಮಾರ್ಚ್‌ 20ರಿಂದ ಏಪ್ರಿಲ್‌ 3ರ ನಡುವೆ ನಡೆಸಲು ನಿರ್ಧರಿಸಿದೆ.

ವೇಳಾಪಟ್ಟಿಯಂತೆ ಮಾರ್ಚ್‌ 20 ರಂದು ಪ್ರಥಮ ಭಾಷೆ, 21ರಂದು ಅರ್ಥಶಾಸ್ತ್ರ, ಇತರ ಕೋರ್‌ ವಿಷಯಗಳು, 23ರಂದು ಸಮಾಜ ವಿಜ್ಞಾನ, 26ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ, 30ರಂದು ಗಣಿತ, ಏಪ್ರಿಲ್‌ 1ರಂದು ದ್ವಿತೀಯ ಭಾಷೆ, 3ರಂದು ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್‌ ಪರೀಕ್ಷೆಗಳು ನಡೆಯಲಿವೆ.

ಪ್ರಥಮ ಭಾಷೆಗೆ ಗರಿಷ್ಠ 100 ಅಂಕ, ಉಳಿದ ವಿಷಯಗಳಿಗೆ ಗರಿಷ್ಠ 80 ಅಂಕಗಳಂತೆ ಪರೀಕ್ಷೆ ನಡೆಯಲಿದೆ. ಆದರೆ ಸಿಸಿಇ ಖಾಸಗಿ, ಪುನರಾವರ್ತಿತ ಮತ್ತಿತರ ಅಭ್ಯರ್ಥಿಗಳಿಗೆ ಮಾತ್ರ ಪ್ರಥಮ ಭಾಷೆಗೆ 125, ಇತರ ವಿಷಯಗಳಿಗೆ 100 ಅಂಕಗಳಂತೆ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT