ವಿಶ್ವ ಥಲಸ್ಸೇಮಿಯಾ ದಿನ

ಸೋಮವಾರ, ಮೇ 20, 2019
28 °C

ವಿಶ್ವ ಥಲಸ್ಸೇಮಿಯಾ ದಿನ

Published:
Updated:
Prajavani

ಆನುವಂಶಿಕವಾಗಿ ಹರಡುವ, ಅಸ್ಥಿಮಜ್ಜೆ ಸಂಬಂಧಿ ರಕ್ತದ ಕಾಯಿಲೆಯೇ ಥಲಸ್ಸೇಮಿಯಾ. ಭಾರತದಲ್ಲಿ ಪ್ರತಿವರ್ಷ ಅಂದಾಜು 10,000 ಮಕ್ಕಳು ಥಲಸ್ಸೇಮಿಯಾ ಸಮಸ್ಯೆಯೊಂದಿಗೆ ಜನಿಸುತ್ತಾರೆ. ದೋಷಪೂರಿತ ವಂಶವಾಹಿಗಳ ಕಾರಣದಿಂದಾಗಿ ಪೋಷಕರ ಮೂಲಕ ಮಕ್ಕಳಿಗೆ ಇದು ವರ್ಗಾವಣೆಯಾಗುತ್ತದೆ. ಗರ್ಭಾವಸ್ಥೆಯ ಹಂತದಲ್ಲಿ ಭ್ರೂಣದಲ್ಲೇ ಈ ಬಗೆಯ ಅಸಹಜ ಬೆಳವಣಿಗೆ ಉಂಟಾಗುವ ಸಾಧ್ಯತೆಯಿರುತ್ತದೆ. ಆದರೆ ಮಗುವಿನ ಆರೋಗ್ಯದಲ್ಲಿ ತೊಂದರೆ ಇದೆ ಎಂಬ ಬಗ್ಗೆ ಪೋಷಕರಿಗೆ ಅಷ್ಟಾಗಿ ಅರಿವು ಇರುವುದಿಲ್ಲ. ಥಲಸ್ಸೇಮಿಯಾ ಸಮಸ್ಯೆ ಹೊಂದಿರುವ ಮಗುವಿಗೆ ರಕ್ತದ ವರ್ಗಾವಣೆಯನ್ನು ನಿರಂತರವಾಗಿ ಮಾಡಿಸುತ್ತಿರಬೇಕು. ಈ ಹಿಮೋಗ್ಲೋಬಿನ್ ಕಾಯಿಲೆ ಗುಣಪಡಿಸಲು ಇರುವ ಏಕೈಕ ಮಾರ್ಗವೆಂದರೆ ಸೂಕ್ತ ದಾನಿಗಳ ಮೂಲಕ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಮಾತ್ರ.

ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳಿಂದ, ಯಾವ ದಂಪತಿಗೆ ವಂಶವಾಹಿ ಮೂಲಕ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ ಎಂದು ಪತ್ತೆಹಚ್ಚಬಹುದು. ಅಂತಹವರು ಪ್ರೀ ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ (ಪಿಜಿಡಿ) ತಪಾಸಣೆ ಮಾಡಿಸಿಕೊಂಡರೆ ದೋಷಪೂರಿತ ವಂಶವಾಹಿಗಳು ಮಗುವಿಗೆ ತಲುಪುವ ಅಪಾಯವನ್ನು ತಗ್ಗಿಸಬಹುದು.

ಸಹಜವಾಗಿ ಬೆಳೆಯದ ಭ್ರೂಣವು ಗರ್ಭಪಾತಕ್ಕೆ, ಗರ್ಭಾವಸ್ಥೆಯಲ್ಲೇ ಭ್ರೂಣದ ಸಾವಿಗೆ ಕಾರಣವಾಗಬಹುದು. ಭ್ರೂಣದ ಆರೋಗ್ಯವನ್ನು ಪಿಜಿಡಿ ಮೂಲಕ ಪರೀಕ್ಷಿಸಿ ಉತ್ಪಾದಿತ ಗ್ಯಾಮಿಟ್‍ಗಳನ್ನು ಐವಿಎಫ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದು ಆರೋಗ್ಯಕರ ಗರ್ಭಾವಸ್ಥೆಗೆ ಸಹಾಯಕವಾಗುತ್ತದೆ.

ಹ್ಯುಮನ್ ಲ್ಯುಕೋಸೈಟ್ ಆ್ಯಂಟಿಜೆನ್ (ಎಚ್‍ಎಲ್‍ಎ) ವಿಧಾನವನ್ನು (ಅಸ್ಥಿಮಜ್ಜೆ ದಾನಿಗಳ ಜತೆ ಹೊಂದಾಣಿಕೆ ಮಾಡುವ ವ್ಯವಸ್ಥೆ) ಪಿಜಿಡಿ ನೆರವಿನೊಂದಿಗೆ ಪರೀಕ್ಷೆ ಮಾಡಿಸಿದರೆ ಕಾಯಿಲೆರಹಿತ ಗರ್ಭಧಾರಣೆ ಸಾಧ್ಯ. ಹೆಮಟೊಪೊಯೆಟಿಕ್ ಸ್ಟೆಮ್ ಸೆಲ್ ಕಸಿ (ಎಚ್‍ಎಸ್‍ಸಿಟಿ) ಅನ್ನು ಹೊಂದಾಣಿಕೆಯಾಗದ ದಾನಿಗಳಿಂದ ಮಾಡಿದ ಕಸಿಗೆ ಹೋಲಿಸಿದಾಗ ಬದುಕುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ಐವಿಎಫ್‍ಗೆ ಪಿಜಿಡಿ-ಎಚ್‍ಎಲ್‍ಎ ವಿಧಾನವೇ ಸೂಕ್ತ ಆಯ್ಕೆ ಎನಿಸಿದೆ. ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಈ ವಿಧಾನ ನೆರವಾಗುತ್ತದೆ. 

(ಮಾಹಿತಿ: ಡಾ. ಮನೀಷ್ ಬ್ಯಾಂಕರ್, ವೈದ್ಯಕೀಯ ನಿರ್ದೇಶಕರು, ನೋವಾ ಐವಿಎಫ್ ಫರ್ಟಿಲಿಟಿ)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !