ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು: ರಾಹುಲ್ ಗಾಂಧಿ ಮತ್ತು ರಾಜನಾಥ್‌ ಸಿಂಗ್ ಹೇಳಿಕೆಗಳು

Published 31 ಮೇ 2024, 0:54 IST
Last Updated 31 ಮೇ 2024, 0:54 IST
ಅಕ್ಷರ ಗಾತ್ರ

ಬಿಜೆ‍ಪಿ ನಾಯಕರೊಬ್ಬರು ‘ಜಗನ್ನಾಥ ದೇವರು ಮೋದಿ ಅವರ ಭಕ್ತ’ ಎಂಬ ಹೇಳಿಕೆ ಕೊಟ್ಟಿದ್ದರು. ಆ ಮೂಲಕ ಬಿಜೆಪಿಯು ಒಡಿಶಾದ ಜನರಿಗೆ ಅವಮಾನ ಮಾಡಿದೆ. ಬಿಜೆಪಿ ಹಾಗೂ ಮಿತ್ರಪಕ್ಷಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಒಂದುಗೂಡಿವೆ. ಜಗತ್ತಿನ ಯಾವುದೇ ಶಕ್ತಿಗೂ ನಮ್ಮ ಸಂವಿಧಾನವನ್ನು ನಾಶಪಡಿಸಲು ಸಾಧ್ಯವಿಲ್ಲ  

– ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ

‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯನ್ನು ಮುಂದಿನ ಐದು ವರ್ಷಗಳಲ್ಲಿ ಜಾರಿಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ. ಲೋಕಸಭಾ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು ಎಂಬುದು ಬಿಜೆಪಿಯ ಬಯಕೆ. ಬಿಜೆಪಿಯು ಹಿಂದೂ–ಮುಸ್ಲಿಂ ರಾಜಕಾರಣ ಮಾಡಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಒಳಗೊಂಡಂತೆ ಪ್ರತಿಯೊಬ್ಬರನ್ನೂ ನಾವು ಭಾರತದ ಪ್ರಜೆ ಎಂದು ಪರಿಗಣಿಸುತ್ತೇವೆ. ನಾವಾಗಲಿ, ನಮ್ಮ ಪ್ರಧಾನಿಯಾಗಲಿ ಧರ್ಮದ ಆಧಾರದಲ್ಲಿ ಎಂದೂ ತಾರತಮ್ಯ ಮಾಡಿಲ್ಲ

– ರಾಜನಾಥ್‌ ಸಿಂಗ್, ಕೇಂದ್ರ ಸಚಿವ

ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT