ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು

Published 22 ಏಪ್ರಿಲ್ 2024, 23:24 IST
Last Updated 22 ಏಪ್ರಿಲ್ 2024, 23:24 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 10 ವರ್ಷಗಳ ಆಡಳಿತದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದಾರೆ. ನಕ್ಸಲಿಸಂ ಕೂಡಾ ಅವನತಿಯ ಹಾದಿ ಹಿಡಿದಿದೆ. ಛತ್ತೀಸ್‌ಗಢದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ನಕ್ಸಲರ ವಿರುದ್ದ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕದ ನಾಲ್ಕು ತಿಂಗಳುಗಳಲ್ಲಿ ಭದ್ರತಾ ಪಡೆಗಳು 90 ನಕ್ಸಲರನ್ನು ಕೊಂದಿದೆ

– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

******

ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ ಹಿನ್ನಡೆ ಆಗಿರುವುದನ್ನು ಮನಗಂಡಿರುವ ಬಿಜೆಪಿ ಆತಂಕಕ್ಕೆ ಒಳಗಾಗಿದೆ. ಆದ್ದರಿಂದ ಆ ಪಕ್ಷದ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕೇಸರಿ ಪಡೆಯ ಪತನ ಸನ್ನಿಹಿತವಾಗಿದೆ. ಸಂದೇಶ್‌ಖಾಲಿ ಘಟನೆಯು ಬಂಗಾಳ ಸರ್ಕಾರದ ಹೆಸರು ಕೆಡಿಸಲು ಬಿಜೆಪಿ ನಡೆಸಿರುವ ‘ಪೂರ್ವಯೋಜಿತ ತಂತ್ರ’

– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT