ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಸಮಸ್ತಿಪುರ (ಬಿಹಾರ) | ಶಾಂಭವಿ ಚೌಧರಿ vs ಸನ್ನಿ ಹಜಾರಿ

Published 3 ಮೇ 2024, 19:45 IST
Last Updated 3 ಮೇ 2024, 19:45 IST
ಅಕ್ಷರ ಗಾತ್ರ

ಶಾಂಭವಿ ಚೌಧರಿ (ಲೋಕ ಜನಶಕ್ತಿ ಪಕ್ಷ–ರಾಮ್‌ ವಿಲಾಸ್‌)

ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಲೋಕ ಜನಶಕ್ತಿ ಪಕ್ಷವು (ರಾಮ್‌ ವಿಲಾಸ್‌) ಶಾಂಭವಿ ಚೌಧರಿ ಅವರನ್ನು ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಪ್ರಿನ್ಸ್‌ ರಾಜ್‌ ಅವರು 1,02,090 ಮತಗಳ ಅಂತರದಿಂದ ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ಅವರನ್ನು ಸೋಲಿಸಿದ್ದರು. ಜೆಡಿಯು ಸಚಿವ ಅಶೋಕ್‌ ಚೌಧರಿ ಅವರ ಪುತ್ರಿಯಾಗಿರುವ ಶಾಂಭವಿ ಅವರ ಗೆಲುವಿಗಾಗಿ ಎನ್‌ಡಿಎ ಒಕ್ಕೂಟದ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಶಾಂಭವಿ ಅವರು ನಿವೃತ್ತ ಐಪಿಎಸ್ ಅಧಿಕಾರಿ ಕಿಶೋರ್‌ ಕುನಾಲ್‌ ಅವರ ಪುತ್ರ ಸಾಯನ್‌ ಕುನಾಲ್‌ ಅವರ ಪತ್ನಿ. ಶಾಂಭವಿ ಅವರ ತಂದೆ ಅಶೋಕ್‌ ಚೌಧರಿ ಅವರು ಜೆಡಿಯು ಮುಖಂಡರಾಗಿದ್ದು, ಲೋಕ ಜನಶಕ್ತಿ ಪಕ್ಷವು (ರಾಮ್‌ ವಿಲಾಸ್‌)ಎನ್‌ಡಿಎ ಒಕ್ಕೂಟದ ಜೊತೆಗಿರುವುದರಿಂದ ಪುತ್ರಿಯನ್ನು ಆ ಪಕ್ಷದಿಂದ ಸ್ಪರ್ಧೆಗಿಳಿಸಿದ್ದಾರೆ.

...........

ಸನ್ನಿ ಹಜಾರಿ (ಕಾಂಗ್ರೆಸ್‌)

ಶಾಂಭವಿ ಚೌಧರಿ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷವು ಸನ್ನಿ ಹಜಾರಿ ಅವರನ್ನು ಅಖಾಡಕ್ಕಿಳಿಸಿದೆ. ಜೆಡಿಯುನ ಹಿರಿಯ ಮುಖಂಡ ಹಾಗೂ ರಾಜ್ಯ ಸಚಿವ ಮಹೇಶ್ವರ ಹಜಾರಿ ಅವರ ಪುತ್ರರಾಗಿರುವ ಸನ್ನಿ ಅವರು ಈಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ‘ಇಂಡಿಯಾ’ ಒಕ್ಕೂಟದ ಬೆಂಬಲವಿರುವುದು ಸನ್ನಿ ಹಜಾರಿ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಆರಂಭದಲ್ಲಿ ಚಿರಾಗ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷದಿಂದ (ರಾಮ್‌ ವಿಲಾಸ್‌) ಟಿಕೆಟ್‌ ಪಡೆದು ಸ್ಪರ್ಧಿಸಲು ಸನ್ನಿ ಅವರು ಪ್ರಯತ್ನಿಸಿದ್ದರು. ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ಗೆ ಜಿಗಿದು ಅಲ್ಲಿಂದ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಬಿಹಾರದ ಇಬ್ಬರು ರಾಜ್ಯ ಸಚಿವರ ಮಕ್ಕಳು ಸ್ಪರ್ಧೆಗಿಳಿದಿರುವುದರಿಂದ ಕ್ಷೇತ್ರದ ಜನರು ಯಾರ ಪರ ನಿಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT