ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು | ಅನುರಾಗ್‌ ಠಾಕೂರ್‌ ಹಾಗೂ ಭೂಪೇಶ್‌ ಬಘೇಲ್‌ ಹೇಳಿಕೆ

Published 11 ಮೇ 2024, 0:27 IST
Last Updated 11 ಮೇ 2024, 0:27 IST
ಅಕ್ಷರ ಗಾತ್ರ
ವಿರೋಧ ಪಕ್ಷಗಳ ಅದರಲ್ಲೂ ಕಾಂಗ್ರೆಸ್‌ನ ಮುಖಂಡರು ಪಾಕಿಸ್ತಾನವನ್ನು ಬೆಂಬಲಿಸುವ ಹೇಳಿಕೆ ನೀಡುತ್ತಿದ್ದಾರೆ. ಸನಾತನ ಧರ್ಮವನ್ನು ಹತ್ತಿಕ್ಕಲು ಮತ್ತು ಹಿಂದೂಗಳನ್ನು ಅವಹೇಳನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚು ಹೆಂಡತಿಯರು ಮತ್ತು ಮಕ್ಕಳನ್ನು ಹೊಂದಿರುವವರಿಗೆ ಹೆಚ್ಚಿನ ಸಂಪನ್ಮೂಲಗಳನ್ನು ನೀಡಲು ಬಯಸುತ್ತಾರೆ. ಕಾಂಗ್ರೆಸ್‌ ಪಕ್ಷವು ಒಲೈಕೆ ರಾಜಕಾರಣ ಮಾಡುತ್ತದೆ ಮತ್ತು ಮತ ಪಡೆಯಲು ಪಾಕಿಸ್ತಾನದ ಬೆಂಬಲ ಕೋರುತ್ತಿದೆ. ಇವರು ನಮ್ಮ ಸೇನೆಯನ್ನು ದುರ್ಬಲಗೊಳಿಸಲು ಹಾಗೂ ಅಣ್ವಸ್ತ್ರಗಳನ್ನು ನಾಶಗೊಳಿಸಲು ಬಯಸುತ್ತಿದ್ದಾರೆ
-ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ
ಮೂರು ಹಂತಗಳ ಮತದಾನ ನಡೆದ ಬಳಿಕ ಬಿಜೆಪಿ ಮುಖಂಡರ ಆತ್ಮವಿಶ್ವಾಸ ಕುಗ್ಗಿ ಹೋಗಿದೆ. ಈ ಕಾರಣಕ್ಕೆ ಅವರು ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಿರಲು ಬಿಜೆಪಿಯನ್ನು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿದ್ದ ವೇಳೆ ಅವರಿಗೆ ಈ ವಿಚಾರದಲ್ಲಿ ಯಾವುದೇ ತಕರಾರುಗಳಿರಲಿಲ್ಲ. ಎಷ್ಟು ಸುಳ್ಳು ಹೇಳುತ್ತೀರಿ ಮತ್ತು ಜನರನ್ನು ದಾರಿ ತಪ್ಪಿಸುತ್ತಿದ್ದೀರಿ?
-ಭೂಪೇಶ್‌ ಬಘೇಲ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT