ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು

Published 13 ಏಪ್ರಿಲ್ 2024, 23:29 IST
Last Updated 13 ಏಪ್ರಿಲ್ 2024, 23:29 IST
ಅಕ್ಷರ ಗಾತ್ರ

ಬಿಜೆಪಿ–ಜೆಡಿಎಸ್‌ ಹೊಂದಾಣಿಕೆಯು ಅನ್ನ ಹಳಸಿತ್ತು-ನಾಯಿ ಹಸಿದಿತ್ತು ಎನ್ನುವಂತಾಗಿದೆ. ‘ಜಾತ್ಯತೀತ’ ಎಂದು ಹೆಸರಿಟ್ಟುಕೊಂಡು ಬಿಜೆಪಿ ಜೊತೆ ಬೆರೆತಿರುವ ಜೆಡಿಎಸ್‌ಗೆ ಮಾನ– ಮರ್ಯಾದೆ ಇದೆಯೇ? ಕೇವಲ ಕುಟುಂಬದ ಹಿತಾಸಕ್ತಿಗಾಗಿ ಯಾರ ಜತೆಗೆ ಬೇಕಾದರೂ ಹೋಗಲು ಜೆಡಿಎಸ್ ಸಿದ್ಧವಾಗಿ ಬಿಡುತ್ತದೆ. ಯಾವುದೇ ಸಿದ್ದಾಂತವಿಲ್ಲ, ಜನಪರವಾದ ಬದ್ಧತೆಯೂ ಇಲ್ಲ.

–ಸಿದ್ದರಾಮಯ್ಯ, ಮುಖ್ಯಮಂತ್ರಿ

**

‌‌ಭಾರತ್‌ ಮಾತಾ ಕೀ ಜೈ ಎಂದು ಕಾಂಗ್ರೆಸ್‌ನವರು ಕೂಗಿದರೆ, ನಾವು ಸ್ವಾಗತಿಸುತ್ತೇವೆ. ಭಾರತ ಮಾತೆಗೂ ಖುಷಿ ಆಗುತ್ತದೆ. ಆದರೆ, ಹೀಗೆ ಘೋಷಣೆ ಕೂಗಲು ಕಾಂಗ್ರೆಸ್‌ನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ಕೇಳಬೇಕು. ಇದು ಏನನ್ನು ಬಿಂಬಿಸುತ್ತದೆ?

–ಬಸವರಾಜ ಬೊಮ್ಮಾಯಿ, ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT