ನಾಗಪಟ್ಟಣ (ಪಿಟಿಐ): ವಿರೋಧ ಪಕ್ಷದವರು ನನ್ನನ್ನು ‘ಕುಪ್ಪೈ (ಕಸ) ಅಯ್ಯರ್’ ಎಂದು ಕರೆಯುವುದರಿಂದ ನನಗೆ ಏನೂ ಬೇಸರವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಹೇಳಿದ್ದಾರೆ.

‘ನನಗೆ ಕಸದ ಅಯ್ಯರ್ ಎಂಬ ಬಿರುದು ನೀಡಿರುವುದು ತಿಳಿದಿದೆ. ಇದು ನನ್ನನ್ನು ನೋಯಿಸಲಿಲ್ಲ. ಬದಲಾಗಿ, ಇವು ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ನೀಡಿದ ಪ್ರಮಾಣಪತ್ರಗಳಾಗಿವೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ರಾಜ್ಯಸಭೆ ಸದಸ್ಯರೂ ಆದ ಮಣಿಶಂಕರ್ ಅಯ್ಯರ್, ಎಲ್ಲ ಗ್ರಾಮಗಳನ್ನು ಕಸದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಸ ಎತ್ತುವ ಯಂತ್ರ ಖರೀದಿಸಲು ಸಂಸದರ ಸ್ಥಳೀಯ ನಿಧಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿದ್ದರು. ಇದರಿಂದಾಗಿ ಅಯ್ಯರ್ ಅವರನ್ನು ಅವರ ವಿರೋಧಿಗಳು ಕುಪ್ಪೈ ಅಯ್ಯರ್ ಎಂದು ಗೇಲಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.