ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Election Results: ಮಹಿಳಾ ಅಭ್ಯರ್ಥಿಗಳ ಸೋಲು–ಗೆಲುವು

Published 4 ಜೂನ್ 2024, 15:30 IST
Last Updated 4 ಜೂನ್ 2024, 15:30 IST
ಅಕ್ಷರ ಗಾತ್ರ

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಒಟ್ಟು 797 ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅವರ ಪೈಕಿ ಹಲವರು ಖ್ಯಾತನಾಮರ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಟಿ ಕಂಗನಾ ರನೌತ್, ತ್ರಿಪುರಾದಲ್ಲಿ ಪೂರ್ವ ತ್ರಿಪುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃತಿ ಸಿಂಗ್‌ ದೇಬ್‌ಬರ್ಮಾ ಗೆಲುವು ಸಾಧಿಸಿದ್ದಾರೆ. 

ಉತ್ತರ ಪ್ರದೇಶ ಮಥುರಾದ ಬಿಜೆಪಿ ಅಭ್ಯರ್ಥಿ ನಟಿ ಹೇಮಾ ಮಾಲಿನಿ, ಹರ್‍ಯಾಣದ ಸಿರ್ಸಾದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸೆರ್ಜಾ, ದೆಹಲಿಯ ಬಿಜೆಪಿ ಅಭ್ಯರ್ಥಿ ಸುಶ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌, ಮಣಿಪುರದ ಮೈನ್‌ಪುರಿಯ ಡಿಂಪಲ್‌ ಯಾದವ್‌, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಪುತ್ರಿ ಮಿಸಾ ಭಾರ್ತಿ ಗೆಲುವು ಸಾಧಿಸಿದ್ದಾರೆ.  

ಲೋಕಸಭೆಯಲ್ಲಿ ಮೋದಿ ಸರ್ಕಾರವನ್ನು ಟೀಕಿಸುವುದರ ಮೂಲಕ ಗಮನ ಸೆಳೆದಿದ್ದ ಟಿಎಂಸಿಯ ಮಹುವಾ ಮೊಯಿತ್ರಾ ಅವರು ಪಶ್ಚಿಮ ಬಂಗಾಳದ ಕೃಷ್ಣ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಡಿಎಂಕೆಯ ಕನಿಮೊಳಿ ಕರುಣಾನಿಧಿ ಅವರು ತಮಿಳುನಾಡಿನ ತೂತ್ತುಕುಡಿಯಲ್ಲಿ ಎಐಡಿಎಂಕೆಯ ಶಿವಸಾಮಿ ವೇಲುಮಣಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶರದ್‌ ಪವಾರ್‌ ಪುತ್ರಿ, ಎನ್‌ಸಿಪಿ ಅಭ್ಯರ್ಥಿ ಸುಪ್ರಿಯಾ ಸುಳೆ ಅವರು ಅಜಿತ್‌ ಪವರ್‌ ಪತ್ನಿ ಸುನೇತ್ರಾ ಪವಾರ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.  

ತೆಲಂಗಾಣದ ಹೈದರಾಬಾದ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಅಸಾದುದ್ದೀನ್‌ ಒವೈಸಿ ವಿರುದ್ಧ ಪರಾಭವಗೊಂಡಿದ್ದಾರೆ. ಜಮ್ಮು ಕಾಶ್ಮೀರದ ರಾಜೌರಿ– ಅನಂತನಾಗ್‌ ಕ್ಷೇತ್ರದಿಂದ ಪಿಡಿಪಿಯ ಮೆಹಬೂಬಾ ಮುಫ್ತಿ ಗೆಲುವು ಸಾಧಿಸಿದ್ದಾರೆ. 

ಸೋತ ಪ್ರಮುಖ ಮಹಿಳಾ ಅಭ್ಯರ್ಥಿಗಳು: ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಉತ್ತರ ಪ್ರದೇಶದ ಸುಲ್ತಾನ್‌ಪುರಿಯಿಂದ ಸ್ಪರ್ಧಿಸಿದ್ದ ಮೇನಕಾ ಗಾಂಧಿ ಸೋಲನುಭವಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT