ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಕಣದಿಂದ ಹಿಂದೆ ಸರಿದ ಭುಜಬಲ್

Published 19 ಏಪ್ರಿಲ್ 2024, 16:10 IST
Last Updated 19 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಮುಂಬೈ: ಎನ್‌ಸಿಪಿ ಹಿರಿಯ ಮುಖಂಡ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಛಗನ್ ಭುಜಬಲ್ ತಾವು ನಾಸಿಕ್ ಲೋಕಸಭಾ ಕ್ಷೇತ್ರದ ಟಿಕೆಟ್ ಬಯಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಮೂಲಕ ಮಿತ್ರಪಕ್ಷ ಶಿವಸೇನಾದೊಂದಿಗೆ ಕ್ಷೇತ್ರದ ಟಿಕೆಟ್‌ಗಾಗಿ ನಡೆಯುತ್ತಿದ್ದ ಪೈಪೋಟಿಯನ್ನು ಅಂತ್ಯಗೊಳಿಸಿ, ಅದರ ಹಾದಿ ಸುಗಮಗೊಳಿಸಿದ್ದಾರೆ. 

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಚರ್ಚೆ ಮಾಡುವಾಗ ಸಮೀರ್ ಭುಜಬಲ್ ಹೆಸರು ಪ್ರಸ್ತಾಪವಾಯಿತು. ಆಗ, ನಾನು ಟಿಕೆಟ್ ಕೇಳದಿದ್ದರೂ, ಅಮಿತ್ ಶಾ ನನ್ನನ್ನು ಸ್ಪರ್ಧಿಸುವಂತೆ ಕೇಳಿದರು. ಆದರೆ, ಹಾಲಿ ಸಂಸದರು ತಮ್ಮ ಪಕ್ಷದವರಾದ್ದರಿಂದ ಕ್ಷೇತ್ರದ ಟಿಕೆಟ್ ತಮ್ಮ ಪಕ್ಷಕ್ಕೇ ಬೇಕು ಎಂದು ಮುಖ್ಯಮಂತ್ರಿ ಶಿಂದೆ ಒತ್ತಾಯಿಸಿದರು. ಗೊಂದಲ ನಿವಾರಿಸಲು ನಾನು ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT