ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ಗೆ ಗಾಂಜಾ–ಡ್ರಗ್ಸ್‌; ನನಗೆ ನೌಕರಿ–ಐಟಿ: TDP ಮುಖ್ಯಸ್ಥ ಚಂದ್ರಬಾಬು ನಾಯ್ಡು

Published 24 ಏಪ್ರಿಲ್ 2024, 13:04 IST
Last Updated 24 ಏಪ್ರಿಲ್ 2024, 13:04 IST
ಅಕ್ಷರ ಗಾತ್ರ

ಅಮಾದಲವಲಸ: ನನ್ನ ಬ್ರಾಂಡ್‌ಗಳು ಐಟಿ ಮತ್ತು ನೌಕರಿ. ಆದರೆ ವೈ.ಎಸ್.ಜಗನ್ ಮೋಹನ ರೆಡ್ಡಿ ಅವರ ಬ್ರಾಂಡ್‌ಗಳು ‘ಗಾಂಜಾ ಮತ್ತು ಡ್ರಗ್ಸ್‌’ ಎಂದು ತೆಲಗು ದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಾಹಿತಿ ತಂತ್ರಜ್ಞಾನ, ಶಿಕ್ಷಕರ ನೇಮಕಾತಿ ಮತ್ತು ಆಂಧ್ರಪ್ರದೇಶ ನಾಗರಿಕ ಸೇವಾ ಆಯೋಗ ನನ್ನ ಬ್ರಾಂಡ್‌ಗಳು. ಆದರೆ ಮುಖ್ಯಮಂತ್ರಿಯ ಬ್ರಾಂಡ್‌ಗಳು ಗಾಂಜಾ ಮತ್ತು ಡ್ರಗ್ಸ್‌’ ಎಂದು ಆರೋಪಿಸಿದ್ದಾರೆ.

‘ಜಗನ್‌ ಮೋಹನ ರೆಡ್ಡಿ ಅವರ ದಬ್ಬಾಳಿಕೆಯನ್ನು ಹತ್ತಿಕ್ಕಲು ರಾಜ್ಯದ ಜನರು ಸಜ್ಜಾಗಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಭ್ರಷ್ಟ ಹಾಗೂ ಆಡಳಿತ ಗೊತ್ತಿಲ್ಲದ ವ್ಯಕ್ತಿ. ಬಿಜೆಪಿ, ಜನಸೇನಾ ಮತ್ತು ಟಿಡಿಪಿ ಒಳಗೊಂಡ ಎನ್‌ಡಿಎ ಮೈತ್ರಿಕೂಟವು ರಾಜ್ಯದ ಹಿತ ಬಯಸಿ ಚುನಾವಣೆ ಎದುರಿಸುತ್ತಿದೆ’ ಎಂದಿದ್ದಾರೆ.

‘ಪೆನ್ನಾರ್ ಮತ್ತು ವಂಶಧಾರಾ ನದಿಗಳ ಜೋಡಣೆ ಮೂಲಕ ರಾಜ್ಯದ ಪ್ರತಿ ಎಕರೆ ಜಮೀನಿಗೂ ನೀರು ಪೂರೈಸಲಾಗುವುದು. ಇದರ ಕ್ರಿಯಾಯೋಜನೆ ಈಗಾಗಲೇ ಸಿದ್ಧಗೊಂಡಿದೆ. ಜತೆಗೆ ಬಾಕಿ ಉಳಿದಿರುವ ಪೊಲಾವರಂ ಯೋಜನೆಯ ಕಾಮಗಾರಿಯನ್ನು ಕೇಂದ್ರದ ನೆರವು ಪಡೆದು ಪೂರ್ಣಗೊಳಿಸಲಾಗುವುದು’ ಎಂದು ನಾಯ್ಡು ಭರವಸೆ ನೀಡಿದರು.

175 ಸ್ಥಾನದ ಆಂಧ್ರಪ್ರದೇಶ ವಿಧಾನಸಭೆಗೆ ಹಾಗೂ 25 ಸ್ಥಾನಗಳ ಲೋಕಸಭೆಗೆ ಮೇ 13ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT