ತ್ರಿಶ್ಶೂರ್ (ಕೇರಳ): ಕಳೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶ್ಶೂರ್ ಕ್ಷೇತ್ರದಿಂದ ಪರಾಭವಗೊಂಡು, ಈ ಬಾರಿಯೂ ಅದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿರುವ ನಟ ಹಾಗೂ ಬಿಜೆಪಿ ಮುಖಂಡ ಸುರೇಶ್ ಗೋಪಿ, ತಮ್ಮ ಬಳಿ ಒಟ್ಟು ₹12 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಎಂಟು ವಾಹನಗಳು, 1,025 ಗ್ರಾಂ. ಚಿನ್ನ ಸೇರಿ ₹ 4 ಕೋಟಿಯ ಚರಾಸ್ತಿ ಹಾಗೂ ಎರಡು ಕೃಷಿ ಭೂಮಿ, ಏಳು ಕೃಷಿಯೇತರ ಜಮೀನುಗಳು, ಏಳು ವಸತಿ ಸಮುಚ್ಛಯಗಳು ಸೇರಿದಂತೆ ₹8.59 ಕೋಟಿಯ ಸ್ಥಿರಾಸ್ತಿಗಳು ಇವೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ವಾಹನ ಸಾಲ, ಬ್ಯಾಂಕ್ನಿಂದ ಪಡೆದ ಸಾಲ ಸೇರಿದಂತೆ ₹61 ಲಕ್ಷ ಸಾಲ ಇದೆ ಎಂದೂ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ಅವರು ₹10 ಕೋಟಿ ಆಸ್ತಿ ಘೋಷಿಸಿದ್ದರು.

ಇವರ ವಿರುದ್ಧ ಎರಡು ಮೋಟಾರ್ ತೆರಿಗೆ ವಂಚನೆ ಪ್ರಕರಣಗಳು ಸೇರಿದಂತೆ ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.