ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಹಂತದ ಮತದಾನ: ಅಸ್ಸಾಂನ 5 ಲೋಕಸಭೆ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ

Published 28 ಮಾರ್ಚ್ 2024, 6:03 IST
Last Updated 28 ಮಾರ್ಚ್ 2024, 6:03 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಐದು ಲೋಕಸಭೆ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಏಪ್ರಿಲ್‌ 26ರಂದು ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಇಂದು (ಗುರುವಾರ) ಮಾರ್ಗಸೂಚಿ ಬಿಡುಗಡೆ ಮಾಡಿದೆ.

ನಾಗಾಂವ್, ದರ್ರಾಂಗ್‌–ಉದಲ್‌ಗುರಿ, ಕರೀಮ್‌ಗಂಜ್‌ ಹಾಗೂ ಮೀಸಲು ಕ್ಷೇತ್ರಗಳಾದ ದಿಫು (ಎಸ್‌ಟಿ), ಸಿಲ್ಚಾರ್‌ನಲ್ಲಿ (ಎಸ್‌ಸಿ) ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏಪ್ರಿಲ್‌ 4 ಕೊನೇ ದಿನವಾಗಿದೆ. 5ರಂದು ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಏಪ್ರಿಲ್‌ 8 ಕೊನೆಯ ದಿನವಾಗಿದೆ.

ಲೋಕಸಭೆಯ 14 ಸ್ಥಾನಗಳನ್ನು ಹೊಂದಿರುವ ಅಸ್ಸಾಂನಲ್ಲಿ ಏಪ್ರಿಲ್‌ 19, 26 ಹಾಗೂ ಮೇ 7ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.

ಕಾಜಿರಂಗ, ಜೊರ್ಹತ್‌, ದಿಬ್ರುಗಢ, ಸೋನಿತ್‌ಪುರ, ಲಖೀಂಪುರ್‌ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಹಾಗೂ ಗುವಾಹಟಿ, ಬರ್ಪೆಟ, ಕೊಕ್ರಾಝರ್‌, ಧುಬ್ರಿಯಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT