ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ದೇಶದಲ್ಲಿ ಬಿಜೆಪಿ ಕುಸಿತ ಕಂಡಿದೆ: ಜೈರಾಮ್‌ ರಮೇಶ್

Published 15 ಮೇ 2024, 10:47 IST
Last Updated 15 ಮೇ 2024, 10:47 IST
ಅಕ್ಷರ ಗಾತ್ರ

ರಾಂಚಿ: ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದರೆ ಇದೀಗ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣವಾಗಿ ಅಧಃಪತನ ಕಂಡಿದೆ. ಉಳಿದ ಭಾಗಗಳಲ್ಲಿ ಅರ್ಧಕ್ಕೆ ಕುಸಿದಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿರ್ಗಮಿಸಲಿರುವ ಪ್ರಧಾನಿ ಎಂದು ಉಲ್ಲೇಖಿಸಿದರು. ಲೋಕಸಭಾ ಚುನಾವಣೆಯ ಭಾಗವಾಗಿ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಬಿಜೆಪಿಗೆ ಹತಾಶೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ– ಮುಸ್ಲಿಂಮರ ನಡುವೆ ರಾಜಕೀಯ ಮಾಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇದೀಗ ಮೋದಿ ಗ್ಯಾರಂಟಿ ಕುಸಿದಿದೆ. 'ವಿಕಸಿತ್ ಭಾರತ್' ಕುರಿತು ಯಾವುದೇ ಚರ್ಚಯೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಜೂನ್‌ 4ರಂದು ಸುಳ್ಳಿನ ಮಹಾಮಾರಿಯನ್ನು ನಾವು( ಕಾಂಗ್ರೆಸ್‌) ತೊಡೆದು ಹಾಕುತ್ತೇವೆ. ಕಾಂಗ್ರೆಸ್‌ ಸರ್ಕಾರ ರಚನೆಗೊಂಡರೆ ದೇಶದಾದ್ಯಂತ ತ್ವರಿತಗತಿಯಲ್ಲಿ ಜಾತಿಗಣತಿಯನ್ನು ನಡೆಸುತ್ತೇವೆ. ಜಾತಿಗಣತಿಯು ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಪಾತ್ರಿನಿಧ್ಯ ಒದಗಿಸಲು ನೆರವಾಗಲಿದೆ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ 'ಇಂಡಿಯಾ' ಮೈತ್ರಿಕೂಟವನ್ನು ರಚಿಸಿದ್ದು, ಆ ಮೂಲಕ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT