ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 6ನೇ ಹಂತ | ಬಹಿರಂಗ ಪ್ರಚಾರ ಅಂತ್ಯ; 25ರಂದು ಮತದಾನ

Published 23 ಮೇ 2024, 13:50 IST
Last Updated 23 ಮೇ 2024, 13:50 IST
ಅಕ್ಷರ ಗಾತ್ರ

ಪಟ್ನಾ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಇದೇ ಮೇ 25 ರಂದು ನಡೆಯಲಿದ್ದು, 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಹಾರ (8 ), ಹರಿಯಾಣ (10),  ಜಮ್ಮು ಮತ್ತು ಕಾಶ್ಮೀರ (1), ಜಾರ್ಖಂಡ್‌ (4) ದೆಹಲಿ (7), ಒಡಿಶಾ (6), ಉತ್ತರಪ್ರದೇಶ (14) ಮತ್ತು ಪಶ್ಚಿಮ ಬಂಗಾಳ(8)ದಲ್ಲಿ ಮತದಾನ ಮತದಾನ ನಡೆಯಲಿದೆ. 

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌– ರಜೌರಿಯಲ್ಲಿ 3ನೇ ಹಂತದಲ್ಲಿ ಮುಂದೂಡಲಾಗಿದ್ದ ಚುನಾವಣೆಯನ್ನು ಈಗ 6ನೇ ಹಂತದಲ್ಲಿ ನಡೆಸಲಾಗುತ್ತಿದೆ.

ಶನಿವಾರ ಮತದಾನ ನಡೆಯಲಿರುವ 58 ಸ್ಥಾನಗಳಲ್ಲಿ, 2019 ರಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ಈ ಬಾರಿ ದೆಹಲಿ, ಹರಿಯಾಣ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಗೆಲ್ಲುವ ಭರವಸೆಯಲ್ಲಿ ಪಕ್ಷ ಇದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ ಒಂದು ಸ್ಥಾನವನ್ನು ಗೆದ್ದುಕೊಂಡಿತು, ಅದು ಉಪಚುನಾವಣೆಯಲ್ಲಿ ಸೋಲು ಕಂಡಿತ್ತು. ಇನ್ನುಳಿದಂತೆ ಬಿಎಸ್‌ಪಿ ಮತ್ತು ಬಿಜೆಡಿ ತಲಾ 4, ಜೆಡಿ(ಯು) ಮತ್ತು ತೃಣಮೂಲ ಕಾಂಗ್ರೆಸ್‌ ತಲಾ ಮೂರು, ಎಲ್‌ಜೆಪಿ, ಎಜೆಎಸ್‌ಯು ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು.

ಇಲ್ಲಿಯವರೆಗೆ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 543 ಕ್ಷೇತ್ರಗಳಲ್ಲಿ 428 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಕೊನೆಯ ಹಂತದ ಮತದಾನ ಜೂನ್ 1 ರಂದು ನಿಗದಿಯಾಗಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಸಂಬಲ್‌ಪುರದಿಂದ (ಒಡಿಶಾ) ಧರ್ಮೇಂದ್ರ ಪ್ರಧಾನ್ (ಬಿಜೆಪಿ),

ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ (ಬಿಜೆಪಿ) ಮತ್ತು ಕನ್ಹಯ್ಯಾ ಕುಮಾರ್ (ಕಾಂಗ್ರೆಸ್),

ಸುಲ್ತಾನ್‌ಪುರದಿಂದ ಮೇನಕಾ ಗಾಂಧಿ (ಬಿಜೆಪಿ),

ಅನಂತನಾಗ್-ರಾಜೌರಿ (ಜಮ್ಮು ಮತ್ತು ಕಾಶ್ಮೀರ)ದಿಂದ ಮೆಹಬೂಬಾ ಮುಫ್ತಿ (ಪಿಡಿಪಿ),

ತಮ್ಲುಕ್‌ನಿಂದ (ಪಶ್ಚಿಮ ಬಂಗಾಳ) ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ),

ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ (ಕರ್ನಾಲ್, ಹರಿಯಾಣ),

ನವೀನ್ ಜಿಂದಾಲ್ (ಕುರುಕ್ಷೇತ್ರ)

ರಾವ್ ಇಂದರ್‌ಜಿತ್ ಸಿಂಗ್ (ಗುರ್‌ಗಾಂವ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT