ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಾಮತಿ: ಇವಿಎಂ ಇಟ್ಟಿದ್ದೆಡೆ 45 ನಿಮಿಷ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಗಿತ

Published 13 ಮೇ 2024, 13:52 IST
Last Updated 13 ಮೇ 2024, 13:52 IST
ಅಕ್ಷರ ಗಾತ್ರ

ಪುಣೆ: ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಇಟ್ಟಿಟ್ಟ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್‌ ಆಗಿದ್ದು, ಏನೋ ತಪ್ಪು ನಡೆದಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎಸ್‌ಪಿ) ಸೋಮವಾರ ಆರೋಪಿಸಿದೆ. 

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭಾರತೀಯ ಆಹಾರ ನಿಗಮದ ಗೋದಾಮೊಂದರಲ್ಲಿ ಇವಿಎಂಗಳನ್ನು ಇರಿಸಲಾಗಿತ್ತು. ವಿದ್ಯುತ್ ಕಾಮಗಾರಿ ನಡೆದ ಕಾರಣದಿಂದಾಗಿ ಕ್ಯಾಮೆರಾದ ಕೇಬಲ್‌ ತೆಗೆಯಬೇಕಾಯಿತು. ಹೀಗಾಗಿ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಅಲ್ಪಾವಧಿ ಸ್ಥಗಿತಗೊಂಡಿದ್ದವು ಎಂದು ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ಬೆಳಿಗ್ಗೆ 10.30ರಿಂದ 11.15ರವರೆಗೆ  ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್ ಆಗಿದ್ದವು ಎಂದು, ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಅವರ ಚುನಾವಣಾ ಪ್ರತಿನಿಧಿಯಾದ ಲಕ್ಷ್ಮೀಕಾಂತ್ ಕೆ. ತಿಳಿಸಿದ್ದಾರೆ. 

‘ಸಿ.ಸಿ.ಟಿ.ವಿಗಳು ಸ್ವಿಚ್ ಆಫ್ ಆದ ಕುರಿತು ಪೊಲೀಸರ ಗಮನಕ್ಕೆ ತಂದೆವು. ಇಲ್ಲಿ ಇದ್ದವರು ತಾಂತ್ರಿಕ ಕಾರಣದ ಸ್ಪಷ್ಟನೆಯನ್ನು ನೀಡಿದರು. ಆದರೂ ನಾವು ಚುನಾವಣಾಧಿಕಾರಿಗೆ ಈ ಕುರಿತು ತಕರಾರು ಅರ್ಜಿ ಸಲ್ಲಿಸುತ್ತೇವೆ’ ಎಂದು ಲಕ್ಷ್ಮೀಕಾಂತ್ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT