ಅಸ್ಸಾಂನಲ್ಲಿ ಆಡಳಿತಾರೂಢ ಕಾಂಗ್ರೆಸ್ ಸೇರಿ ಬಿಜೆಪಿ, ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್, ಎಐಯುಡಿಎಫ್, ಎಜಿಪಿ, ಎಎಪಿ, ಎಸ್ಯುಸಿಐ, ಸಿಪಿಎಂ, ಎಐಎಫ್ಬಿ ಮತ್ತು ಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್ನ ಕೇಂದ್ರ ಸಚಿವರಾದ ರಾಣಿ ನರಹ್ ಮತ್ತು ಪವನ್ ಸಿಂಗ್ ಘಟೊವಾರ್, ಹಾಲಿ ಶಾಸಕ ಹಾಗೂ ಕೇಂದ್ರ ಮಾಜಿ ಸಚಿವ ಬಿಜೊಯ್ ಕೃಷ್ಣ ಹಂಡಿಕ್, ಮುಖ್ಯಮಂತ್ರಿ ತರುಣ್ ಗೊಗೊಯ್ ಪುತ್ರ ಗೌರವ್ ಗೊಗೊಯ್ ಸೇರಿದಂತೆ ಒಟ್ಟು 51 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ.